ಎಸ್‌ಎಸ್‌ಎಲ್‌ಸಿ ಫಲಿತಾಂಶ : ಕಾಫಿ ನಾಡಿಗೆ ಹತ್ತನೇ ಸ್ಥಾನ

| Published : May 10 2024, 01:34 AM IST

ಸಾರಾಂಶ

ಚಿಕ್ಕಮಗಳೂರು, ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.ಕಳೆದ ಮಾರ್ಚ್‌ ಮಾಹೆಯಲ್ಲಿ ಜಿಲ್ಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 12,934 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಈ ಪೈಕಿ 10,786 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 83.39 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದು, ಈ ಬಾರಿ 8ನೇ ಸ್ಥಾನವನ್ನು ಉತ್ತಮೀಕರಿಸಿಕೊಂಡಿದೆ.

ಶೇ. 82.88 ಬಾಲಕರು, ಶೇ.90.70 ಬಾಲಕಿಯರು ತೇರ್ಗಡೆ । ಕಳೆದ ವರ್ಷ 18ನೇ ಸ್ಥಾನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.

ಕಳೆದ ಮಾರ್ಚ್‌ ಮಾಹೆಯಲ್ಲಿ ಜಿಲ್ಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 12,934 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಈ ಪೈಕಿ 10,786 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 83.39 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದು, ಈ ಬಾರಿ 8ನೇ ಸ್ಥಾನವನ್ನು ಉತ್ತಮೀಕರಿಸಿಕೊಂಡಿದೆ.

ಸರ್ಕಾರಿ ಶಾಲೆಗಳು ಶೇ. 86.92 ಫಲಿತಾಂಶ ಪಡೆದುಕೊಂಡಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ 86.92, ಅನುದಾನಿತ ಶಾಲೆಗಳಲ್ಲಿ ಶೇ. 78.66, ಅನುದಾನ ರಹಿತ ಶಾಲೆಗಳಲ್ಲಿ ಶೇ. 97.04 ಫಲಿತಾಂಶ ಬಂದಿದೆ. 41 ವಿದ್ಯಾರ್ಥಿ ಗಳು 600 ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. 100 ಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದು ಕೊಂಡಿವೆ. ಈ ಪೈಕಿ 48 ಸರ್ಕಾರಿ ಶಾಲೆಗಳು, 9 ಅನುದಾನಿತ ಶಾಲೆ, 43 ಅನುದಾನ ರಹಿತ ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.

ಗ್ರಾಮೀಣ ಪ್ರದೇಶದಲ್ಲಿ ಶೇ. 87.99, ನಗರ ಪ್ರದೇಶದಲ್ಲಿ ಶೇ. 84.32 ಫಲಿತಾಂಶ ದಾಖಲಾಗಿದ್ದು, ಶೇ. 82.88 ರಷ್ಟು ಬಾಲಕರು, ಶೇ. 90.70 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಜಿಲ್ಲೆ ಶೇ. 83.39 ಫಲಿತಾಂಶ ಪಡೆದುಕೊಂಡಿದೆ.ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಚಿಕ್ಕಮಗಳೂರಿನ ಸೇಂಟ್‌ ಮೇರಿಸ್‌ ಪ್ರೌಢಶಾಲೆಯ ನಮ್ರತಾ, ಉಪ್ಪಳ್ಳಿಯ ಮಾಡೆಲ್‌ ಶಾಲೆಯ ಲಾವಣ್ಯ, ತರೀಕೆರೆಯ ಸಾಯಿ ಇಂಟರ್‌ ನ್ಯಾಷನಲ್‌ ಶಾಲೆಯ ಮೋನಿಷಾ ಅವರು 625ಕ್ಕೆ 619 ಅಂಕಗಳನ್ನು ಪಡೆದಿದ್ದಾರೆ. ಶೃಂಗೇರಿಯ ಜೆಸೀಸ್‌ ಶಾಲೆ ಪ್ರಜ್ಞಾ, ಚಿಕ್ಕಮಗಳೂರಿನ ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢಶಾಲೆಯ ನಿಯೋಲಾ ಕ್ರಿಸ್ಟಲ್‌ ಲೋಬೋ ಅವರು 618 ಅಂಕ ಪಡೆದಿದ್ದು,. ಕೊಪ್ಪ ತಾಲೂಕಿನ ಬಸರಿಕಟ್ಟೆಯ ಸದ್ಗುರು ಪ್ರೌಢಶಾಲೆ ಅಜಿತ್‌ 617 ಅಂಕಗಳನ್ನು ಪಡೆದಿದ್ದಾರೆ.

----- ಪೋಟೋ --------

ನಮ್ರತಾ ಲಾವಣ್ಯ ಮೋನಿಷಾ ಪ್ರಜ್ಞಾ ನೀಯೋಲಾ ಕ್ರಿಸ್ಟಲ್ ಲೋಬೋ