ಚಿಕ್ಕಬಳ್ಳಾಪುರ ಕ್ಷೇತ್ರದ ವಿವಿಧೆಡೆ ಅಭ್ಯರ್ಥಿ ರಕ್ಷಾ ರಾಮಯ್ಯ ಭೇಟಿ

| Published : Apr 27 2024, 02:01 AM IST / Updated: Apr 27 2024, 04:27 AM IST

ಚಿಕ್ಕಬಳ್ಳಾಪುರ ಕ್ಷೇತ್ರದ ವಿವಿಧೆಡೆ ಅಭ್ಯರ್ಥಿ ರಕ್ಷಾ ರಾಮಯ್ಯ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿದರು.

  ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಬೆಳ್ಳಂಬೆಳಗ್ಗೆ ಗೋಕುಲದಲ್ಲಿ ಯೋಗಿ ನಾರಾಯಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತದಾನ ಮಾಡಿ ಕ್ಷೇತ್ರ ಸಂಚಾರ ಆರಂಭಿಸಿದರು.

ದೊಡ್ಡಬಳ್ಳಾಪುರ, ಗೊಲ್ಲಹಳ್ಳಿ ತಾಂಡ, ನೆಲಮಂಗಲ, ಚಿಕ್ಕಬಳ್ಳಾಪುರ ಮತ್ತಿತರೆ ಪ್ರದೇಶಗಳಿಗೆ ತೆರಳಿ ಸುಗಮ ಮತದಾನ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡರು.

ಪಕ್ಷದ ಕಾರ್ಯಕರ್ತರು, ಮತದಾರರು, ಯುವ ಜನಾಂಗ, ಮಹಿಳೆಯರು, ಹಿರಿಯ ನಾಗರಿಕರೊಂದಿಗೆ ಚರ್ಚಿಸಿದರು. ಮತದಾರರು ಫೋಟೋ ಹಾಗೂ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಚುನಾವಣೆ ಎನ್ನುವುದು ಸಂವಿಧಾನದ ಹಬ್ಬ. ಇದೊಂದು ಉತ್ಸವ, ಇದನ್ನು ಜನೋತ್ಸವವಾಗಿ ಮಾರ್ಪಾಡು ಮಾಡುವ ಜವಾಬ್ದಾರಿ ಮತದಾರರ ಕೈಯಲ್ಲಿದೆ. ಸಂವಿಧಾನ ರಕ್ಷಣೆಗಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು ಎಂದರು.

‘ಚಿಕ್ಕಬಳ್ಳಾಪುರದಲ್ಲಿ ಮತದಾನ ಹೆಚ್ಚಳಕ್ಕೆ ಜನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಮತದಾರರಿಗೆ ವ್ಯವಸ್ಥಿತ ಶಿಕ್ಷಣ ನೀಡುವ ಉದ್ದೇಶದಿಂದ ಮತದಾನ ಕೇಂದ್ರವನ್ನು ಸಿಂಗರಿಸಿದ ರೀತಿ ನೋಡಿ ಸಂತಸವಾಯಿತು. ರೇಷ್ಮೆ ಮತಗಟ್ಟೆ ಎಂದು ಬ್ಯಾನರ್ ಹಾಕಿ ’ಪ್ರತಿಶತ ಮತದಾನ ಇದುವೇ ನಮ್ಮ ವಾಗ್ದಾನ’ ಎನ್ನುವ ಶ್ರೀರ್ಷಿಕೆಯಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ಟೀಪ್ ಸಮಿತಿ ತಮ್ಮ ಕರ್ತವ್ಯಪ್ರಜ್ಞೆ ಮೆರೆದಿದೆ’ ಎಂದರು.