ವಿಜಯನಗರ: ಮತದಾನದಲ್ಲಿ ಭಾರೀ ಹೆಚ್ಚಳ!

| Published : May 09 2024, 01:00 AM IST

ಸಾರಾಂಶ

ಜಿಲ್ಲೆಯಲ್ಲಿ 5,62,166 ಪುರುಷ ಮತದಾರರು, 5,66,527 ಮಹಿಳಾ ಮತದಾರರು ಮತ್ತು 142 ಇತರ ಮತದಾರರು ಸೇರಿ ಒಟ್ಟು 11,28,835 ಮತದಾರರಿದ್ದಾರೆ. ಈ ಪೈಕಿ 4,31,477 ಪುರುಷ ಮತದಾರರು, 4,18,207 ಮಹಿಳಾ ಮತದಾರರು, 34 ಇತರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 8,49,718 ಮತದಾರರು ಮತ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯ ಮತದಾರರು ಈ ಬಾರಿ ರಣಬಿಸಿಲನ್ನು ಲೆಕ್ಕಿಸದೇ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಜಿಲ್ಲೆಯಲ್ಲಿ ಶೇ. 75.27ರಷ್ಟು ಮತದಾನ ದಾಖಲಾಗಿದೆ. ಈ ಬಾರಿ ಮತದಾನ ಜಾಗೃತಿ ಅಭಿಯಾನದ ಎಫೆಕ್ಟ್‌ನಿಂದ ಇಷ್ಟೊಂದು ಮತದಾನವಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ಗುಳೆ ಹೋದವರ ಮೇಸ್ತ್ರಿಗಳನ್ನು ಕೂಡ ಜಿಲ್ಲಾಡಳಿತ ಸಂಪರ್ಕ ಮಾಡಿ, ಮತದಾನ ಜಾಗೃತಿ ಮಾಡಿದ ಫಲವಾಗಿ ಈ ಸಲ ಮತದಾನದಲ್ಲಿ ಹೆಚ್ಚಳ ಕಂಡು ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 71.63ರಷ್ಟು ಮತದಾನ ದಾಖಲಾಗಿತ್ತು.

ಜಿಲ್ಲೆಯಲ್ಲಿ 5,62,166 ಪುರುಷ ಮತದಾರರು, 5,66,527 ಮಹಿಳಾ ಮತದಾರರು ಮತ್ತು 142 ಇತರ ಮತದಾರರು ಸೇರಿ ಒಟ್ಟು 11,28,835 ಮತದಾರರಿದ್ದಾರೆ. ಈ ಪೈಕಿ 4,31,477 ಪುರುಷ ಮತದಾರರು, 4,18,207 ಮಹಿಳಾ ಮತದಾರರು, 34 ಇತರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 8,49,718 ಮತದಾರರು ಮತ ಹಾಕಿದ್ದಾರೆ.

ಹಡಗಲಿ ಕ್ಷೇತ್ರ

ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. 75.02ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 99,144-ಪುರುಷ, 97,701-ಮಹಿಳಾ ಮತದಾರರು ಹಾಗೂ 13 ಇತರ ಮತದಾರರು ಸೇರಿದಂತೆ ಒಟ್ಟು 218 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,96,858 ಮತದಾರರ ಪೈಕಿ 1,47,687 ಮತದಾರರು ಹಕ್ಕು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 75,884-ಪುರುಷರು, 71,797-ಮಹಿಳೆಯರು ಹಾಗೂ 6 ಇತರ ಮತದಾರರು ಮತ ಚಲಾಯಿಸಿದ್ದಾರೆ.

ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. 77.95ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,17,929- ಪುರುಷ, 1,19,860-ಮಹಿಳಾ ಮತದಾರರು ಹಾಗೂ 22 ಇತರ ಮತದಾರರು ಸೇರಿದಂತೆ ಒಟ್ಟು 2,37,811 ಮತದಾರರಿದ್ದಾರೆ. ಒಟ್ಟು 254 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,85,397 ಮತದಾರರು ಮತ ಚಲಾಯಿಸಿದ್ದಾರೆ. 94,274-ಪುರುಷರು, 91,112-ಮಹಿಳೆಯರು ಹಾಗೂ 11 ಇತರ ಮತದಾರರು ಮತ ಚಲಾಯಿಸಿದ್ದಾರೆ.

ವಿಜಯನಗರ ಕ್ಷೇತ್ರ

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. 70.38ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,26,090-ಪುರುಷ, 1,34,030-ಮಹಿಳಾ ಮತದಾರರು ಹಾಗೂ 77 ಇತರ ಮತದಾರರು ಸೇರಿದಂತೆ ಒಟ್ಟು 2,60,197 ಮತದಾರರಿದ್ದಾರೆ. ಒಟ್ಟು 259 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,60,197 ಮತದಾರರ ಪೈಕಿ 1,83,130 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 90,641-ಪುರುಷರು, 92,481-ಮಹಿಳೆಯರು ಹಾಗೂ 8 ಇತರ ಮತದಾರರು ಮತ ಚಲಾಯಿಸಿದ್ದಾರೆ. ಜಿಲ್ಲೆಯ ಒಟ್ಟಾರೆ ಮತದಾನ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಶೇ. 4ರಷ್ಟು ಮತದಾನ ಕಡಿಮೆ ದಾಖಲಾಗಿದೆ. ಗ್ರಾಮೀಣ ಮತಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದ್ದು, ನಗರ ಪ್ರದೇಶ ಹೊಂದಿರುವ ವಿಜಯನಗರದಲ್ಲೇ ಮತದಾನ ಪ್ರಮಾಣ ಕೊಂಚ ಕಡಿಮೆ ಆಗಿದೆ.

ಕೂಡ್ಲಿಗಿ ಕ್ಷೇತ್ರ

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. 76.64ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,06,034-ಪುರುಷ, 1,03,951-ಮಹಿಳಾ ಮತದಾರರು ಹಾಗೂ 11 ಇತರ ಮತದಾರರು ಸೇರಿದಂತೆ ಒಟ್ಟು 2,09,996 ಮತದಾರರಿದ್ದಾರೆ. ಒಟ್ಟು 250 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,60,957 ಮತದಾರರು ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 82235-ಪುರುಷರು, 78716-ಮಹಿಳೆಯರು ಹಾಗೂ 6 ಇತರೆ ಮತದಾರರು ಮತ ಚಲಾಯಿಸಿದ್ದಾರೆ.

ಹರಪನಹಳ್ಳಿ ಕ್ಷೇತ್ರ

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 77.03 ಮತದಾನ ದಾಖಲಾಗಿದೆ. ಈ ಕ್ಷೇತ್ರದಲ್ಲಿ 1,12,969 ಪುರುಷ , 1,10,985 ಮಹಿಳಾ, 19 ಇತರ ಮತದಾರರು ಸೇರಿದಂತೆ ಒಟ್ಟು 2,23,973 ಮತದಾರರಿದ್ದಾರೆ. ಈ ಪೈಕಿ 88,443 ಪುರುಷ ಮತದಾರರು, 84,101 ಮಹಿಳಾ ಮತದಾರರು, 3 ಇತರ ಮತದಾರರು ಸೇರಿ ಒಟ್ಟು 1,72,547 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ನಿರಂತರ ಅಭಿಯಾನ

ವಿಜಯನಗರ ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ನಿರಂತರ ಅಭಿಯಾನ ಮಾಡಲಾಯಿತು. ಹಾಸ್ಟೆಲ್‌ ಮಕ್ಕಳಿಂದ ಪತ್ರ ಕೂಡ ಬರೆಯಿಸಿ ಪಾಲಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ನರೇಗಾ ಕೂಲಿ ಕಾರ್ಮಿಕರಲ್ಲೂ ಹಾಗೂ ಗುಳೆ ಹೋದವರಲ್ಲೂ ಮತದಾನ ಜಾಗೃತಿ ಮೂಡಿಸಲಾಯಿತು. ಇದರಿಂದ ಈ ಬಾರಿ ಮತದಾನದಲ್ಲಿ ಹೆಚ್ಚಳವಾಗಿದೆ.

ಸದಾಶಿವಪ್ರಭು ಬಿ. ಜಿಪಂ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷರು, ವಿಜಯನಗರ ಜಿಲ್ಲೆ