ಮತ ಚಲಾಯಿಸಲು ಫಿಲಿಪೈನ್ಸ್‌ನಿಂದ ವಿದ್ಯಾರ್ಥಿನಿ

| Published : Apr 27 2024, 01:01 AM IST

ಸಾರಾಂಶ

ಬಿಸಿಲಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಹೇಗೆ ಎಂದು ಚಿಂತೆ ಮಾಡುವ ಜನರ ನಡುವೆ ಇಲ್ಲೊಬ್ಬರು ಮೆಡಿಕಲ್ ವಿದ್ಯಾರ್ಥಿನಿ ಮತ ಚಲಾಯಿಸಲೆಂದೇ ದೂರದ ಫಿಲಿಪೈನ್ಸ್‌ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದಾಳೆ.

ಚಿತ್ರದುರ್ಗ: ಬಿಸಿಲಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಹೇಗೆ ಎಂದು ಚಿಂತೆ ಮಾಡುವ ಜನರ ನಡುವೆ ಇಲ್ಲೊಬ್ಬರು ಮೆಡಿಕಲ್ ವಿದ್ಯಾರ್ಥಿನಿ ಮತ ಚಲಾಯಿಸಲೆಂದೇ ದೂರದ ಫಿಲಿಪೈನ್ಸ್‌ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದಾಳೆ. ಶುಕ್ರವಾರ ಚಿತ್ರದುರ್ಗ ಜೋಗಿಮಟ್ಟಿ ರಸ್ತೆಯ ಮತಗಟ್ಟೆ ಸಂಖ್ಯೆ 225ರಲ್ಲಿ ಮತ ಚಲಾಯಿಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಭಾಗವಾಗಿ ಹೊರ ಹೊಮ್ಮಿದಳು.

ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಅವರ ಪುತ್ರ ಲಿಖಿತಾ ಫಿಲಿಫೈನ್ಸ್ ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಆಕೆ ಮತ ಚಲಾಯಿಸಲು ಅಲ್ಲಿಂದ ಆಗಮಿಸಿದ್ದಳು. ಈ ಬಾರಿಯ ಲೋಕಸಭೆ ಚುನಾವಣೆಗಾ ಹಾಜರಿ ಹಾಕಿದ್ದಾಳೆ. ಫಿಲಿಫೈನ್ಸ್‌ನಲ್ಲಿ ತಕ್ಷಣ ವೀಸಾ ಸಿಗುವುದಿಲ್ಲ. ಹಾಗಾಗಿ ಇಪ್ಪತ್ತೈದು ದಿನಗಳ ಸಮಯ ಪಡೆದು ಬಂದಿದ್ದಾಳೆ. ಕಳೆದ 19ರಂದೇ ಚಿತ್ರದುರ್ಗಕ್ಕೆ ಆಗಮಿಸಿದಳು. ಇನ್ನು ಹತ್ತು ದಿನ ಇದ್ದು ವಾಪಾಸ್ಸಾಗುತ್ತಾಳೆ ಎಂದು ತಂದೆ ರೇವಣಸಿದ್ದಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.

ಮತ ಚಲಾವಣೆ ನಂತರ ಮಾತನಾಡಿದ ವಿದ್ಯಾರ್ಥಿನಿ ಲಿಖಿತಾ, ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿರುವೆ. ಮತ ಚಲಾಯಿಸುವ ಅವಕಾಶ ಲಭ್ಯವಾದ ನಂತ ಯಾವ ಚುನಾವಣೆಗಳನ್ನು ಮಿಸ್ ಮಾಡಿಕೊಂಡಿಲ್ಲ. ಕಳೆದ ವಿಧಾನಸಭೆ ಚುನಾವಣೆಗೂ ಆಗಮಿಸಿ ಮತ ಚಲಾಯಿಸಿದ್ದೆ. ಇದೊಂದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಸರ್ಕಾರ ನಿರ್ಮಾಣದಲ್ಲಿ ಒಂದು ಮತ ನಿರ್ಣಾಯಕ ಪಾತ್ರವಹಿಸಬಹುದು. ನಾನು ದೂರದಿಂದ ಬಂದಿದ್ದೇನೆ, ಇಲ್ಲಿಯರು ಯಾವುದೇ ಕಾರಣದಿಂದ ಮತದಾನದಿಂದ ದೂರ ಉಳಿಯಬಾರದೆಂದು ವಿನಂತಿಸಿದರು.