ಬೆಳಗಾವಿ ಜಿಲ್ಲೆಗೆ ಖಾನಾಪುರ ತಾಲೂಕಿಗೆ 2ನೇ ಸ್ಥಾನ

| Published : May 10 2024, 01:34 AM IST

ಬೆಳಗಾವಿ ಜಿಲ್ಲೆಗೆ ಖಾನಾಪುರ ತಾಲೂಕಿಗೆ 2ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ.69.14 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ನಮ್ಮ ತಾಲೂಕು ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ ಗಳಿಸಿದೆ ಎಂದು ಬಿಇಒ ರಾಜೇಶ್ವರಿ ಕುಡಚಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ.69.14 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ನಮ್ಮ ತಾಲೂಕು ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ ಗಳಿಸಿದೆ ಎಂದು ಬಿಇಒ ರಾಜೇಶ್ವರಿ ಕುಡಚಿ ತಿಳಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರೀಕ್ಷೆ ಎದುರಿಸಿದವ 3,626 ವಿದ್ಯಾರ್ಥಿಗಳ ಪೈಕಿ 2507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.56.66 ಬಾಲಕರು ಮತ್ತು ಶೇ.81.66 ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಜಾಂಬೋಟಿ (ಅಮಟೆ) ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ನಂದಗಡದ ಆಕ್ಸಿಲಿಯಂ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದುಕೊಂಡಿವೆ. ತಾಲೂಕಿನ ಲಿಂಗನಮಠ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಕ್ಷಿ ನೀಲಕಂಠ ವಿಜಾಪುರ 614 ಅಂಕಗಳೊಂದಿಗೆ (ಶೇ.98.24) ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಂಗೊಳ್ಳಿ ರಾಯಣ್ಣ ಸನಿವಾಸ ಶಾಲೆ ನಂದಗಡದ ವಿದ್ಯಾರ್ಥಿನಿ ಭಾಗ್ಯಶ್ರೀ ಕಲ್ಲಪ್ಪ ಕಲಾರಕೊಪ್ಪ 611 ಅಂಕಗಳೊಂದಿಗೆ ದ್ವಿತೀಯ ಮತ್ತು ಅದೇ ಶಾಲೆಯ ಮಂಜುಳಾ ಶಂಖರ ಬಿರಾದಾರ 608 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.