ಪುತ್ತೂರು, ಕಡಬ ತಾಲೂಕಿಗೆ ಶೇ. ೯೭.೪೭ ಫಲಿತಾಂಶ

| Published : May 10 2024, 01:30 AM IST

ಸಾರಾಂಶ

೨೬ ಸರ್ಕಾರಿ ಶಾಲೆ, ೨೨ ಅನುದಾನಿತ ಶಾಲೆ ಮತ್ತು ೩೪ ಅನುದಾನ ರಹಿತ ಶಾಲೆ ಸೇರಿದಂತೆ ಒಟ್ಟು ೮೨ ಪ್ರೌಢಶಾಲೆಗಳ ಪೈಕಿ, ೧೪ ಸರ್ಕಾರಿ ಶಾಲೆ, ೧೪ ಅನುದಾನಿತ ಶಾಲೆ ಮತ್ತು ೨೭ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೫೫ ಶಾಲೆಗಳು ಶೇ. ೧೦೦ ಫಲಿತಾಂಶ ಪಡೆದುಕೊಂಡಿವೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ೨೬ ಸರ್ಕಾರಿ ಶಾಲೆ, ೨೨ ಅನುದಾನಿತ ಶಾಲೆ ಹಾಗೂ ೩೪ ಅನುದಾನ ರಹಿತ ಶಾಲೆಗಳಿಂದ ಒಟ್ಟು ೪೫೦೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದು, ಈ ಪೈಕಿ ೪೩೮೯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ.೯೭.೪೭ ಫಲಿತಾಂಶ ದಾಖಲಾಗಿದೆ. ಶೇ. ೧೦೦ ಫಲಿತಾಂಶ: ಅವಿಭಜಿತ ತಾಲೂಕಿನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ೨೬ ಸರ್ಕಾರಿ ಶಾಲೆ, ೨೨ ಅನುದಾನಿತ ಶಾಲೆ ಮತ್ತು ೩೪ ಅನುದಾನ ರಹಿತ ಶಾಲೆ ಸೇರಿದಂತೆ ಒಟ್ಟು ೮೨ ಪ್ರೌಢಶಾಲೆಗಳ ಪೈಕಿ, ೧೪ ಸರ್ಕಾರಿ ಶಾಲೆ, ೧೪ ಅನುದಾನಿತ ಶಾಲೆ ಮತ್ತು ೨೭ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೫೫ ಶಾಲೆಗಳು ಶೇ. ೧೦೦ ಫಲಿತಾಂಶ ಪಡೆದುಕೊಂಡಿವೆ.ತಾಲೂಕಿಗೆ ಟಾಪರ್: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀಯಾ (೬೨೧) ಮತ್ತು ಬಾಲಾಜಿ (೬೨೦) ಅಂಕ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಅಕ್ಷತಾ ಗಂಗಾ ಯು(೬೧೯) ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ. ಶೇ.೧೦೦ ಫಲಿತಾಂಶ ದಾಖಲಿಸಿಕೊಂಡ ಶಾಲೆಗಳು: ಸೈಂಟ್ ವಿಕ್ಟರ್ಸ್‌ ಗರ್ಲ್ಸ್ ಹೈಸ್ಕೂಲ್ ಪುತ್ತೂರು, ನವೋದಯ ಹೈಸ್ಕೂಲ್ ಬೆಟ್ಟಂಪಾಡಿ, ಸರ್ವೋದಯ ಹೈಸ್ಕೂಲ್ ಸುಳ್ಯಪದವು, ಸುಬೋಧ ಹೈಸ್ಕೂಲ್ ಪಾಣಾಜೆ, ಸೈಂಟ್ ಆಂಟೊನಿ ಹೈಸ್ಕೂಲ್ ಶಿರಾಡಿ, ಸೈಂಟ್ ಜಾರ್ಜ್ ಹೈಸ್ಕೂಲ್ ನೆಲ್ಯಾಡಿ, ಬೆಥನಿ ಹೈಸ್ಕೂಲ್‌ ನೂಜಿ ಬಾಳ್ತಿಲ, ಶ್ರೀ ದುರ್ಗಾಂಬಾ ಹೈಸ್ಕೂಲ್ ಆಲಂಕಾರು, ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಬಿಲಿನೆಲೆ, ಷಣ್ಮುಖದೇವ ಹೈಸ್ಕೂಲ್ ಪೆರ್ಲಂಪಾಡಿ, ಸರ್ಕಾರಿ ಜೂನಿಯರ್ ಕಾಲೇಜು ಸವಣೂರು, ಕಾಂಚನ ವಿ.ಎಸ್. ಮೆಮೋರಿಯಲ್ ಹೈಸ್ಕೂಲ್ ಬಜತ್ತೂರು, ಸೈಂಟ್ ಜಾರ್ಜ್ ಹೈಸ್ಕೂಲ್ ಕುಂತೂರು, ಸರ್ಕಾರಿ ಹೈಸ್ಕೂಲ್ ಸರ್ವೆ ಕಲ್ಪನೆ, ಸಾಲ್ಮರ ಹೈಸ್ಕೂಲ್ ಪುತ್ತೂರು, ಸೈಂಟ್ ಮೇರಿ ಹೈಸ್ಕೂಲ್ ಮರ್ದಾಳ, ಸರ್ಕಾರಿ ಹೈಸ್ಕೂಲ್ ಕೊಣಾಲು, ಸರ್ಕಾರಿ ಹೈಸ್ಕೂಲ್ ಕೋಡಿಂಬಾಡಿ, ಸರ್ಕಾರಿ ಹೈಸ್ಕೂಲ್ ಅರಿಯಡ್ಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು, ಸರ್ಕಾರಿ ಹೈಸ್ಕೂಲ್ ಬೆಟ್ಟಂಪಾಡಿ, ಡಾ. ಕೆ. ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಕನ್ನಾಯ ಜ್ಯೋತಿ ಹೈಸ್ಕೂಲ್ ಕಡಬ, ಜ್ಞಾನೋದಯ ಬೆಥನಿ ಹೈಸ್ಕೂಲ್ ನೆಲ್ಯಾಡಿ, ವಿವೇಕಾನಂದ ಹೈಸ್ಕೂಲ್ ಪುತ್ತೂರು, ಸುಧಾನ ಹೈಸ್ಕೂಲ್ ನೆಹರೂನಗರ, ಮೌಂಟೇನ್ ವೀವ್ ಹೈಸ್ಕೂಲ್ ಸಾಲ್ಮರ, ಪ್ರಗತಿ ಹೈಸ್ಕೂಲ್ ಕಾಣಿಯೂರು, ಮಾರ್ ಇವಾನಿಯೋಸ್ ಹೈಸ್ಕೂಲ್ ಪೆರಾಬೆ, ಬುಶ್ರಾ ಹೈಸ್ಕೂಲ್ ಕಾವು, ಸರ್ಕಾರಿ ಹೈಸ್ಕೂಲ್ ಮಂಜುನಾಥ ನಗರ ಪಾಲ್ತಾಡಿ, ಸರ್ಕಾರಿ ಹೈಸ್ಕೂಲ್ ವಳಾಲು, ಸರ್ಕಾರಿ ಹೈಸ್ಕೂಲ್ ಹಿರೇಬಂಡಾಡಿ, ಸೈಂಟ್ ಮೇರಿ ಹೈಸ್ಕೂಲ್ ಉಪ್ಪಿನಂಗಡಿ, ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ, ಸಾಂದೀಪನಿ ಹೈಸ್ಕೂಲ್ ನರಮೊಗರು, ಸರ್ಕಾರಿ ಹೈಸ್ಕೂಲ್ ಇರ್ದೆ, ಮೊರಾರ್ಜಿ ದೇಸಾಯಿ ಶಾಲೆ ದರ್ಬೆ, ಗಜಾನನ ಹೈಸ್ಕೂಲ್ ಈಶ್ವರಮಂಗಲ, ಆಯೆಷಾ ಹೆಣ್ಮಕ್ಕಳ ಹೈಸ್ಕೂಲ್ ರಾಮಕುಂಜ, ಸೈಂಟ್ ಆ್ಯನ್ಸ್ ಹೈಸ್ಕೂಲ್ ಕಡಬ, ಗುಡ್ ಶೆಫರ್ಡ್ ಹೈಸ್ಕೂಲ್ ಮರ್ದಾಳ, ಸರಸ್ವತಿ ವಿದ್ಯಾಲಯ ಹೈಸ್ಕೂಲ್ ಕಡಬ, ಇಂಡಿಯನ್ ಹೈಸ್ಕೂಲ್ ಉಪ್ಪಿನಂಗಡಿ, ಖಲೀಲ್ ಸಲಾಹ್ ಹೈಸ್ಕೂಲ್ ಗಾಳಿಮುಖ, ಪ್ರಿಯದರ್ಶಿನಿ ಹೈಸ್ಕೂಲ್ ಇರ್ದೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ, ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು, ಶ್ರೀರಾಮ ಹೈಸ್ಕೂಲ್ ನಲ್ಯಾಡಿ, ಮೌಲಾನಾ ಆಝಾದ್ ಮೋಡಲ್ ಸ್ಕೂಲ್ ಪುತ್ತೂರು, ಡಾ. ಬಿ.ಆರ್. ಅಂಬೇಡ್ಕರ್ ರೆಶಿಡೆನ್ಸಿಯಲ್ ಸ್ಕೂಲ್ ಉಪ್ಪಿನಂಗಡಿ, ಸರಸ್ವತಿ ವಿದ್ಯಾಮಂದಿರ ನರಿಮೊಗರು.