ಮಾಜಿ ಪ್ರಧಾನಿ ರಾಜೀವ್‌ ಹತ್ಯೆ ಕೇಸಿನ ಮೂವರು ದೋಷಿಗಳು ಲಂಕಾಕ್ಕೆ

| Published : Apr 04 2024, 01:08 AM IST / Updated: Apr 04 2024, 04:42 AM IST

ಮಾಜಿ ಪ್ರಧಾನಿ ರಾಜೀವ್‌ ಹತ್ಯೆ ಕೇಸಿನ ಮೂವರು ದೋಷಿಗಳು ಲಂಕಾಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಶ್ರೀಲಂಕಾದ ಮೂವರು ಬುಧವಾರ ತಮ್ಮ ತವರು ದೇಶ ಶ್ರೀಲಂಕಾಕ್ಕೆ ತೆರಳಿದರು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಶ್ರೀಲಂಕಾದ ಮೂವರು ಬುಧವಾರ ತಮ್ಮ ತವರು ದೇಶ ಶ್ರೀಲಂಕಾಕ್ಕೆ ತೆರಳಿದರು. 

ವಿ. ಮುರುಗನ್ ಅಲಿಯಾಸ್ ಶ್ರೀಕರನ್, ಎಸ್. ಜಯಕುಮಾರ್ ಮತ್ತು ಬಿ.ರಾಬರ್ಟ್ ಪಯಸ್ ವಿಮಾನದ ಮೂಲಕ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತೆರಳಿದರು. 2022ರ ನವೆಂಬರ್‌ನಲ್ಲಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 7 ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. 

ಆದರೆ ಕೆಲವೊಂದು ಕಾನೂನು ಪ್ರಕ್ರಿಯೆ ಪೂರ್ಣವಾಗದ ಕಾರಣ ಅವರು ಇಲ್ಲಿನ ಲಂಕಾ ನಿರಾಶ್ರಿತರ ಶಿಬಿರದಲ್ಲೇ ಉಳಿದುಕೊಂಡಿದ್ದರು. 1991ರ ಮೇ.21 ರಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಶ್ರೀಪೆರುಂಬದೂರ್‌ ಬಳಿ ನಿಷೇಧಿತ ಎಲ್‌ಟಿಟಿಇ ಸಂಘಟನೆ ಆತ್ಮಹತ್ಯಾ ಬಾಂಬರ್‌ ಮೂಲಕ ಕೊಲೆ ಮಾಡಲಾಗಿತ್ತು.