ಈ ಬಾರಿ ಶೇ.66.32 ಮತದಾನ

| Published : May 08 2024, 01:05 AM IST

ಸಾರಾಂಶ

ಬಿಸಿಲಿನ ಪ್ರಕರತೆಗೆ ಈ ಬಾರಿ ಮತದಾನ ಕಡಿಮೆ ಆಗಬಹುದು ಎನ್ನಲಾಗಿತ್ತು. ಆದರೆ, ಮತದಾರರ ಉತ್ಸಾಹದಿಂದ ಈ ಬಾರಿ ಶೇ.66.32 ರಷ್ಟು ಮತದಾನವಾಗಿದೆ. ಈ ಮೂಲಕ 2019ರಲ್ಲಿ ಶೇ.61.89ರ ದಾಖಲೆ ಮುರಿದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಸಿಲಿನ ಪ್ರಕರತೆಗೆ ಈ ಬಾರಿ ಮತದಾನ ಕಡಿಮೆ ಆಗಬಹುದು ಎನ್ನಲಾಗಿತ್ತು. ಆದರೆ, ಮತದಾರರ ಉತ್ಸಾಹದಿಂದ ಈ ಬಾರಿ ಶೇ.66.32 ರಷ್ಟು ಮತದಾನವಾಗಿದೆ. ಈ ಮೂಲಕ 2019ರಲ್ಲಿ ಶೇ.61.89ರ ದಾಖಲೆ ಮುರಿದಿದೆ.

ಬೆಳಗ್ಗೆ 9ಗಂಟೆ ವರೆಗೆ ಶೇ.9.23, 11ಗಂಟೆ ವರೆಗೆ ಶೇ, 24.30, ಮಧ್ಯಾಹ್ನ 1 ಗಂಟೆ ವರೆಗೆ ಶೇ.40.18, 3ಗಂಟೆ ವರೆಗೆ ಶೇ.50.43, ಸಂಜೆ 5ಗಂಟೆ ವರೆಗೆ ಶೇ.61.18, ಸಂಜೆ 6ಗಂಟೆ ವರೆಗೆ 66.32 ಮತದಾನವಾಗಿದೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಪಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ ತಮ್ಮ ತಮ್ಮ ಕರ್ತವ್ಯ ಪಾಲನೆ ಮಾಡಿದ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಸುಸೂತ್ರವಾಗಿ ಮತದಾನ ಮುಗಿದಂತಾಗಿದೆ.

ಮತದಾರದಲ್ಲಿ ಉತ್ಸಾಹ:

ಈ ಬಾರಿಯ ಭಯಂಕರ ಬಿಸಿಲಿಗೆ ಹೆದರಿದ ಮತದಾರರು ಬೆಳಗ್ಗೆ 7ಗಂಟೆಯಿಂದ ಮದ್ಯಾಹ್ನ 1ಗಂಟೆಯ ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದು ಕಂಡು ಬಂದಿದೆ. ಮೊದಲ ಬಾರಿಗೆ ಮತದಾನ ಮಾಡುವ ಯುವಕ, ಯುವತಿಯರು ಬೆಳಗ್ಗೆಯೇ ಮತಗಟ್ಟೆಗಳಿಗೆ ಬಂದಿದ್ದರು. ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸರ ಬೆಳಗ್ಗೆ 11ಗಂಟೆಯ ಒಳಗೆ ಮತದಾನ ಮಾಡಿ, ಇತರರಿಗೂ ಮಾದರಿಯಾದರು.

ಮತಪೆಟ್ಟಿಗೆಯಲ್ಲಿ ಭವಿಷ್ಯ ಭದ್ರ:

ಲೋಕಸಭಾ ಚುನಾವಣೆಯ ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೀಗ ಇವಿಎಂ ಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಜಿಲ್ಲಾದ್ಯಂತ ಮತದಾನ ಪೂರ್ಣಗೊಂಡಿದ್ದು, ಎಲ್ಲ ಮತಯಂತ್ರಗಳನ್ನು ನಗರದ ಸೈನಿಕ ಶಾಲೆಯ ಭದ್ರತಾ ಕೊಠಡಿಯಲ್ಲಿ ಲಾಕ್ ಮಾಡಿ ಇಡಲಾಗಿದೆ. ಜೂನ್ 4ರಂದು ಫಲಿತಾಂಶ ಬರಲಿದ್ದು, ಅಂದು ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗಲಿದೆ.

---

ಕ್ಷೇತ್ರವಾರು ಮತದಾನಬಬಲೇಶ್ವರ ಶೇ.71.03 ಬಸವನಬಾಗೇವಾಡಿ ಶೇ.70.83 ಇಂಡಿ ಶೇ.67.25 ನಾಗಠಾಣ ಶೇ.66.08 ಸಿಂದಗಿ ಶೇ.66.38 ಮುದ್ದೇಬಿಹಾಳ ಶೇ.64.74 ವಿಜಯಪುರ ನಗರ ಶೇ.62.24 ದೇವರಹಿಪ್ಪರಗಿ ಶೇ.62.11