ಅತಿ ಹೆಚ್ಚು ಅಂತರದಿಂದ ರಾಘವೇಂದ್ರ ಗೆಲುವು: ಕುಮಾರ ಬಂಗಾರಪ್ಪ

| Published : May 09 2024, 01:00 AM IST

ಅತಿ ಹೆಚ್ಚು ಅಂತರದಿಂದ ರಾಘವೇಂದ್ರ ಗೆಲುವು: ಕುಮಾರ ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಬಿ.ವೈ ರಾಘವೇಂದ್ರ ಅತಿ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.ಬಿ.ಎಸ್.ಯಡಿಯೂರಪ್ಪ ತನ್ನ ಮಗ ಎಂದು ಭಾವಿಸದೇ ಒಬ್ಬ ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ಮಗನ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರಾಷ್ಟ್ರ ಮತ್ತು ರಾಜ್ಯ ನಾಯಕರು ಕೂಡ ಸೊರಬದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ. ಅಭೂತಪೂರ್ವ ಲೀಡ್ ಸಿಗಲಿದೆ.

ಶಿವಮೊಗ್ಗ: ಚುನಾವಣೆ ಸಂಗ್ರಾಮ ಮುಗಿದಿದ್ದು, ಇನ್ನು ಮುಂದೆ ಅಭಿವೃದ್ಧಿಯ ದಿನಗಳು ಬರಲಿವೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣಾ ಸಂಗ್ರಾಮಕ್ಕೆ ಜಿಲ್ಲಾ ಬಿಜೆಪಿ, ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಎಲ್ಲಾ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಕಾರ್ಯಕರ್ತರು ಶ್ರಮಿಸಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ ಅತಿ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.

ಬಿ.ಎಸ್.ಯಡಿಯೂರಪ್ಪ ತನ್ನ ಮಗ ಎಂದು ಭಾವಿಸದೇ ಒಬ್ಬ ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ಮಗನ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರಾಷ್ಟ್ರ ಮತ್ತು ರಾಜ್ಯ ನಾಯಕರು ಕೂಡ ಸೊರಬದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ. ಅಭೂತಪೂರ್ವ ಲೀಡ್ ಸಿಗಲಿದೆ ಎಂದರು.

ಕಾನೂನು ಮೀರಿ ಯಾರೂ ಕೂಡ ಚುನಾವಣೆ ನಡೆಸಲಾಗುವುದಿಲ್ಲ. ಹಲವಾರು ಮಾತುಗಳು ಬಂದು ಹೋಗಿವೆ. ಮುಂದಿನ ದಿನಗಳಲ್ಲಿ ಮಾತುಗಳನ್ನು ಬದಲಾಯಿಸಬೇಕಾಗುತ್ತದೆ ಎಂದರು.-----

ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತ : ಚಿದಾನಂದಗೌಡ

ಕ್ಷೇತ್ರದ ಆನವಟ್ಟಿ, ಜಡೆ, ಕಸಬಾ ಹೋಬಳಿಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು

ಕನ್ನಡಪ್ರಭ ವಾರ್ತೆ ಸೊರಬ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತವಾಗಿದ್ದು, ಸೊರಬ ಕ್ಷೇತ್ರದಲ್ಲೂ ಉತ್ತಮ ಮುನ್ನಡೆ ದೊರೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರೇ ಜೀವಾಳವಾದ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಯಿತು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಬಿ.ವೈ.ರಾಘವೇಂದ್ರ ಕ್ಷೇತ್ರದ ಸಂಸದರಾಗಬೇಕು ಎನ್ನುವ ದೃಢ ಸಂಕಲ್ಪದೊಂದಿಗೆ ಜನತೆ ಬಿಜೆಪಿಗೆ ಹೆಚ್ಚಿನ ಬಹುಮತ ಸೂಚಿಸಿದ್ದಾರೆ. ಕ್ಷೇತ್ರದ ಆನವಟ್ಟಿ, ಜಡೆ, ಕಸಬಾ ಹೋಬಳಿಯಲ್ಲಿ ಅತ್ಯಧಿಕ ಮತಗಳು ಬಿಜೆಪಿಗೆ ಒಲಿದಿದೆ. ಎದುರಾಳಿ ಪಕ್ಷದವರ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ರಾಘವೇಂದ್ರ ಸುಮಾರು ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ತಾಲೂಕಿನಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನೆಡೆ ಸಾಧಿಸಲಿದ್ದಾರೆ. ತಾಲೂಕಿನಲ್ಲಿ ತಾವು ಪಕ್ಷದ ಪ್ರಚಾರದ ಉದ್ದೇಶದಿಂದ ಪ್ರವಾಸ ಕೈಗೊಂಡ ವೇಳೆಯಲ್ಲಿ ಈ ವಿಷಯವನ್ನು ಗಮನಿಸಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತ್ತು ಯುವ ಮತದಾರರು ದೇಶದ ಸುರಕ್ಷತೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಬೆಳಕಿಗೆ ಬಂದಿದೆ.

ಗೆಲುವಿನ ಓಟ ತಡೆ ಅಸಾಧ್ಯ:

ಬಿ.ಎಸ್.ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾದ ತರುವಾಯ ಜಿಲ್ಲೆಯ ಚಿತ್ರಣವೇ ಬದಲಾಯಿತು. ಬಿ.ವೈ. ರಾಘವೇಂದ್ರ ಸಂಸದರಾದ ತರುವಾಯ ಜಿಲ್ಲೆಯಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿರುವುದು ಮತದಾರರು ಅರಿತಿದ್ದಾರೆ. ಈ ನಿಟ್ಟಿನಲ್ಲಿ ಬಿ.ವೈ.ರಾಘವೇಂದ್ರ ಗೆಲುವಿನ ಓಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯ ಅವಶ್ಯಕತೆ ಮತ್ತು ಗೆಲುವಿನ ಕುರಿತು ಪ್ರತಿಯೊಬ್ಬ ಮತದಾರರ ಮನೆ ಮತ್ತು ಮನಗಳಿಗೆ ತಲುಪುವಂತೆ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದಾರೆ. ಬಿ.ವೈ. ರಾಘವೇಂದ್ರ ಮತ್ತೆ ಸಂಸದರಾಗುವುದು ಶತಸ್ಸಿದ್ಧ ಎಂದ ಅವರು, ಬಿಜೆಪಿಗಾಗಿ ಹಗಲಿರುಳು ಶ್ರಮವಹಿಸಿದ ಕಾರ್ಯಕರ್ತರಿಗೂ ಮತ್ತು ಮತ ನೀಡಿದ ಮತದಾರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.