ಕಷ್ಟದಲ್ಲಿದ್ದಾಗ ಬರ್ಲಿಲ್ಲ, ವೋಟ್ ಕೇಳಾಕ್ ಬರ್ತಾರಾ: ಸಂಯುಕ್ತಾ ಪಾಟೀಲ

| Published : May 06 2024, 12:41 AM IST

ಸಾರಾಂಶ

ರಾಜ್ಯದಲ್ಲಿ ಭೀಕರ ಬರ ಇದ್ದಾಗ, ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಒಮ್ಮೆಯೂ ಬರಲಿಲ್ಲ. ಆದರೆ, ಯಾವುದೇ ಚುನಾವಣೆ ಇರಲಿ ವೋಟ್ ಕೇಳಲು ಬರುವುದನ್ನು ಮಾತ್ರ ತಪ್ಪಿಸಲ್ಲ ಎಂದು ಸಂಯುಕ್ತಾ ಪಾಟೀಲ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಭೀಕರ ಬರ ಇದ್ದಾಗ, ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಒಮ್ಮೆಯೂ ಬರಲಿಲ್ಲ. ಆದರೆ, ಯಾವುದೇ ಚುನಾವಣೆ ಇರಲಿ ವೋಟ್ ಕೇಳಲು ಬರುವುದನ್ನು ಮಾತ್ರ ತಪ್ಪಿಸಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಾಗ್ದಾಳಿ ನಡೆಸಿದರು.

ರನ್ನ ಬೆಳಗಲಿಯಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿಗಳು ಕರ್ನಾಟಕಕ್ಕೆ ಬಂದಿದ್ದಾರೆ ಎಂದರೆ ಚುನಾವಣೆ ಇದೆ ಎಂದೇ ಅರ್ಥ. ಏಕೆಂದರೆ ಹತ್ತು ವರ್ಷಗಳ ಅವರ ಅಧಿಕಾರದ ಅವಧಿಯಲ್ಲಿ ಎಂದೂ ಕರ್ನಾಟಕದ ಜನರ ಕಷ್ಟ ಕೇಳಲು ಬಂದಿಲ್ಲ, ಚುನಾವಣೆ ಪ್ರಚಾರಕ್ಕೆ ಮಾತ್ರ ತಪ್ಪಿಸಿಲ್ಲ ಎಂದು ಟೀಕಿಸಿದರು.

ಕೊರೋನಾ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಆದರೂ ಪಕ್ಷ ಸಂಕಷ್ಟದಲ್ಲಿರುವವರ ನೆರವಿಗೆ ಬಂದಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿದ್ದ ಜನರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಬಸ್ ವ್ಯವಸ್ಥೆ ಮಾಡಿ ಎಂದು ಕೆಎಸ್ಆರ್‌ಟಿಸಿಗೆ ₹ 1 ಕೋಟಿ ಚೆಕ್ ನೀಡಿತ್ತು. ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದರು. ಕಷ್ಟಕಾಲದಲ್ಲಿ ನಿಮ್ಮ ಕೈ ಹಿಡಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ನೀವು ಮತನೀಡುವ ಮೂಲಕ ಬಲ ತುಂಬಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಸಿದ್ದುಕೊಣ್ಣೂರ ಮಾತನಾಡಿದರು.ಪಕ್ಷದ ಹಲವು ಮುಖಂಡರು ವೇದಿಕೆಯಲ್ಲಿದ್ದರು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಬಡತನ ನಿವಾರಣೆಗೆ 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ಮನಮೋಹನ್ ಸಿಂಗ್ ರೈತರ ಕೃಷಿ ಸಾಲ ಮನ್ನಾ ಮಾಡಿದರು. ರಾಜೀವಗಾಂಧಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ಕಾರಣರಾದರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀತಿ ಜಾರಿಗೆ ತಂದರು. ಹತ್ತು ವರ್ಷ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಶ್ರೀಮಂತ ಉದ್ಯಮಿಗಳ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೇ ಸಾಧನೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೊಟ್ಟಿದ್ದು ಚೊಂಬು.

- ಆರ್.ಬಿ. ತಿಮ್ಮಾಪುರ ಸಚಿವ