ರಾಷ್ಟ್ರೀಯ ಕುಸ್ತಿ: 2 ಬೆಳ್ಳಿ, 2 ಕಂಚು ಗೆದ್ದ ಕರ್ನಾಟಕ

| Published : Apr 17 2024, 01:21 AM IST

ಸಾರಾಂಶ

ಬಾಬುರಾವ್‌ ಸಿಂಧಿ ಹಾಗೂ ಜೀವನ್ ಬೆಳ್ಳಿ ಪದಕ ಗೆದ್ದರೆ, ವಿಠ್ಠಲ್ ಹನುಮಂತ ಕೆಂಪಣ್ಣನವರ್ ಹಾಗೂ ಮುತ್ತುರಾಜ್ ಕಂಚಿನ ಪದಕ ಜಯಿಸಿದರು.

ಬೆಂಗಳೂರು: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಅಂಡರ್‌-15 ಮತ್ತು ಅಂಡರ್‌-20 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕುಸ್ತಿಪಟುಗಳು 4 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ 97 ಕೆ.ಜಿ. ವಿಭಾಗದಲ್ಲಿ ಬಾಬುರಾವ್‌ ಸಿಂಧಿ ಹಾಗೂ 65 ಕೆ.ಜಿ. ವಿಭಾಗದಲ್ಲಿ ಜೀವನ್ ಬೆಳ್ಳಿ ಪದಕ ಗೆದ್ದಿದ್ದಾರೆ. 85 ಕೆ.ಜಿ. ವಿಭಾಗದಲ್ಲಿ ವಿಠ್ಠಲ್ ಹನುಮಂತ ಕೆಂಪಣ್ಣನವರ್ ಹಾಗೂ 44 ಕೆಜಿ ವಿಭಾಗದಲ್ಲಿ ಮುತ್ತುರಾಜ್ ಕಂಚಿನ ಪದಕ ಜಯಿಸಿದರು. ಪದಕ ವಿಜೇತರಿಗೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.ಯೂತ್‌ ಬಾಸ್ಕೆಟ್‌ಬಾಲ್‌: ರಾಜ್ಯ ವನಿತೆಯರಿಗೆ ಬೆಳ್ಳಿ

ಪುದುಚೇರಿ: ಇಲ್ಲಿ ನಡೆದ 38ನೇ ರಾಷ್ಟ್ರೀಯ ಯೂತ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಫೈನಲ್‌ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ಧ 60-65 ಅಂಕಗಳಿಂದ ಸೋಲನುಭವಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಾಜ್ಯದ ಪರ ಖುಶಿ ನವೀನ್‌ 14, ನಿಲಾಯ ರೆಡ್ಡಿ 14, ಅದಿತಿ ಸುಬ್ರಮಣ್ಯನ್‌ 13 ಅಂಕ ಗಳಿಸಿದರು.