ಶಿವಮೊಗ್ಗ : ಬಿ.ವೈ.ರಾಘವೇಂದ್ರ ₹74 ಕೋಟಿ ಒಡೆಯ

| Published : Apr 19 2024, 01:11 AM IST / Updated: Apr 19 2024, 11:44 AM IST

BY Raghavendra

ಸಾರಾಂಶ

ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದ ಜೊತೆಗೆ ಒಟ್ಟು ₹73.71 ಕೋಟಿ ಮೌಲ್ಯದ ಆಸ್ತಿ ವಿವರ ಸಲ್ಲಿಸಿದ್ದಾರೆ.

  ಶಿವಮೊಗ್ಗ :  ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದ ಜೊತೆಗೆ ಒಟ್ಟು ₹73.71 ಕೋಟಿ ಮೌಲ್ಯದ ಆಸ್ತಿ ವಿವರ ಸಲ್ಲಿಸಿದ್ದಾರೆ.

ರಾಘವೇಂದ್ರ ₹55.85 ಕೋಟಿ ಮತ್ತು ಪತ್ನಿ ತೇಜಸ್ವಿನಿಯವರ ಹೆಸರಿನಲ್ಲಿ ₹17.86 ಕೋಟಿ ಆಸ್ತಿ ಇದೆ ಎಂದು ತಮ್ಮ ಅಫಿಡೆವಿಟ್‌ ನಲ್ಲಿ ಘೋಷಿಸಿಕೊಂಡಿದ್ದಾರೆ.

ರಾಘವೇಂದ್ರ ಅವರ ಬಳಿ ₹31.09 ಕೋಟಿ ಚರಾಸ್ತಿ, ₹24.76 ಕೋಟಿ ಸ್ಥಿರಾಸ್ತಿ ಹಾಗೂ ಅವರ ಪತ್ನಿ ತೇಜಸ್ವಿನಿಯವರ ಬಳಿ ₹2.95 ಕೋಟಿ ಚರಾಸ್ತಿ ಮತ್ತು ₹14.90 ಕೋಟಿ ಸ್ಥಿರಾಸ್ತಿ ಇದೆ.

ರಾಘವೇಂದ್ರ ಅವರು ವಿವಿಧ ಕಂಪನಿ, ಬಾಂಡ್‌, ಜೀವವಿಮೆ ಸೇರಿದಂತೆ ಹಲವು ಕಡೆ ಒಟ್ಟು ₹7.71 ಕೋಟಿ ಹಾಗೂ ಇವರ ಪತ್ನಿ ತೇಜಸ್ವಿನಿಯವರು ₹7 ಕೋಟಿ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 13 ಉಳಿತಾಯ ಖಾತೆಗಳಲ್ಲಿ ₹98,01,123 ಠೇವಣಿ ಹೊಂದಿದ್ದಾರೆ. ರಾಘವೇಂದ್ರ 15 ಕಂಪನಿಗಳಲ್ಲಿ ₹7.68 ಕೋಟಿ ಹೂಡಿಕೆ ಮಾಡಿದ್ದಾರೆ. ತೇಜಸ್ವನಿ ಆರು ಕಂಪನಿಗಳಲ್ಲಿ ₹1.22 ಕೋಟಿ ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್‌ ಫಂಡ್ಸ್‌, ಬಾಂಡ್‌ಗಳಲ್ಲಿ ರಾಘವೇಂದ್ರ ₹2.22 ಕೋಟಿ, ತೇಜಸ್ವನಿ ₹30 ಸಾವಿರ ಹೂಡಿಕೆ ಮಾಡಿದ್ದಾರೆ.

ಅವರ ಬಳಿ ₹98.33 ಲಕ್ಷ ಮೌಲ್ಯದ 1021.50 ಗ್ರಾಂ ಚಿನ್ನ, 114.26 ಕ್ಯಾರೆಟ್‌ ವಜ್ರ, 8.6 ಕೆ.ಜಿ ಬೆಳ್ಳಿ ಮತ್ತು 42 ಬೆಲೆಬಾಳುವ ಹರಳು ಇದೆ. ಪತ್ನಿ ತೇಜಸ್ವಿನಿ ಬಳಿ ₹1.13 ಕೋಟಿ ಮೌಲ್ಯದ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್‌ ವಜ್ರ, 5.1 ಕೆ.ಜಿ ಬೆಳ್ಳಿ ಇದೆ.

ರಾಘವೇಂದ್ರ ಹಾಗೂ ಪತ್ನಿ ಹೆಸರಿನಲ್ಲಿ ₹1.32 ಕೋಟಿ ಮೌಲ್ಯದ 11.33 ಎಕರೆ ಕೃಷಿ ಜಮೀನು, ವಿವಿಧೆಡೆ ₹26.07 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ.

ರಾಘವೇಂದ್ರ ಅವರು ಸೋದರ ವಿಜಯೇಂದ್ರ, ಪತ್ನಿ ತೇಜಸ್ವಿನಿ, ಪುತ್ರರಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ ₹20.39 ಕೋಟಿ ಸಾಲ ನೀಡಿದ್ದಾರೆ. ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.