ಕಾಡಾನೆಗಳ ದಾಳಿ ನಿಯಂತ್ರಿಸಲು ಅರಣ್ಯಾಧಿಕಾರಿ ವಿಫಲ

| Published : May 10 2024, 01:38 AM IST

ಸಾರಾಂಶ

ನಿರಂತರವಾಗಿ ಕಾಡಾನೆಗಳು ರೈತರ ಜಮೀನಿನಲ್ಲಿ ಕಬ್ಬು ಫಸಲನ್ನು ತಿಂದು ಹಾಳು ಮಾಡುತ್ತಿದ್ದು, ಅರಣ್ಯಾಧಿಕಾರಿಗಳು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ರೈತ ಮಹದೇವ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ನಿರಂತರವಾಗಿ ಕಾಡಾನೆಗಳು ರೈತರ ಜಮೀನಿನಲ್ಲಿ ಕಬ್ಬು ಫಸಲನ್ನು ತಿಂದು ಹಾಳು ಮಾಡುತ್ತಿದ್ದು, ಅರಣ್ಯಾಧಿಕಾರಿಗಳು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ರೈತ ಮಹದೇವ ಆರೋಪಿಸಿದ್ದಾರೆ. ಪಟ್ಟಣದ ನಿವಾಸಿ ಮಹದೇವ ಸಮೀಪದ ವೈಸಂಪಾಳ್ಯ ವ್ಯಾಪ್ತಿಯ ಜಮೀನನ್ನು ಗುತ್ತಿಗೆ ಪಡೆದು ಅದರಲ್ಲಿ ಎರಡುವರೆ ಎಕರೆ ಕಬ್ಬು ಬೆಳೆಯಲಾಗಿದ್ದು, ದಿನನಿತ್ಯ ರಾತ್ರಿ ಆಗಲು ಎನ್ನದೆ ಕಾಡಾನೆಗಳು ಬಂದು ಕಬ್ಬನ್ನು ತುಳಿದು ನಾಶಪಡಿಸುತ್ತಿದೆ, ಇದರಿಂದ ಲಕ್ಷಾಂತರ ರು. ನಷ್ಟ ಉಂಟಾಗಿದೆ ಎಂದು ತನ್ನ ಅಳಲನ್ನು ತೊಡಿಕೊಂಡರು. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ:

ಹನೂರು ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್ ವ್ಯಾಪ್ತಿಗೆ ಒಳಪಡುವ ಅರಣ್ಯ ಪ್ರದೇಶದಿಂದ ದಿನನಿತ್ಯ ಕಾಡಾನೆಗಳು ರಾತ್ರಿ ವೇಳೆ ಕಬ್ಬಿನ ತೋಟಕ್ಕೆ ನುಗ್ಗಿ ಫಸಲನ್ನು ತಿಂದು ಹಾಳು ಮಾಡಿ ನಾಶಪಡಿಸುತ್ತಿದೆ. ಈ ಬಗ್ಗೆ ಹಲವಾರು ದಿನಗಳಿಂದ ಸ್ಥಳೀಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದರು. ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರೈಲ್ವೆ ಬ್ಯಾರಿಗೇಟ್ ನಿರ್ಮಾಣಕ್ಕೆ ಅಗ್ರಹ:

ಅರಣ್ಯ ಪ್ರದೇಶದ ಅರಕನಹಳ್ಳಿ ಚೆಕ್ ಡ್ಯಾಮ್ ಬಳಿ ರೈಲ್ವೆ ಬ್ಯಾರಿ ಗೇಟ್ ಇಲ್ಲದಿರುವುದರಿಂದ ಕಾಡಾನೆಗಳು ದಿನನಿತ್ಯ ಅರಣ್ಯ ಪ್ರದೇಶದಿಂದ ಜಮೀನಿಗೆ ನುಗ್ಗಿ ಫಸಲು ಹಾಳು ಮಾಡುತ್ತಿದೆ ಹೀಗಾಗಿ ಅರಣ್ಯಾಧಿಕಾರಿಗಳು ಕಾಡುಪ್ರಾಣಿಗಳನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಗೆಟ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಸೂಕ್ತ ಪರಿಹಾರಕ್ಕೆ ಅಗ್ರಹ:

ದಿನನಿತ್ಯ ನಿರಂತರವಾಗಿ ಕಾಡಾನೆಗಳು ಜಮೀನಿನಲ್ಲಿ ಗುತ್ತಿಗೆ ಪಡೆದು ಕಬ್ಬು ಹಾಕಲಾಗಿದೆ. ಇದಕ್ಕೆ ಲಕ್ಷಾಂತರ ರು. ಸಾಲ ಮಾಡಿ ಫಸಲು ಹಾಕಿರುವುದರಿಂದ ಇತ್ತ ಸಾಲ ಪಡೆದಿರುವವರಿಗೆ ವಾಪಸ್ ಕೊಡದೆ ಇತ್ತ ಜಮೀನಿನ ಮಾಲೀಕರಿಗೂ ಗುತ್ತಿಗೆ ನೀಡಲು ಆಗದೆ ಲಕ್ಷಾಂತರ ರು.ನಷ್ಟ ಉಂಟಾಗಿರುವ ರೈತನಿಗೆ ಅರಣ್ಯಾಧಿಕಾರಿಗಳು ಜಮೀನಿಗೆ ತೆರಳಿ ಪರಿಶೀಲಿಸಿ ನಡೆಸಿ ನಷ್ಟ ಪರಿಹಾರ ನೀಡಬೇಕಾಗಿ ರೈತರು ಹಾಗೂ ರೈತ ಸಂಘಟನೆ ಒತ್ತಾಯಿಸಿದೆ.

ಇನ್ನು ಅರ್ಧ ಕಿಲೋಮೀಟರ್ ರೈಲ್ವೆ ಬ್ಯಾರಿಗೇಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈತನ ಜಮೀನಿಗೆ ತೆರಳಿ ಆಗಿರುವ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಅರಣ್ಯ ಇಲಾಖೆ ವತಿಯಿಂದ ಸಿಗುವ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾಡಾನೆಗಳು ರೈತನ ಜಮೀನಿಗೆ ಬಂದಾಗ ದೂರವಾಣಿ ಕರೆ ಮಾಡಿ ತಿಳಿಸಿದರೆ ತಕ್ಷಣ ಸಿಬ್ಬಂದಿಯನ್ನು ಕಳಿಸಿಕೊಡಲಾಗುವುದು.

ಪ್ರವೀಣ್ ವಲಯ ಅರಣ್ಯಾಧಿಕಾರಿ, ಬಫರ್ ಜೋನ್ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ