ಸಿದ್ದಾಪುರ: ಕಳೆದ ಬಾರಿಗಿಂತ ಶೇ. 1.73 ಫಲಿತಾಂಶ ಹೆಚ್ಚಳ

| Published : May 10 2024, 01:34 AM IST

ಸಿದ್ದಾಪುರ: ಕಳೆದ ಬಾರಿಗಿಂತ ಶೇ. 1.73 ಫಲಿತಾಂಶ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ತಾಲೂಕಿನಲ್ಲಿ ೬೦೨ ವಿದ್ಯಾರ್ಥಿಗಳು ಹಾಗೂ ೬೧೩ ವಿದ್ಯಾರ್ಥಿನಿಯರು ಸೇರಿದಂತೆ ೧೨೧೫ ವಿದ್ಯಾರ್ಥಿಗಳ ಪರೀಕ್ಷೆಗೆ ಕುಳಿತಿದ್ದರು. ಅವರಲ್ಲಿ ೫೭೮ ವಿದ್ಯಾರ್ಥಿಗಳು, ೬೦೮ ವಿದ್ಯಾರ್ಥಿಗಳು ಸೇರಿದಂತೆ ಒಟ್ಟೂ ೧೧೮೬ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ.

ಸಿದ್ದಾಪುರ: ೨೦೨೪ರ ಎಸ್ಎಸ್ಎಲ್‌ಸಿ.ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ. ೯೭.೬೧ ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ. ೧.೭೩ ಫಲಿತಾಂಶ ಹೆಚ್ಚಳವಾಗಿದೆ. ೫ ವಿದ್ಯಾರ್ಥಿನಿಯರು ರಾಜ್ಯಮಟ್ಟದಲ್ಲಿ ಗರಿಷ್ಠ ಅಂಕ ಪಡೆದಿದ್ದಾರೆ. ೨೦ ಪ್ರೌಢಶಾಲೆಗಳು ಶೇ. ೧೦೦ ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ೬೦೨ ವಿದ್ಯಾರ್ಥಿಗಳು ಹಾಗೂ ೬೧೩ ವಿದ್ಯಾರ್ಥಿನಿಯರು ಸೇರಿದಂತೆ ೧೨೧೫ ವಿದ್ಯಾರ್ಥಿಗಳ ಪರೀಕ್ಷೆಗೆ ಕುಳಿತಿದ್ದರು. ಅವರಲ್ಲಿ ೫೭೮ ವಿದ್ಯಾರ್ಥಿಗಳು, ೬೦೮ ವಿದ್ಯಾರ್ಥಿಗಳು ಸೇರಿದಂತೆ ಒಟ್ಟೂ ೧೧೮೬ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ ಒಟ್ಟೂ ೩೩ ಪ್ರೌಢಶಾಲೆಗಳಲ್ಲಿ ೨೦ ಪ್ರೌಢಶಾಲೆಗಳು ಶೇ. ೧೦೦ ಫಲಿತಾಂಶ ಪಡೆದುಕೊಂಡಿವೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವರ್ಷಾ ಮಡ್ಲೂರು ಹಾಗೂ ಲಿಟ್ಲ ಫ್ಲವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಾಗಶ್ರೀ ಆರ್. ಇಬ್ಬರೂ ತಲಾ ೬೨೧ ಅಂಕ ಪಡೆದು ತಾಲೂಕಿಗೆ ಮೊದಲ ಸ್ಥಾನ, ರಾಜ್ಯಮಟ್ಟದಲ್ಲಿ ೫ನೇ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಣದ ಪ್ರಶಾಂತಿ ಆಂಗ್ಲ ಮಾಧ್ಯಮಪ್ರೌಢಶಾಲೆಯ ದಿಶಾ ಶಾನಭಾಗ ೬೧೮ ಅಂಕ ಪಡೆದು ತಾಲೂಕಿಗೆ ೨ನೇ ಸ್ಥಾನ, ರಾಜ್ಯಮಟ್ಟದಲ್ಲಿ ೮ನೇ ಸ್ಥಾನ, ನಾಣಿಕಟ್ಟಾದ ಸರ್ಕಾರಿ ಪ್ರೌಢಶಾಲೆಯ ಎನ್.ಎಸ್. ಸಾಧನಾ ೬೧೭ ಅಂಕ ಪಡೆದು ತಾಲೂಕಿಗೆ ೩ನೇ ಸ್ಥಾನ, ರಾಜ್ಯಮಟ್ಟದಲ್ಲಿ ೯ನೇ ಸ್ಥಾನ, ಬಿದ್ರಕಾನ ಪ್ರೌಢಶಾಲೆಯ ಸಿಂಚನಾ ಎಂ. ಹೆಗಡೆ ೬೧೬ ಅಂಕ ಪಡೆದು ತಾಲೂಕಿಗೆ ೪ನೇ ಸ್ಥಾನ, ರಾಜ್ಯಮಟ್ಟದಲ್ಲಿ ೧೦ನೇ ಸ್ಥಾನ ಪಡೆದಿದ್ದಾರೆ ಎಂದರು. ಶಿಕ್ಷಣ ಇಲಾಖೆಯ ಚೈತನ್ಯಕುಮಾರ್, ಎಂ.ಬಿ. ನಾಯ್ಕ, ಮಹೇಶ ಹೆಗಡೆ ಇದ್ದರು.