ಕುಡಿಯುವ ನೀರು ಕದಿಯುತ್ತಿರುವ ಕೆಲ ರೈತರು: ಕಾನೂನು ಕ್ರಮವಿಲ್ಲವೇಕೆ?

| Published : May 09 2024, 01:02 AM IST / Updated: May 09 2024, 01:03 AM IST

ಕುಡಿಯುವ ನೀರು ಕದಿಯುತ್ತಿರುವ ಕೆಲ ರೈತರು: ಕಾನೂನು ಕ್ರಮವಿಲ್ಲವೇಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಭದ್ರಾ ನದಿಯಿಂದ ಕುಡಿಯುವ ನೀರೋದಗಿಸುವ ಪೈಪ್‌ಲೈನ್ ಗಳಿಗೆ ಕೆಲವು ರೈತರು ಕನ್ನ ಹಾಕಿ ತಮ್ಮ ತೋಟಗಳನ್ನು ಉಳಿಸಿಕೊಳ್ಳುತ್ತಿರುವುದು ಯಾವ ನ್ಯಾಯ. ಕುಡಿವ ನೀರನ್ನು ಕದಿಯುತ್ತಿರುವವರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕಾಂಗ್ರೆಸ್‌ ಪುರಸಭಾ ಸದಸ್ಯ ಬಿ.ಕೆ.ಶಶಿಧರ್ ಪ್ರಶ್ನಿಸಿದರು.

- ಬೆಟ್ಟದಹಳ್ಳಿ ಬಳಿ ಸ್ಕವರ್ ವಾಲ್ ಓಪನ್ ಮಾಡಿ ಕೆರೆಗೆ ಹರಿಸುತ್ತಿರುವುದಕ್ಕೆ ಪುರಸಭಾ ಸದಸ್ಯರ ಆಕ್ರೋಶಕನ್ನಡಪ್ರಭ ವಾರ್ತೆ, ಬೀರೂರು.ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಭದ್ರಾ ನದಿಯಿಂದ ಕುಡಿಯುವ ನೀರೋದಗಿಸುವ ಪೈಪ್‌ಲೈನ್ ಗಳಿಗೆ ಕೆಲವು ರೈತರು ಕನ್ನ ಹಾಕಿ ತಮ್ಮ ತೋಟಗಳನ್ನು ಉಳಿಸಿಕೊಳ್ಳುತ್ತಿರುವುದು ಯಾವ ನ್ಯಾಯ. ಕುಡಿವ ನೀರನ್ನು ಕದಿಯುತ್ತಿರುವವರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕಾಂಗ್ರೆಸ್‌ ಪುರಸಭಾ ಸದಸ್ಯ ಬಿ.ಕೆ.ಶಶಿಧರ್ ಪ್ರಶ್ನಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಜೀವಜಲ ರಕ್ಷಿಸಿ ಸಾರ್ವಜನಿಕರಿಗೆ ನೀಡಲೆಂದು ಜಲಾಶಯಗಳಲ್ಲಿ ಇಂತಿಷ್ಟು ನೀರು ಮೀಸಲಿಟ್ಟು ಬೇಸಿಗೆ ದೂಡಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಖಾಸಗಿ ರೈತರು ತಮ್ಮ ತೋಟ ಉಳಿಸಿಕೊಳ್ಳಲು ಕುಡಿಯುವ ನೀರಿಗೆ ಕನ್ನ ಹಾಕಿದರೆ ಹೇಗೆ ಎಂದರು.ಬೀರೂರು ಪುರಸಭೆ 23ವಾರ್ಡಗಳನ್ನು ಹೊಂದಿದ್ದು, ಪ್ರತಿ ದಿನ 3ಎಂ.ಎಲ್.ಡಿ ನೀರು ಭದ್ರಾ ನದಿಯಿಂದ ಸಿಗಬೇಕಾಗಿದೆ. ಆದರೆ ಸದ್ಯ ಬೇಸಿಗೆಯಾಗಿರುವುದರಿಂದ ನಮಗೆ 2ಎಂ.ಎಲ್.ಡಿ ಮಾತ್ರ ಲಬ್ಯವಾಗುತ್ತಿದ್ದು, ಅದರಲ್ಲೆ 16 ವಾರ್ಡಗಳಿಗೆ ನೀರನ್ನು ವಾರದ ೫ ದಿನಗಳಿಗೊಮ್ಮೆ ನೀಡಲಾಗುತ್ತಿದೆ. ಮಾರ್ಗದ ಕ್ಯಾಂಪ್ ನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗದ ಕಾರಣ 7ವಾರ್ಡಗಳಿಗೆ ಟ್ಯಾಂಕರ್ ಮೂಲಕ ಮತ್ತು ಬೋರ್ ನೀರನ್ನು ನೀಡುತ್ತಿದೆ. ನೀರಿಗಾಗಿ ಪ್ರತಿ ವಾರ್ಡಗಳಲ್ಲಿ ಜನ ಹಾಹಾಕಾರ ಎದುರಿಸುತ್ತಾ, ಪುರಸಭಾ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹದರಲ್ಲಿ ಕುಡಿಯುವ ನೀರನ್ನು ಕದ್ದು ತೋಟ ಉಳಿಸಿಕೊಳ್ಳುವುದು ಸರಿಯೇ. ಜನ ನೀರು ಸಿಕ್ಕಿ ಬದುಕಿದ್ರೆ ಸಾಕು ಎನ್ನುವ ಸಮಯದಲ್ಲಿ ಇಂತಹ ಹೇಯ ಕೃತ್ಯ ಇದು ಎಂದರು.ಈ ಹಿಂದೆ ಸಹ ಲಕ್ಕವಳ್ಳಿ ಜಾಕ್ ವೆಲ್ ನಿಂದ ಬಂದಿರುವ ಪೈಪ್ ಲೈನ್ ಬೀರೂರು ಕಡೆಗೆ ಬಂದಿರುವ ದುಗ್ಲಾಪುರ, ಅಮೃತಾ ಪುರದ ರೈತರು ವಾಲ್ ಗಳನ್ನು ಒಡೆದು ಮೋಟಾರ್ ಬಳಸಿ ಕದ್ದು ನೀರು ಹಾಯಿಸಿಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟುವಂತೆ ಹಿಂದಿನ ಮುಖ್ಯಾಧಿಕಾರಿ ಮತ್ತು ಪುರಸಭಾ ಸದಸ್ಯರು ತರೀಕೆರೆ ಪೊಲೀಸ್ ಉಪವಿಭಾಗಕ್ಕೆ ದೂರು ನೀಡಿದ್ದರು.ಆಗ ಅವರು ರೈತರನ್ನು ಕರೆಸಿ ಅವರಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದರು. ಆದರೆ ಪದೇ ಪದೇ ಬರಗಾಲದ ಹಣೆ ಪಟ್ಟಿ ಹೊತ್ತಿರುವ ಕಡೂರು- ಬೀರೂರಿನ ಕುಡಿಯುವ ನೀರನ್ನು ಕದಿಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ತರೀಕೆರೆ ಉಪವಿಭಾಧಿಕಾರಿ ಇಂತಹ ರೈತರ ವಿರುದ್ಧ ಕಠಿಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಆನಂದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಘಟನೆ ನಡೆದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಭಾಗ್ಯಮ್ಮ ಅಧಿಕಾರಿಗಳೊಂದಿಗೆ ಭೇಟಿ, ಹಾನಿಯಾದ ವಾಲ್ವ್ ನ್ನು ಪರಿಶೀಲನೆ ನಡೆಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಾಲ್ವ್ ಗೆ ಒಪನ್ ಇದ್ದ ಪರಿಣಾಮ ರೈತರು ನಟ್ಟು ಗಳನ್ನು ಬಿಟ್ಟಿ ನೀರನ್ನು ಹರಿಸಿಕೊಂಡಿದ್ದಾರೆ. ಬೆಟ್ಟದಹಳ್ಳಿಗೆ ಭದ್ರಾ ನದಿಯಿಂದಲೇ ಕುಡಿವ ನೀರು ಸರಬರಾಜು ಇದ್ದರು ಕೆಲವು ರೈತರು ಇಂತಹ ಕೃತ್ಯ ಎಸಗಿದ್ದಾರೆ. ಇದರ ವಿರುದ್ಧ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅವರು ಸಹ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ತಪ್ಪು ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ ಎಂದರು.೮ ಬೀರೂರು ೧ ಕಡೂರು- ಬೀರೂರಿಗೆ ಬರುತ್ತಿರುವ ಭದ್ರಾಕುಡಿಯುವ ನೀರಿನ ಪೈಪ್ ನ ವಾಲ್ವ್ ಒಡೆದು, ತರೀಕೆರೆ ಸಮೀಪದ ಬೆಟ್ಟದಹಳ್ಳಿ ಕದ್ದು ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿರುವುದು.೮ ಬೀರೂರು ೨ಭದ್ರಾಕುಡಿಯುವ ನೀರಿನ ಪೈಪ್‌ನ ವಾಲ್ವ್ ಒಡೆದು, ಕದ್ದು ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿರು ಸ್ಥಳಕ್ಕೆ ಬೀರೂರು ಪುರಸಭಾ ಮುಖ್ಯಾಧಿಕಾರಿ ಭಾಗ್ಯಮ್ಮ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿರುವುದು.