ಈ ಬಾರಿ ದಾಖಲೆಯ ಶೇ.76.98 ಮತದಾನ

| Published : May 09 2024, 01:04 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 1709244 ಮತದಾರರ ಪೈಕಿ 1315746 ಮತ ಚಲಾಯಿಸಿದ್ದು, ಕ್ಷೇತ್ರಕ್ಕೆ ಈವರೆಗೆ ನಡೆದ ಚುನಾವಣೆಗಳಲ್ಲೇ ಶೇ.76.98 ಮತದಾನ ಆಗಿರುವುದು ಗರಿಷ್ಠ ದಾಖಲೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ ತಿಳಿಸಿದ್ದಾರೆ.

- ಮಾಯಕೊಂಡ ವಿ.ಸ. ಕ್ಷೇತ್ರದಲ್ಲಿ ಅತಿ ಹೆಚ್ಚು, ದಾವಣಗೆರೆ ದಕ್ಷಿಣ ವಿ.ಸ. ಕ್ಷೇತ್ರದಲ್ಲಿ ಅತಿ ಕಡಿಮೆ ಓಟಿಂಗ್

- ದಾವಣಗೆರೆ ವಿಶ್ವವಿದ್ಯಾನಿಲಯ ಸ್ಟ್ರಾಂಗ್ ರೂಂನಲ್ಲಿ ಇವಿಎಂಗಳೆಲ್ಲಾ ಭದ್ರ । ಮೀಸಲು ಪಡೆಗಳ ಬಿಗಿ ಪಹರೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 1709244 ಮತದಾರರ ಪೈಕಿ 1315746 ಮತ ಚಲಾಯಿಸಿದ್ದು, ಕ್ಷೇತ್ರಕ್ಕೆ ಈವರೆಗೆ ನಡೆದ ಚುನಾವಣೆಗಳಲ್ಲೇ ಶೇ.76.98 ಮತದಾನ ಆಗಿರುವುದು ಗರಿಷ್ಠ ದಾಖಲೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ ತಿಳಿಸಿದ್ದಾರೆ.

ಕ್ಷೇತ್ರದ ಚುನಾವಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 82.96 ಮತದಾನವಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 70.12ರಷ್ಟು ಅತಿ ಕಡಿಮೆ ಮತದಾನವಾಗಿದೆ. ಲೋಕಸಭೆ 2024ರ ಚುನಾವಣೆಯಲ್ಲಿ ಕ್ಷೇತ್ರದಲ್ಲೇ ದಾಖಲೆಯ ಮತ ಚಲಾವಣೆಯಾಗಿದೆ ಎಂದು ಹೇಳಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳೆಯರು, 137 ಇತರೆ ಸೇರಿ 1709244 ಮತದಾರರಿದ್ದಾರೆ. ಈ ಪೈಕಿ 667742 ಪುರುಷ, 647964 ಮಹಿಳೆಯರು ಹಾಗೂ 40 ಇತರೆ ಸೇರಿ 1315746 ಮತದಾನ ಮಾಡಿದ್ದು, ಶೇ.76.98ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಲ್ಲಿ 78865 ಪುರುಷ, 74956 ಮಹಿಳೆ, 3 ಇತರೆ ಸೇರಿ 153824 ಮತದಾನ ಮಾಡಿದ್ದು, ಶೇ.77.37 ಮತ ಚಲಾವಣೆಯಾಗಿದೆ. ಹರಪನಹಳ್ಳಿಯಲ್ಲಿ 112969 ಪುರುಷ, 110985 ಮಹಿಳೆ, 19 ಇತರೆ ಸೇರಿ 223973 ಮತದಾರರಲ್ಲಿ 88443 ಪುರುಷ, 84101 ಮಹಿಳೆ, 3 ಇತರೆ ಸೇರಿ 172547 ಮತದಾನವಾಗಿದ್ದು, ಶೇ.77.04 ಮತ ಚಲಾವಣೆಯಾಗಿದೆ.

ಹರಿಹರದಲ್ಲಿ 105510 ಪುರುಷ, 106870 ಮಹಿಳೆಯರು, 17 ಇತರೆ ಸೇರಿ 212397 ಮತದಾರರಲ್ಲಿ 85515 ಪುರುಷ, 83116 ಮಹಿಳೆ, 7 ಇತರೆ ಸೇರಿ 168638 ಜನ ಮತದಾನ ಮಾಡಿದ್ದು, ಶೇ.79.40ರಷ್ಟು ಮತದಾನವಾಗಿದೆ. ದಾವಣಗೆರೆ ಉತ್ತರ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156 ರಲ್ಲಿ 88445 ಪುರುಷ, 89773 ಮಹಿಳಾ, 12 ಇತರೇ ಸೇರಿ 178230 ಮತದಾನವಾಗಿದ್ದು, ಶೇ.70.40ರಷ್ಟು ಮತದಾನವಾಗಿದೆ.

ದಾವಣಗೆರೆ ದಕ್ಷಿಣ 109184 ಪುರುಷ, 111774 ಮಹಿಳೆಯರು, 39 ಇತರೆ ಸೇರಿ 220997 ಮತದಾರರಲ್ಲಿ 77854 ಪುರುಷ, 77105 ಮಹಿಳಾ ಹಾಗೂ 8 ಇತರೆ ಸೇರಿ 154967 ಜನರು ಮತದಾನವಾಗಿ ಶೇ.70.12ರಷ್ಟು ಮತದಾನವಾಗಿದೆ. ಮಾಯಕೊಂಡದಲ್ಲಿ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089 ಮತದಾರರಲ್ಲಿ 82568 ಪುರುಷ, 79276 ಮಹಿಳಾ, 2 ಇತರೆ ಸೇರಿ 161846 ಮತದಾನವಾಗಿದ್ದು, ಶೇ.82.96ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚನ್ನಗಿರಿಯಲ್ಲಿ 101653 ಪುರುಷ, 102208 ಮಹಿಳೆಯರು, 9 ಇತರೆ ಸೇರಿ 203870 ಮತದಾರರಲ್ಲಿ 82491 ಪುರುಷ, 78670 ಮಹಿಳಾ, 4 ಇತರೆ ಸೇರಿ 161165 ಜನರು ತಮ್ಮ ಹಕ್ಕನ್ನ ಚಲಾಯಿಸಿದ್ದು, ಶೇ.79.05ರಷ್ಟು ಮತದಾನವಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಲ್ಲಿ 83561 ಪುರುಷ, 80967 ಮಹಿಳೆಯರು, 1 ಇತರೆ ಸೇರಿ 164529 ಮತದಾನವಾಗಿದ್ದು, ಶೇ.81.88 ರಷ್ಟು ಮತ ಚಲಾವಣೆಯಾಗಿದೆ.

ದಾವಣಗೆರೆ ಲೋಕಸಭೆ ಚುನಾವಣೆಗಳ ಪೈಕಿ 2024ರ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಶೇ.72.16ರಷ್ಟು ಮತ ಚಲಾವಣೆಯಾಗಿತ್ತು. 2024ರ ಚುನಾವಣೆಗೆ 30 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶೇ.76.98ರಷ್ಟು ಮತ ಚಲಾವಣೆಯಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ವ್ಯಾಪಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಮತದಾನ ಪ್ರಮಾಣ ಹೆಚ್ಚಾಗಿರುವುದು ತಂಡದ ಶ್ರಮ ಫಲ ನೀಡಿದ ಖುಷಿಯಲ್ಲಿವೆ.

- - -

ಕೋಟ್‌ ದಾವಣಗೆರೆ ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯವು ಜೂ.4ರಂದು ದಾವಣಗೆರೆ ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8ರಂದು ಮತ ಎಣಿಕೆ ಕಾರ್ಯ ಶುರುವಾಗಲಿದೆ. ಅಲ್ಲಿವರೆಗೂ 30 ಅಭ್ಯರ್ಥಿಗಳ ಭವಿಷ್ಯ ತುಂಬಿರುವ ವಿದ್ಯುನ್ಮಾನ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿಡಲಾಗಿದೆ. ದಿನದ 24 ಗಂಟೆ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಗಳ ಭದ್ರತೆ ಒದಗಿಸಲಾಗಿದೆ

- ಡಾ. ಎಂ.ವಿ.ವೆಂಕಟೇಶ, ಜಿಲ್ಲಾ ಚುನಾವಣಾಧಿಕಾರಿ

- - -

8ಕೆಡಿವಿಜಿ5, 6:

ದಾವಣಗೆರೆ ತಾ. ಶಿವಗಂಗೋತ್ರಿಯ ದಾವಿವಿ ಮತ ಎಣಿಕಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಇಟ್ಟು, ರೂಂಗೆ ಭದ್ರಪಡಿಸಲಾಗಿದೆ. ಭದ್ರತಾ ಪಡೆ, ರಾಜ್ಯ ಸಶಸ್ತ್ರ ಮೀಸಲು ಪಡೆಯ ಭದ್ರತೆ ಕಲ್ಪಿಸಿರುವುದು.