ಜನರ ಹಿತದೃಷ್ಠಿಯಿಂದ ನಿರಪರಾಧಿಗಳ ಬಿಡುಗಡೆ ಮಾಡಿ

| Published : May 08 2024, 01:06 AM IST

ಜನರ ಹಿತದೃಷ್ಠಿಯಿಂದ ನಿರಪರಾಧಿಗಳ ಬಿಡುಗಡೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ನಡೆದ ಗಲಭೆ ಪ್ರಕರಣ ಎಲ್ಲೋ ತಪ್ಪು ನಡೆದಿದೆ ಸರ್ಕಾರ ಜಿಲ್ಲಾಡಳಿತ ಗಮನಹರಿಸಿ ಗ್ರಾಮದ ಜನರ ಹಿತದೃಷ್ಠಿಯಿಂದ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತ ಹನೂರು

ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ನಡೆದ ಗಲಭೆ ಪ್ರಕರಣ ಎಲ್ಲೋ ತಪ್ಪು ನಡೆದಿದೆ ಸರ್ಕಾರ ಜಿಲ್ಲಾಡಳಿತ ಗಮನಹರಿಸಿ ಗ್ರಾಮದ ಜನರ ಹಿತದೃಷ್ಠಿಯಿಂದ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಹೇಳಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಗ್ರಾಪಂ ವ್ಯಾಪ್ತಿಯ ಇಂಡಿಗನತ್ತ, ಮೆಂದಾರೆ ಗ್ರಾಮಗಳಿಗೆ ಸಂಘಟನೆ ವತಿಯಿಂದ ಭೇಟಿ ನೀಡಿ ಸೌದಾರ್ಹತೆಯಿಂದ ಸಮಸ್ಯೆ ಬಗೆಹರಿಸಲು ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗೆ ಗಮನಹರಿಸಿ:

ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರು ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರುವ ಕುಗ್ರಾಮಗಳಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಪಡಿಸಲು ಇಚ್ಛಾಶಕ್ತಿ ಕೊರತೆಯಿಂದ ಚುನಾವಣಾ ಬಹಿಷ್ಕರಿಸಿ ಸೌಲಭ್ಯ ನೀಡುವಂತೆ ಶಾಂತಿಯುತವಾಗಿ ನಡೆಯುತ್ತಿದ್ದ ಮತದಾನದ ವೇಳೆ ಎಲ್ಲೋ ತಪ್ಪು ನಡೆದಿದೆ ಹೀಗಾಗಿ ಸರ್ಕಾರ ನ್ಯಾಯಾಂಗ ತನಿಖೆ ನಡೆಸಿ ಈ ಪ್ರಕರಣದಲ್ಲಿ ಬಂಧಿಸಿರುವ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕು ಜೊತೆಗೆ ಇಲ್ಲಿನ ಗ್ರಾಮಗಳ ಸ್ಥಿತಿಗತಿಯನ್ನು ಅರಿತು ಹಂತಹ ಹಂತವಾಗಿ ಶಾಶ್ವತವಾಗಿ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದರು.

ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಇವಿಎಂ ದ್ವಂಸ ಹಾಗೂ ಅಧಿಕಾರಿಗಳ ಮೇಲೆ ಹಲ್ಲೇ ನಡೆಸಿರುವ ಘಟನೆ ನಡೆಯಬಾರದಾಗಿತ್ತು ಇಂತಹ ಘಟನೆ ನಡೆದು ಗ್ರಾಮದಲ್ಲಿ ಅಶಾಂತಿ ಉಂಟಾಗಿದೆ. ಸಣ್ಣ ಮಕ್ಕಳು ತಂದೆ ತಾಯಿಗಳಿಗಾಗಿ ಎಲ್ಲಿ ಹೋಗಿದ್ದಾರೆ ಎಂಬ ಭಯದಲ್ಲಿ ಇದ್ದಾರೆ. ಹೀಗಾಗಿ ಏಳು ಜನ ಪ್ರಕರಣಕ್ಕೆ ಬೇಕಾಗಿರುವುದರಿಂದ ಪೊಲೀಸರಿಗೆ ಶರಣಾಗಿ ಗ್ರಾಮದ ಇತರ ದೃಷ್ಟಿಯಿಂದ ಸಣ್ಣ ಮಕ್ಕಳ ಹಿರಿಯರ ಗಮನದಲ್ಲಿಟ್ಟುಕೊಂಡು ಪೊಲೀಸರಿಗೆ ಬೇಕಾಗಿರುವರು ಶರಣಾಗಿ ಇಲ್ಲದಿದ್ದರೆ ಈ ಪ್ರಕರಣ ಇನ್ನು ಸಹ ವಿಳಂಬವಾಗಲಿದೆ ಎಂದರು .

ಸಿಎಂ ಬಳಿ ನಿಯೋಗ:

ಈ ಘಟನೆಯಿಂದ ಆಭದ್ರತೆಯಿಂದಿರುವ ಗ್ರಾಮದ ಜನರ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಮಲೆ ಮಹದೇಶ್ವರ ಬೆಟ್ಟ ಗ್ರಾಮಗಳ ಸೌಲಭ್ಯ ವಂಚಿತ ಆಗಿರುವ ಬಗ್ಗೆ ಮತ್ತು ಘಟನೆಯ ಬಗ್ಗೆ ಮುಖ್ಯಮಂತ್ರಿಗಳ ಬಳಿ ರಾಜ್ಯಮಟ್ಟದ ಸಂಘಟನೆಯ ಜೊತೆಗೂಡಿ ನಿಯೋಗ ತೆರಳಿ ಸಮಸ್ಯೆ ಬಗೆಹರಿಸಲು ಶ್ರಮಿಸುವುದಾಗಿ ಇಂಡಿಗನತ್ತ ಹಾಗೂ ಮೆಂದರೆ ಗ್ರಾಮಗಳ ನಿವಾಸಿಗಳಿಗೆ ಧೈರ್ಯ ತುಂಬಿ ಭರವಸೆ ನೀಡಿದರು ಚಂಗಡಿ ಗ್ರಾಮ ಸಹ ಸೌಲಭ್ಯಗಳು ನೀಡದೆ ಗ್ರಾಮದಿಂದ ಹೊರಬರಲು, ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ ಹೀಗಾಗಿ ಎಲ್ಲಾ ವಿಚಾರಗಳನ್ನು ಸಿಎಂ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗುವುದಾಗಿ ತಿಳಿಸಿದರು. ಜಾನುವಾರಗಳ ಪರದಾಟ:

ಇಂಡಿಗನತ್ತ ಗ್ರಾಮದಲ್ಲಿ ಘಟನೆಯಿಂದ ಇಡೀ ಗ್ರಾಮದ ಖಾಲಿಯಾಗಿರುವುದರಿಂದ ಜಾನುವಾರುಗಳ ಮಾಲೀಕರು ಬಂಧನ ಭೀತಿಯಿಂದ ಗ್ರಾಮ ತೊರೆದಿರುವುದರಿಂದ ಅವುಗಳಿಗೆ ನೀರು,ಮೇವು ನೀಡಲು ಯಾರು ಇಲ್ಲದೆ ಇರುವುದರಿಂದ ಪರದಾಡುತ್ತಿವೆ ಹೀಗಾಗಿ ಪ್ರಕರಣವನ್ನು ಸರ್ಕಾರ ಜನಜಾನುವಾರುಗಳ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತದ ಮೂಲಕ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಮತ್ತು ಇಲ್ಲಿನ ಜಾನುವಾರುಗಳಿಗೆ ಮೇವು ನೀರು ನೀಡಲು ಗಮನ ಹರಿಸಬೇಕು ಎಂದು ವೇಳೆಯಲ್ಲಿ ಒತ್ತಾಯಿಸಿದರು. ಮೆಂದರೆ ಗ್ರಾಮಕ್ಕೆ ಭೇಟಿ:

ಗ್ರಾಮದಲ್ಲಿರುವ ಜನರು ಏನು ತಿಳಿಯದ ಅವಿದ್ಯಾವಂತರು ಹೀಗಾಗಿ ಇಲ್ಲಿನ ಮೂಲ ನಿವಾಸಿಗಳ ಜೊತೆ ಧೈರ್ಯ ತುಂಬಿ ಘಟನೆಯ ಬಗ್ಗೆ ಸಾಂತ್ವನ ಹೇಳಿ ಗ್ರಾಮದಲ್ಲಿ ಕೆಲವರು ಅನಾರೋಗ್ಯದಿಂದ ಓಡಾಡದ ಸ್ಥಿತಿಯಲ್ಲಿ ಇದ್ದಾರೆ ಹೀಗಾಗಿ ಆರೋಗ್ಯ ಇಲಾಖೆ ಗ್ರಾಮಕ್ಕೆ ತೆರಳಿ ಚಿಕಿತ್ಸೆ ನೀಡಬೇಕು ಉಳಿದಂತಹ ಇರುವ ಗಿರಿಜನರಿಗೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಬೇಕು ಎಂದು ಇದೇ ವೇಳೆಯಲ್ಲಿ ಒತ್ತಾಯಿಸಿದರು.

ಈ ವೇಳೆ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಚಿಕ್ಕ ರಾಜು ಶಾಂತಕುಮಾರ್ ಗೌಡಳ್ಳಿ ಸೋಮಣ್ಣ ಗುಂಡ್ಲುಪೇಟೆ ಸಂಘಟನೆಯ ಪ್ರಸಾದ್ ನಾಗಪ್ಪ ಗಣೇಶ ಶ್ರೀನಿವಾಸ ಸೀನ ಅಂಬಳೆ ಶಿವಕುಮಾರ್ ಮಾಡ್ರಳ್ಳಿ ಪಾಪಣ್ಣ ಕೋಟೆ ಕೆರೆ ಮಾದೇವ್ ನಾಯ್ಕ ಹಾಗೂ 40ಕ್ಕೂ ಹೆಚ್ಚು ರೈತರು, ಪೊಲೀಸರು ಉಪಸ್ಥಿತರಿದ್ದರು.

.