ಕ್ಯಾಂಡಿಡೇಟ್ಸ್‌ ಚೆಸ್‌: ಜಂಟಿ ನಂ.1 ಸ್ಥಾನ ಕಾಯ್ದುಕೊಂಡ ಗುಕೇಶ್‌

| Published : Apr 17 2024, 01:21 AM IST

ಸಾರಾಂಶ

10ನೇ ಸುತ್ತಿನ ಪ್ರಜ್ಞಾನಂದ-ವಿದಿತ್‌ ಪಂದ್ಯ ಡ್ರಾಗೊಂಡಿತು. ಸತತ 4 ಸೋಲು ಕಂಡಿದ್ದ ಆರ್‌.ವೈಶಾಲಿ ಕೊನೆಗೂ ಗೆಲುವಿನ ಹಳಿಗೆ ಮರಳಿದ್ದಾರೆ.

ಟೊರೊಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 10ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ಅವರು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಸದ್ಯ ಇಬ್ಬರೂ ತಲಾ 6 ಅಂಕಗಳನ್ನು ಹೊಂದಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯಲ್ಲಿ ಇನ್ನು 4 ಸುತ್ತಿನ ಪಂದ್ಯಗಳು ಬಾಕಿಯಿವೆ.ಇದೇ ವೇಳೆ ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಪ್ರಜ್ಞಾನಂದ 5.5 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದರೆ, 5 ಅಂಕದೊಂದಿಗೆ ವಿದಿತ್‌ 6ನೇ ಸ್ಥಾನದಲ್ಲೇ ಬಾಕಿಯಾಗಿದ್ದಾರೆ.ಇದೇ ವೇಳೆ ಮಹಿಳಾ ವಿಭಾಗದಲ್ಲಿ ಸತತ 4 ಸೋಲು ಕಂಡಿದ್ದ ಆರ್‌.ವೈಶಾಲಿ ಕೊನೆಗೂ ಗೆಲುವಿನ ಹಳಿಗೆ ಮರಳಿದ್ದಾರೆ. ಅವರು ಬಲ್ಗೇರಿಯಾದ ಸಲಿಮೊವಾ ವಿರುದ್ಧ ಗೆದ್ದರೆ, ಕೊನೆರು ಹಂಪಿ ಅವರು ಚೀನಾದ ಝೊಂಗ್ಯಿ ಟಾನ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 4.5 ಅಂಕ ಹೊಂದಿರುವ ಕೊನೆರು 5ನೇ, 3.5 ಅಂಕ ಸಂಪಾದಿಸಿರುವ ವೈಶಾಲಿ 8ನೇ ಸ್ಥಾನಗಳಲ್ಲಿದ್ದಾರೆ.ಗ್ರೀಸ್‌ನಲ್ಲಿ ಬೆಳಗಿದ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿ

ಒಲಿಂಪಿಯಾ(ಗ್ರೀಸ್): ಒಲಿಂಪಿಕ್ಸ್ ಉಗಮ ಸ್ಥಳವಾಗಿರುವ ದಕ್ಷಿಣ ಗ್ರೀಸ್‌ನ ಒಲಿಂಪಿಯಾದಲ್ಲಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳಗಿಸಲಾಯಿತು. ಇದರೊಂದಿಗೆ ಬಹುನಿರೀಕ್ಷಿತ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿದೆ. ಕ್ರೀಡಾ ಜ್ಯೋತಿ ಇನ್ನು ಕೆಲ ದಿನಗಳ ಕಾಲ ಗ್ರೀಸ್‌ನಲ್ಲಿರಲಿದ್ದು, ಬಳಿಕ ವಿಶ್ವದ ವಿವಿಧ ದೇಶಗಳಿಗೆ ಪ್ರಯಾಣಿಸಲಿದೆ. ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.