ಬ್ರಿಟನ್‌ ಚುನಾವಣೆಯಲ್ಲಿ ಸುನಕ್‌ ಪಕ್ಷಕ್ಕೆ ಸೋಲು: ಸಮೀಕ್ಷೆ

| Published : Apr 05 2024, 01:01 AM IST / Updated: Apr 05 2024, 03:56 AM IST

ಬ್ರಿಟನ್‌ ಚುನಾವಣೆಯಲ್ಲಿ ಸುನಕ್‌ ಪಕ್ಷಕ್ಕೆ ಸೋಲು: ಸಮೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಲಂಡನ್: ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮಾರ್ಚ್ 7 ಮತ್ತು 27 ರಂದು 18,761 ಬ್ರಿಟಿಷ್ ವಯಸ್ಕರನ್ನು ಯು-ಗವ್ ಎಂಬ ಸಂಸ್ಥೆ ಸಂದರ್ಶಿಸಿ ಈ ಸಮೀಕ್ಷೆ ನಡೆಸಿದೆ.

ಬ್ರಿಟನ್‌ನಲ್ಲಿ ಸಂಸತ್ತಿನಲ್ಲಿ ಬಹುಮತಕ್ಕೆ ಪಕ್ಷವು ಒಟ್ಟು 650 ಸ್ಥಾನಗಳ ಪೈಕಿ 326 ಸ್ಥಾನ ಪಡೆದುಕೊಳ್ಳಬೇಕು. ಆದರೆ ಲೇಬರ್ ಪಕ್ಷ ರಾಷ್ಟ್ರವ್ಯಾಪಿ 403 ಸ್ಥಾನ ಪಡೆವ ಸಾಧ್ಯತೆ ಇದೆ. ಕನ್ಸರ್ವೇಟಿವ್‌ ಕೇವಲ 155 ಸ್ಥಾನ ಗೆಲ್ಲಬಹುದು ಎಂದಿದೆ.ಈ

ಹಣದುಬ್ಬರವನ್ನು ಅರ್ಧಕ್ಕೆ ಇಳಿಸುವುದು, ರಾಷ್ಟ್ರೀಯ ಸಾಲ ಕಡಿಮೆ ಮಾಡುವುದು, ರಾಷ್ಟ್ರೀಯ ಆರೋಗ್ಯ ಸೇವೆ, ಅಕ್ರಮ ವಲಸಿಗರನ್ನು ನಿಲ್ಲಿಸುವುದು, ಆರ್ಥಿಕತೆ ಉತ್ತಮಗೊಳಿಸುವುದು, ವಲಸೆ ವೆಚ್ಚಗಳಲ್ಲಿನ ಹೆಚ್ಚಳ ಮತ್ತು ಕಠಿಣ ನಿರಾಶ್ರಿತರ ಗಡೀಪಾರು ಕಾನೂನುಗಳಂತಹ ವಿವಿಧ ಕ್ರಮಗಳು ಯಶಸ್ವಿಯಾಗಲಿಲ್ಲ. ಆದ್ದರಿಂದ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.