ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸಲು ಮತ ನೀಡಿ

| Published : Apr 27 2024, 01:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಡಾ.ಬಿ.ಆರ್.ಅಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಪರಾಜಯಗೊಳಿಸಿದ ಕಾಂಗ್ರೆಸ್ ಪಕ್ಷ ಸೋಲಿಸಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಮೋದಿಯವರಿಗೆ ಮತ ನೀಡಿ ಮತ್ತೊಮ್ಮೆ ಪ್ರಧಾನಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕೋರಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಡಾ.ಬಿ.ಆರ್.ಅಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಪರಾಜಯಗೊಳಿಸಿದ ಕಾಂಗ್ರೆಸ್ ಪಕ್ಷ ಸೋಲಿಸಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಮೋದಿಯವರಿಗೆ ಮತ ನೀಡಿ ಮತ್ತೊಮ್ಮೆ ಪ್ರಧಾನಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕೋರಿದರು.

ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲಾ ಹಾಗೂ ಮಂಡಲ ವತಿಯಿಂದ ಆಯೋಜಿಸಿದ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದ 60 ವರ್ಷಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡದೇ ಅವರಿಗೆ ಅನ್ಯಾಯ ಮಾಡಿದೆ. ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಿ ಮತಗಳಿಸಲು ಹುನ್ನಾರ ನಡೆಸಿದೆ ಎಂದು

ಕಿಡಿಕಾರಿದದರು.ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಬೇಡ್ಕರ್‌ ಅವರು ವಾಸಿಸುವ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದರ ಜೊತೆಗೆ ಡಾ.ಅಮೆದ್‌ಬ್ಕರ್ ಜನ್ಮಸ್ಥಳವಾದ ಮೊವ್‌ನಲ್ಲಿ ಜನಂ ಭೂಮಿ, ಯುಕೆಯಲ್ಲಿ ಓದುತ್ತಿದ್ದಾಗ ಲಂಡನ್‌ನಲ್ಲಿ ತಂಗಿದ್ದ ಸ್ಥಳ, ನಾಗ್ಪುರದ ದೀಕ್ಷಾ ಭೂಮಿ, ಬೌದ್ಧ ಧರ್ಮವನ್ನು ಸ್ವೀಕರಿಸಿದ ಮಹಾಪರಿನಿರ್ವಾಣವನ್ನು ಸ್ಮರಿಸುತ್ತಾ ಪಂಚತೀರ್ಥ ಎಂಬ ಪದವನ್ನು ಸೃಷ್ಟಿಸಿದರು. ದೆಹಲಿಯಲ್ಲಿ ಸ್ಥಳ ಮತ್ತು ಮುಂಬೈನಲ್ಲಿ ಚೈತ್ಯ ಭೂಮಿ. ಸರ್ಕಾರವು 07 ಡಿಸೆಂಬರ್ 2017 ರಂದು ದೆಹಲಿಯ ಜನಪಥ್, 15, ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸಮರ್ಪಿಸಿತು. ಜನ್ಮಸ್ಥಳವನ್ನು ಜನನ ಭೂಮಿ, ಶಿಕ್ಷಣದ ಸ್ಥಳವನ್ನು ಶಿಕ್ಷಾ ಭೂಮಿ, ಬೌದ್ಧ ಧರ್ಮಕ್ಕೆ ದತ್ತು ಸ್ವೀಕಾರದ ಸ್ಥಳವನ್ನು ದೀಕ್ಷಾ ಭೂಮಿ, ಅವಸಾನದ ಸ್ಥಳವನ್ನು ಮಹಾಪರಿನಿರ್ವಾಹಣ ಭೂಮಿ, ದಹನ ಸ್ಥಳವನ್ನು ಚೈತ್ಯ ಭೂಮಿಯನ್ನಾಗಿ ಅಭಿವೃದ್ಧಿ ಪಡೆಸಿದ ಪ್ರಧಾನಿ ಮೋದಿಯವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರ ಮತ್ತು ಉಸ್ತುವಾರಿ ಪಿ.ಎಚ್ ಪೂಜಾರ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ,ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಾಬಾಸಾಹೇಬ ಕೆಂಚನ್ನವರ, ಜಿಲ್ಲಾ ಎಸ್ಸಿ ಮೋರ್ಚಾ ಹಾಗೂ ಮಂಡಲ ಪದಾಧಿಕಾರಿಗಳು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.25ಸಿಕೆಡಿ3--------------------------

ಬಾಕ್ಸ್..

ಕಾಕತಿ, ಹೋನಗಾದಲ್ಲಿ ಬಸವಪ್ರಸಾದ ಮತಯಾಚನೆಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಕಾಕತಿ, ಹೋನಗಾ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಬಸವಜ್ಯೋತಿ ಯೂಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಚಾರ ಸಭೆ ಕೈಗೊಂಡು ಮತಯಾಚನೆ ಮಾಡಿದರು. ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಂಪೂರ್ಣ ತಯಾರಿ ಮೋದಿಜೀ ಸರ್ಕಾರ ಮಾಡಿದೆ. ಇದಕ್ಕಾಗಿ ನಿವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಿ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಾಗೂ ಚಿಕ್ಕೋಡಿಗೆ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ, ಸ್ಥಳೀಯ ಮುಖಂಡರು,ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

25ಸಿಕೆಡಿ5

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಕಾಕತಿ ಗ್ರಾಮದಲ್ಲಿ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಮಾತನಾಡಿದರು. ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ ಇದ್ದರು.

--------------ಬಾಕ್ಸ್‌...

ಕ್ಷೇತ್ರದ ಅಭಿವೃದ್ಧಿಗೆ ಜೊಲ್ಲೆ ಗೆಲ್ಲಿಸಿ: ಕವಟಗಿಮಠ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಾರ್ಥವಾಗಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿ ಅವರನ್ನು 3 ಬಾರಿ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸಿ ದೇಶದ ರಕ್ಷಣೆಗೆ ಬಿಜೆಪಿ ಬಿಟ್ಟರೆ ನಮ್ಮ ಮುಂದೆ ಯಾವುದೇ ಬೇರೆ ಆಯ್ಕೆಗಳಿಲ್ಲ ಎಂದರು.

ಮೋದಿಜಿ ಅವರು ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು ದೇಶದ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯ ಜೀವನ ಕಲ್ಪಿಸಿಕೊಡುತ್ತಿದೆ. ಯಾವುದೇ ಆಮಿಷಕ್ಕೊಳಗಾಗದೇ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಕೋರಿದರು.

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಕ್ಷೇತ್ರದಲ್ಲಿ ಮೂಲಸೌಕರ್ಯ ರಸ್ತೆ ಹಾಗೂ ಹಲವಾರು ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸಿದ್ದೇನೆ. ನಿಮ್ಮೆಲ್ಲರ ಕಷ್ಟ-ಸುಖಗಳಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ. ಮುಂದೆಯೂ ಇರಲಿದ್ದೇನೆ. ಎಲ್ಲರೂ ನನಗೆ ಮತ್ತೊಮ್ಮೆ ಎಲ್ಲರ ಸೇವೆ ಮಾಡುವ ಅವಕಾಶ ನೀಡಿ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ರಾಜು ಶ್ರೀಪನ್ನವರ, ಕಿರಣ ಪಾಟೀಲ, ವಿನಾಯಕ ಪಾಟೀಲ, ಪವನ ಮಹಾಜನ, ಸಂಜಯ ಪಾಟೀಲ, ಸೋಮಶೇಖರ ಸರವಾಡೆ, ಅಭಿಷೇಕ ಪಾಟೀಲ, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.