ಸಂವಿಧಾನ ರಕ್ಷಣೆ ಬಿಜೆಪಿಯಿಂದ ಮಾತ್ರ

| Published : Apr 23 2024, 12:57 AM IST

ಸಾರಾಂಶ

ಮೋದಿಯವರು ಅಂಬೇಡ್ಕರ್‌ ನಡೆದಾಡಿದ ಐದು ಸ್ಥಳವನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮೂಲ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡಿ, ದೇಶದ ಅಭಿವೃದ್ಧಿ ಜೊತೆಗೆ ಸಂವಿಧಾನದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

ಸೋಮವಾರ ನಗರದ 3ನೇ ವಾರ್ಡ್‌ನಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರದ ಪಾದಯಾತ್ರೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದ ಅವರು, 70 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ ಬಡವರನ್ನು ಬಡವರನ್ನಾಗಿಟ್ಟಿದೆ. ಇದೆ ಅವರ ದೊಡ್ಡ ಸಾಧನೆ. ಅಟಲ್‌ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂದು ನುಡಿದರು.

ಸಂವಿಧಾನ ರಚಿಸಿದ ಅಂಬೆಡ್ಕರ್‌ ಅವರನ್ನು ಕಾಂಗ್ರೆಸ್‌ ಹೀನಾಯವಾಗಿ ನಡೆಸಿಕೊಂಡಿತು. ಆದರೆ, ಮೋದಿಯವರು ಅಂಬೇಡ್ಕರ್‌ ನಡೆದಾಡಿದ ಐದು ಸ್ಥಳವನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದರು. ಸಮಗ್ರ ಅಭಿವೃದ್ಧಿ ಜೊತೆಗೆ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅನ್ನುವಂತೆ ಎಲ್ಲ ವರ್ಗದವರ ಏಳಿಗೆಗೆ ಮೋದಿ ಶ್ರಮಿಸಿದ್ದಾರೆ. ಮೋದಿ ಬಗ್ಗೆ ಮಾತನಾಡು ನೈತಿಕ ಹಕ್ಕು ಕಾಂಗ್ರೆಸ್‌ಗಿಲ್ಲ. ಜನ ಅರ್ಥ ಮಾಡಿಕೊಂಡು ದೇಶದ ಸಮಗ್ರ ಅಭಿವೃದ್ಧಿ ಭದ್ರತೆಗಾಗಿ ಬಿಜೆಪಿಯನ್ನು ಬೆಂಬಲಿಸಿ ಮತ ನೀಡಿ ಎಂದು ವಿನಂತಿಸಿದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನೆ ಮನೆಗೆ ತೆರಳಿ ಮತಯಾಚಿಸಿದರು. ಮುಂದಿನ ಪೀಳಿಗೆಗೆ ಬೇಕಾಗುವ ಭಾರತದ ಭವ್ಯ ಭವಿಷ್ಯದ ಬಗ್ಗೆ ಬಿಜೆಪಿ ತನ್ನದೆಯಾದ ಕನಸು ಹೊಂದಿದೆ. ಪ್ರಧಾನಿ ಮೋದಿಯವರಿಂದ ಭವ್ಯ ಭಾರತದ ಕನಸು ನನಸಾಗಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

3ನೇ ವಾರ್ಡಿನ ಶ್ರೀ ನಾಗಪ್ಪನ ಕಟ್ಟಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ, ಎಕ್ಸ್ಟೆಂಶನ್‌ ಏರಿಯಾ, ವಿನಾಯಕ ನಗರ ಕಾಲೋನಿ, ಲಕ್ಷ್ಮೀ ನಗರ, ವಿನಾಯಕ ನಗರ, ಶಾಂತಿ ನಗರದಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು. ಈ ಅಭ್ಯರ್ಥಿ ಗದ್ದಿಗೌಡರಿಗೆ ವಿಜಯಮಾಲೆ ಹಾಕಿ, ಆರತಿಮಾಡಿ, ಶಾಲೂ ಹೊದಿಸಿ, ಸಿಹಿ ಹಂಚಿ ಗೆದ್ದುಬನ್ನಿ ಎಂದು ಜನರು ಹಾರೈಸಿದರು.

ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯೆ ಶಿವಲೀಲಾ ಪಟ್ಟಣಶೆಟ್ಟಿ, ಬಸವರಾಜ ಯಂಕಂಚಿ, ಗುರುಬಸವ ಸೂಳಿಬಾಬಿ, ಬಸವರಾಜ ಅಥಣಿ, ಪ್ರಕಾಶ ರೇವಡಿಗಾರ, ಮಹೇಶ ಅಂಗಡಿ, ಬಸವರಾಜ ಅಥಣಿ, ವಿಜಯ ಅಂಗಡಿ, ಶಿವಾನಂದ ಟವಳಿ, ಆನಂದ ದರೆನ್ನವರ, ಶ್ರೀಧರ ಶಹಾಪುರ, ಬಸವರಾಜ ಹುನಗುಂದ, ನಾಗರತ್ನಾ ಹೆಬ್ಬಳ್ಳಿ, ಸ್ಮೀತಾ ಪವಾರ, ಅನಿತಾ ಸರೋದೆ, ಶೋಭಾ ರಾವ್‌. ಸವಿತಾ ಲಂಕ್ಕೆನ್ನವರ, ಬಸವರಾಜ ಅವರಾದಿ, ಮುತ್ತಣ್ಣ ಬೆಣ್ಣೂರ, ಯಲ್ಲಪ್ಪ ನಾರಾಯಣಿ, ಚಂದ್ರು ಸರೂರ, ಚಂದ್ರು ರಾಮವಡಗಿ, ಅನಿಲ ನಾಯಕ, ವಿಲಾಸ ವಂದಕುದರಿ, ಸುರೇಶ ಮಜ್ಜಗಿ, ಮಾನೇಶ ಅಂಬಿಗೇರ, ಅಶೋಕ ಪವಾರ, ಶಂಕರ ಕದಂ, ಬಂದೆನವಾಜ್ ದೋನಿ, ಪಾಲಕ್ಷಿ ಕಟ್ಟಿಮಠ, ಇಂಗಳಿಗಿ ಸರ, ಬವಸರಾಜ ಸೋರಗಾಂವಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.