ಕಾವೇರಿ ನೀರು ಬಿಡುಗಡೆ ಖಂಡಿಸಿ ಪ್ರತಿಭಟನೆ

| Published : Oct 07 2023, 12:15 AM IST

ಸಾರಾಂಶ

ಕಾವೇರಿ ನೀರು ಬಿಡುಗಡೆ ಖಂಡಿಸಿ ಪ್ರತಿಭಟನೆ
- ಭಾವಸಾರ ಕ್ಷತ್ರಿಯ ಮಂಡಳಿಯಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಫೋಟೋ- 6ಎಂವೈಎಸ್‌4- ಮೈಸೂರಿನ ಗಾಂಧಿ ಚೌಕದಲ್ಲಿ ಶುಕ್ರವಾರ ಭಾವಸಾರ ಕ್ಷತ್ರಿಯ ಸಮಾಜದ ಪದಾಧಿಕಾರಿಗಳು ಪ್ರತಿಭಟಿಸಿದರು. --- ಕನ್ನಡಪ್ರಭ ವಾರ್ತೆ ಮೈಸೂರು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಭಾವಸಾರ ಕ್ಷತ್ರಿಯ ಸಮಾಜದ ಪದಾಧಿಕಾರಿಗಳು ನಗರದ ಗಾಂಧಿಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಜನತೆಯ ತೆರಿಗೆ ಹಣದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲಾಗಿದೆ. ಮೊದಲು ನಮ್ಮ ರಾಜ್ಯಕ್ಕೆ ನೀರು ಹರಿಸಿ ನಂತರ ಉಳಿದ ನೀರನ್ನು ತಮಿಳುನಾಡಿಗೆ ಬಿಡಬೇಕು. ಆದರೆ ರಾಜ್ಯ ಸರ್ಕಾರವು ನಮಗೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಟ್ಟಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. ನಮ್ಮ ರಾಜ್ಯವೇ ಬರಪೀಡಿತವಾಗಿದೆ. ರಾಜ್ಯದ 195 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಸರಿಯಲ್ಲ ಎಂದು ಖಂಡಿಸಿದರು. ಕಾವೇರಿ ನೀರನ್ನು ಬಳಸಿಕೊಳ್ಳುವ ಮೊದಲ ಹಕ್ಕು ನಮ್ಮದು. ನಂತರ ತಮಿಳುನಾಡಿಗೆ ಬಿಡಬೇಕು. ನಮ್ಮ ರಾಜ್ಯದ ಸಂಕಷ್ಟ ಪರಿಗಣನೆಗೆ ತೆಗೆದುಕೊಳ್ಳದೆ ನೀರು ಹರಿಸಬೇಕು ಎಂಬ ಆದೇಶ ನೀಡಬಾರದು. ನಮ್ಮ ರಾಜ್ಯದ ಜನತೆಗೆ ಕುಡಿಯಲು ನೀರು ಮತ್ತು ರೈತರಿಗೆ ಬೆಳೆಯಲು ನೀರಿಲ್ಲವಾದ್ದರಿಂದ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಆರ್.ವಿ. ಶಿವಾಜಿ ರಾವ್, ಕಾರ್ಯದರ್ಶಿ ರಾಕೇಶ್‌ ಮೊದಲಾದವರು ಇದ್ದರು.