ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲಿ ಚಿತ್ರದುರ್ಗ ಜಿಲ್ಲೆಗೆ ಶೇ.72.85 ಫಲಿತಾಂಶ

| Published : May 10 2024, 01:31 AM IST

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲಿ ಚಿತ್ರದುರ್ಗ ಜಿಲ್ಲೆಗೆ ಶೇ.72.85 ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21 ನೇ ಸ್ಥಾನ ದಾಖಲು ಮಾಡಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಈ ಬಾರಿಯ ಎಸ್ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21 ನೇ ಸ್ಥಾನ ದಾಖಲು ಮಾಡಿದೆ. ಒಟ್ಟಾರೆ ಈ ಬಾರಿ ಶೇ.72.85 ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಸಿಂಹಪಾಲು ಪಡೆದಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 22,275 ವಿದ್ಯಾರ್ಥಿಗಳಲ್ಲಿ 16,227 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 11107 ಬಾಲಕರು, 11168 ಬಾಲಕಿಯರು ಸೇರಿದಂತೆ ಒಟ್ಟು 22, 275 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಈ ಪೈಕಿ 7207 ಬಾಲಕರು, 9020 ಬಾಲಕಿಯರು ಸೇರಿದಂತೆ ಒಟ್ಟು 16,227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಚಳ್ಳಕೆರೆ ತಾಲೂಕಿನಲ್ಲಿ 1753 ಬಾಲಕರು, 1932 ಬಾಲಕಿಯರು ಸೇರಿದಂತೆ ಒಟ್ಟು 3685 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ 1830 ಬಾಲಕರು, 2349 ಬಾಲಕಿಯರು ಸೇರಿದಂತೆ ಒಟ್ಟು 4179 ವಿದ್ಯಾರ್ಥಿಗಳು, ಹಿರಿಯೂರು ತಾಲೂಕಿನಲ್ಲಿ 1140 ಬಾಲಕರು, 1496 ಬಾಲಕಿಯರು ಸೇರಿ 2636 ವಿದ್ಯಾರ್ಥಿಗಳು, ಹೊಳಲ್ಕೆರೆಯಲ್ಲಿ 900 ಬಾಲಕರು, 1174 ಬಾಲಕಿಯರು ಸೇರಿ 2074, ಹೊಸದುರ್ಗದಲ್ಲಿ 917 ಬಾಲಕರು, 1231 ಬಾಲಕಿಯರು ಸೇರಿದಂತೆ ಒಟ್ಟು 2148 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ 667 ಬಾಲಕರು, 838 ಬಾಲಕಿಯರು ಸೇರಿದಂತೆ 1505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಮೇಲುಗೈ ಸಾಧಿಸಿದ್ದಾರೆ. ಒಟ್ಟು 15927 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ 11900 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.74.71 ರಷ್ಟು ಉತ್ತೀರ್ಣತೆಯ ಸಾಧನೆ ಮೆರೆದಿದ್ದಾರೆ.

ನಗರ ಪ್ರದೇಶದಲ್ಲಿ 6348 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 4327 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.68.16 ರಷ್ಟು ಸಾಧನೆ ತೋರಿದ್ದಾರೆ. ಜಿಲ್ಲೆಯ 157 ಸರ್ಕಾರಿ ಶಾಲೆಯ 8377 ವಿದ್ಯಾರ್ಥಿಗಳ ಪೈಕಿ 6174 ವಿದ್ಯಾರ್ಥಿಗಳು, 180 ಅನುದಾನಿತ ಶಾಲೆಗಳ 8860 ವಿದ್ಯಾರ್ಥಿಗಳ ಪೈಕಿ 5866 ವಿದ್ಯಾರ್ಥಿಗಳು, 137 ಅನುದಾನ ರಹಿತ ಶಾಲೆಗಳ 5038 ವಿದ್ಯಾರ್ಥಿಗಳ ಪೈಕಿ 4187 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಜಿಲ್ಲೆಯಲ್ಲಿ 14 ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ.

ಚಿತ್ರದುರ್ಗ ನಗರದ ವಿದ್ಯಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಯ್.ಸಿ.ಐ, ಹಿರಿಯೂರಿನ ರಾಷ್ಟಿಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಹಿರಣ್ಯಮಯೈ.ಎಂ.ಎಸ್, ತನುಶ್ರೀ.ಟಿ. ಮೊಳಕಾಲ್ಮೂರಿನ ಸರ್.ಎಂ.ವಿ ಆಂಗ್ಲ ಮಾಧ್ಯಮ ಶಾಲೆಯ ಅಸರ್ ಮಹೀನ್.ಎಂ 625 ಅಂಕಗಳಿಗೆ 620 ಅಂಕ ಗಳಿಸಿದ್ದಾರೆ. ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಶಾಲೆಯ ಭುವನೇಶ್ವರಿ ಜಿ.ಎಸ್. ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಪೂಜಿತಾ.ಎಸ್, ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಶಾಲೆಯ ಎಸ್.ಪ್ರೀತಿ, ಹೊಳಲ್ಕೆರೆಯ ಎಸ್.ಜೆಎಂ ಇಂಗ್ಲಷ್ ಮೀಡಿಯಂ ಶಾಲೆಯ ನಂದನ್.ಸಿ.ಕೆ 625 ಅಂಕಗಳಿಗೆ 618 ಅಂಕ ಗಳಿಸಿದ್ದಾರೆ.

ಚಿತ್ರದುರ್ಗ ನಗರದ ವಿದ್ಯಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಅಭಿನವ್.ಕೆ.ಆರ್, ಭರಮ ಸಾಗರದ ಡಿ.ವಿ.ಎಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಭಾವನ.ಹೆಚ್.ಎಂ, ಹಿರಿಯೂರು ತಾಲೂಕಿನ ರಾಷ್ಟ್ರೀಯ ಅಕಾಡೆಮಿ ಶಾಲೆಯ ಸೃಜನ್ ಸಾಗರ್ ಆರ್.ಕೆ , ಇಂದಿರಾಗಾಂಧಿ ವಸತಿ ಶಾಲೆಯ ನವ್ಯಶ್ರೀ.ಆರ್, ಮೊರಾರ್ಜಿ ದೇಸಾಯಿ ಶಾಲೆಯ ಸಂಜಯ್.ಎಸ್ ಹಾಗೂ ಹಿರಿಯೂರು ನಗರದ ಪ್ರೆಸಿಡೆನ್ಸಿ ಇಂಗ್ಲೀಷ್ ಶಾಲೆಯ ಮನೋಜ್ಞ.ಜಿ.ಪಿ 625 ಅಂಕಗಳಿಗೆ 616 ಅಂಕ ಗಳಿಸಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸಿರುದ್ದೀನ್ ತಿಳಿಸಿದ್ದಾರೆ.ಹೊಳಲ್ಕೆರೆ ಫಸ್ಟ್: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲೂಕು ಶೇ.81.21 ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನಗಳಿಸಿದೆ. ಉಳಿದಂತೆ ಚಿತ್ರದುರ್ಗ ಶೇ 68.27, ಹಿರಿಯೂರು 75.04, ಹೊಸದುರ್ಗ 70.06, ಮೊಳಕಾಲ್ಮುರು ತಾಲೂಕು ಶೇ.71.91ರಷ್ಟು ಫಲಿತಾಂಶ ಪಡೆದಿದೆ.ಚಳ್ಳಕೆರೆಗೆ ತೃಪ್ತಿಕರ ಫಲಿತಾಂಶ

ಚಳ್ಳಕೆರೆ: ಪ್ರಸ್ತುತ ೨೦೨೪ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು ತಾಲ್ಲೂಕಿನಾದ್ಯಂತ ಸಮಾಧಾನಕರ ಫಲಿತಾಂಶ ಲಭ್ಯವಾಗಿದೆ.ಸರಾಸರಿ ಶೇ.೭೫.೫೪ರಷ್ಟು ಫಲಿತಾಂಶ ದಾಖಲಿಸಿದೆ. ಕಳಪೆಯಲ್ಲದಿದ್ದರೂ ಉತ್ತಮ ಫಲಿತಾಂಶ ಪಡೆಯಲು ಹಗಲಿರುಳು ಶ್ರಮಿಸಿದ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿಷಯ ಪರಿವೀಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದ್ದಾರೆ.

ಅವರು, ಈ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿರೀಕ್ಷೆಗಿಂತ ಕಡಿಮೆಯಾದರೂ ಉತ್ಸಾಹವನ್ನು ತುಂಬುವ ಫಲಿತಾಂಶವಾಗಿದೆ. ಈ ಬಾರಿ ಒಟ್ಟು ೪೮೩೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ ಗಂಡು ೨೪೮೨, ಹೆಣ್ಣು ೨೩೫೧ ಅದರಲ್ಲಿ ೩೬೫೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಂಡು ೧೭೩೩, ಹೆಣ್ಣು ೧೯೧೭. ನಗರದ ವಾಸವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಶ್ರೇಯ ೬೨೫ ಅಂಕಕ್ಕೆ ೬೧೪ ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಹೊಂಗಿರಣ ಶಾಲೆಯ ಟಿ.ನಂದಿನಿ-೬೧೩, ಟಿ.ಸುಮುಖ-೬೧೨ ಅಂಕ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಆದರ್ಶ ವಿದ್ಯಾಲಯದ ಶ್ರೇಯಶ್ರೀ-೫೯೭ ಅಂಕ, ಬೆಳಗೆರೆ ನಾರಾಯಣಪುರದ ಸೀತಾರಾಮ ಪ್ರೌಢಶಾಲೆಯ ವಿದ್ಯಾರ್ಥಿ ಜಗದೀಶ್-೬೦೫ ಅಂಕ ಪಡೆದಿದ್ದಾರೆ.ಹಿರಿಯೂರಿನದು ಗುರುತರ ಸಾಧನೆ

ಹಿರಿಯೂರು: ತಾಲೂಕಿನಲ್ಲಿ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 1642 ಬಾಲಕರು ಹಾಜರಾಗಿ 1142 ಬಾಲಕರು ಉತ್ತೀರ್ಣರಾಗಿರುತ್ತಾರೆ. 1792 ಬಾಲಕಿಯರು ಹಾಜರಾಗಿ 1493 ಬಾಲಕಿಯರು ಉತ್ತೀರ್ಣರಾಗಿರುತ್ತಾರೆ. 500 ಬಾಲಕರು ಮತ್ತು 299 ಬಾಲಕಿಯರು ಅನುತ್ತೀರ್ಣರಾಗಿರುತ್ತಾರೆ. ಒಟ್ಟು ಹಿರಿಯೂರು ತಾಲೂಕಿನ ವಾರ್ಷಿಕ ಫಲಿತಾಂಶ ಶೇ.76.73 ಬಂದಿದೆ.ತಾಲೂಕಿನಲ್ಲಿ 39 ಸರ್ಕಾರಿ ಶಾಲೆಗಳಿದ್ದು, ಅದರಲ್ಲಿ 877 ಬಾಲಕರು ಮತ್ತು 871 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 589 ಬಾಲಕರು ಮತ್ತು 751 ಬಾಲಕಿಯರು ಉತ್ತೀರ್ಣರಾಗಿ 288 ಬಾಲಕರು ಮತ್ತು 120 ಬಾಲಕಿಯರು ಅನುತ್ತೀರ್ಣರಾಗಿ ಶೇಕಡ 76.65 ಫಲಿತಾಂಶ ಗಳಿಸಿದ್ದಾರೆ.

ತಾಲೂಕಿನ 24 ಅನುದಾನಿತ ಪ್ರೌಢಶಾಲೆಗಳಲ್ಲಿ 480 ಬಾಲಕರು 654 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 303 ಬಾಲಕರು 488 ಬಾಲಕಿಯರು ಉತ್ತೀರ್ಣರಾಗಿ 177 ಬಾಲಕರು ಮತ್ತು 166 ಬಾಲಕಿಯರು ಅನುತ್ತೀರ್ಣರಾಗಿರುತ್ತಾರೆ. ಶೇಕಡ 69.75 ಗಳಿಸಿರುತ್ತಾರೆ. ಅನುದಾನ ರಹಿತ ಪ್ರೌಢಶಾಲೆಗಳಲ್ಲಿ 285 ಬಾಲಕರಿದ್ದು, 267 ಬಾಲಕಿ ಯರು ಪರೀಕ್ಷೆಗೆ ಹಾಜರಾಗಿ 250 ಬಾಲಕರು ಮತ್ತು 254 ಬಾಲಕಿಯರು ಉತ್ತೀರ್ಣರಾಗಿ 35 ಬಾಲಕರು ಮತ್ತು 13 ಬಾಲಕಿಯರು ಅನುತ್ತೀರ್ಣರಾಗಿರುತ್ತಾರೆ. ಒಟ್ಟು ಶೇಕಡ 91.3 0 ಫಲಿತಾಂಶ ಗಳಿಸಿದ್ದಾರೆ.ಮೊಳಕಾಲ್ಮುರಲ್ಲೂ ಬಾಲಕಿಯರ ಮೇಲುಗೈ

ಮೊಳಕಾಲ್ಮುರು: ಎಸ್ಎಸ್ಎಲ್ ಸಿ ಪರೀಕ್ಷೆ ಪಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಈ ಬಾರಿ ಶೇ. 73.09 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಈ ಪೈಕಿ ತಾಲೂಕಿನಲ್ಲಿ ಬಾಲಕೀಯರೇ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ತಾಲೂಕಿನ 36 ಪ್ರೌಢಶಾಲೆಗಳ ಪೈಕಿ 2023-24 ನೇ ಸಾಲಿಗೆ 1054 ಬಾಲಕ 998 ಬಾಲಕೀಯರು ಸೇರಿದಂತೆ ಒಟ್ಟು 2052 ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 665 ಬಾಲಕ 835 ಬಾಲಕಿಯರು ಸೇರಿದಂತೆ ಒಟ್ಟು 1500 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರಿಗೆ ಹೋಲಿಕೆ ಮಾಡಿ ಕೊಂಡಲ್ಲಿ ಈ ಬಾರಿ 835 ಮಂದಿ ಬಾಲಕಿಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ.

ಆಶ್ರ ಮಹೀನ್‌ ಟಾಪರ್ : ಈ ಬಾರಿಯ ಪಲಿತಾಂಶದಲ್ಲಿ ಪಟ್ಟಣದ ಸರ್ ಎಂ.ವಿ ಶಾಲೆಯ ವಿದ್ಯಾರ್ಥಿನಿ ಎಂ.ಆಶ್ರ ಮಹೀನ್ 620 ಅಂಕ ಗಳಿಸಿ ತಾಲೂಕಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಇದರೊಟ್ಟಿಗೆ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಟಿ.ಮನೋಹರ 612, ಸ್ನೇಹ 605, ದೇವಸಮುದ್ರ ಇಂದಿರಾ ಗಾಂಧಿ ವಸತಿ ಶಾಲೆಯ ಪಿ.ಕೌಟಿಲ್ಯ 606, ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢ ಶಾಲೆಯ ಅನುಶ್ರೀ 605 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಸಿರಿಗೆರೆ ವಿದ್ಯಾರ್ಥಿಗಳ ಗಣನೀಯ ಸಾಧನೆ

ಸಿರಿಗೆರೆ: ಇಂದು ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಪ್ರದೇಶದ ಶಾಲೆಗಳ ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ.ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೇಖಡ ೬೭.೬೭ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ. ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ ೫೦ ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ ೪೩ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಮೇಘಾ ಎಂ. ಕುಂದಗೋಳ ಶೇ.೮೯.೯೨ ಅಂಕಗಳಿಸಿ ಶಾಲೆಯ ಟಾಪರ್‌ ಆಗಿದ್ದಾಳೆ. ತರಳಬಾಳು ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಈ ಬಾರಿ ಶೇಕಡ ೯೦ ಫಲಿತಾಂಶ ಬಂದಿದೆ. ಶಾಲೆಯ ಎಚ್.‌ರವಿರಾಜ್‌ ಶೇ. ೯೨.೧೬, ನೀತು ಸಿ. ಚಿನ್ನಪ್ಪನವರ್‌ ಶೇಕಡ ೯೦.೫೬ ಅಂಕಗಳನ್ನು ಗಳಿಸಿ ಶಾಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ.ಸಮೀಪದ ಹಳವುದರ ಗ್ರಾಮದಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಗೆ ಈ ಬಾರಿ ಶೇ. ೯೯ ಫಲಿತಾಂಶ ಲಭಿಸಿದೆ. ಎ.ಯು.ಅಶ್ವಿನಿ ಮತ್ತು ಎಸ್.‌ ಧನುಶ್ರೀ ಶೇ. ೯೫ ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗರಾಗಿದ್ದಾರೆ. ದೊಡ್ಡಾಲಗಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಬಾರಿ ಶೇ.೯೧ ರಷ್ಟು ಫಲಿತಾಂಶ ದಾಖಲಿಸಿದ್ದು, ಶಾಲೆಯ ಎಸ್.ಟಿ. ಪಲ್ಲವಿ ಹಾಗೂ ಜಿ.ಎಚ್.‌ ಛಾಯಾ ಮೊದಲ ಸ್ಥಾನ ಗಳಿಸಿದ್ದಾರೆ.ಇನ್ನು, ಕಡ್ಲೇಗುದ್ದು ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಗೆ ಶೇ. ೯೫.೧೨ ಫಲಿತಾಂಶ ಲಭ್ಯವಾಗಿದೆ. ಶಾಲೆಯ ಪ್ರಜ್ವಲ್‌ ೫೫೮ ಅಂಕಗಳನ್ನು ಗಳಿಸಿ ಶಾಲೆಗೆ ಮೊದಲಿಗನಾಗಿದ್ದಾನೆ. ಅದೇ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ೯೭.೮೨ ರಷ್ಟು ಫಲಿತಾಂಶವನ್ನು ಶಾಲೆಗೆ ತಂದುಕೊಟ್ಟಿದ್ದಾರೆ. ಆರ್.‌ ಕೆಂಚಲಾ ಶೇ. ೯೦.೫೬ ಅಂಕಗಳಿಸಿ ಶಾಲೆಗೆ ಮೊದಲಿಗಳಾಗಿದ್ದಾಳೆ.