ಎಸ್ಸೆಸ್ಸೆಲ್ಸಿಯಲ್ಲಿ ಪ್ರಿಯತೋಷ್‌ಗೆ ಶೇ. 98.8 ತಾಲೂಕಿಗೆ ಪ್ರಥಮ

| Published : May 10 2024, 01:38 AM IST

ಎಸ್ಸೆಸ್ಸೆಲ್ಸಿಯಲ್ಲಿ ಪ್ರಿಯತೋಷ್‌ಗೆ ಶೇ. 98.8 ತಾಲೂಕಿಗೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆಯಾಗಿದ್ದು ತಾಲೂಕಿನಲ್ಲಿ ಶೇ. 61.98 ರಷ್ಟು ಫಲಿತಾಂಶದೊಂದಿಗೆ ತಾಲೂಕು 3ನೇ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಒಟ್ಟು 2191 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಬಾಲಕರು 1097, ಬಾಲಕಿಯರು 1094 ಪೈಕಿ 568 ಬಾಲಕರು, 790 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಯಾಗಿದ್ದು ತಾಲೂಕಿನಲ್ಲಿ ಶೇ. 61.98 ರಷ್ಟು ಫಲಿತಾಂಶದೊಂದಿಗೆ ತಾಲೂಕು 3ನೇ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಒಟ್ಟು 2191 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಬಾಲಕರು 1097, ಬಾಲಕಿಯರು 1094 ಪೈಕಿ 568 ಬಾಲಕರು, 790 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಈ ಬಾರಿ ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಕುಸಿತ ಕಂಡಿದ್ದರೂ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾದಿಸಿದ್ದಾರೆ. ಈ ಬಾರಿ ಪರೀಕ್ಷಾ ಕೇಂದ್ರಗಳಲಿ ಸಿಸಿಟಿವಿ ಅಳವಡಿಸಿದ್ದು, ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸಲಾಗಿತ್ತು. ತಾಲೂಕಿನಲ್ಲಿ 19 ಸರ್ಕಾರಿ ಪ್ರೌಢಶಾಲೆ, 14 ಅನುದಾನಿತ ಪ್ರೌಢ ಶಾಲೆ, 7 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳು ಸೇರಿದಂತೆ ಒಟ್ಟು 46 ಪ್ರೌಢ ಶಾಲೆಗಳಿವೆ. ತಾಲೂಕಿನಲ್ಲಿ ಒಟ್ಟು 8 ಮಂದಿ ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದಿದ್ದು, ಪಟ್ಟಣದ ಚಾಣಿಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಪಿ.ಪ್ರಿಯತೋಷ್ 613 ಅಂಕಗಳನ್ನು ಪಡೆದು ಶೇ. 98.08 ರಷ್ಟು ಫಲಿತಾಂಶದೊಂದಿಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಶಾಲೆಯ ವಿದ್ಯಾರ್ಥಿನಿ ಭೂಮಿಕಾ 609 ಶೇ. 97.4 ದ್ವಿತೀಯ ಸ್ಥಾನ, ರವೀಂದ್ರ ಭಾರತಿ ವಿದ್ಯಾಮಂದಿರದ ಕಿರಣ್ರಾಜ್ ಶೇ. 96.8, ಬಿಂದುಶ್ರೀ ಶೇ.96.6, ಶುಭಾಷ್ ಶೇ. 96.6, ಪಂಕಜ್‌ಕುಮಾರ್ ಶೇ.96.4, ಶ್ರೀರಕ್ಷಾ ಶೇ.96.4, ಹೂಲಿಕುಂಟೆ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಶರವಾಣಿ ಶೇ.96.4 ಅಂಕಗಳನ್ನು ಪಡೆದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ತಿಳಿಸಿದ್ದಾರೆ.