ತರಬೇತಿ ಪಡೆದವರಿಗೆ ಶೀಘ್ರ ಉದ್ಯೋಗ ಲಭ್ಯ

| Published : May 09 2024, 12:45 AM IST

ತರಬೇತಿ ಪಡೆದವರಿಗೆ ಶೀಘ್ರ ಉದ್ಯೋಗ ಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಹಳಷ್ಟು ಮಂದಿಗೆ ಕೋಲಾರದಲ್ಲಿ ಡಿಪ್ಲೋಮೊ ಕಾಲೇಜ್ ಇರುವುದೇ ತಿಳಿದಿಲ್ಲ. ಟಕ್ನಿಕಲ್ ಡಿಪ್ಲೋಮೊ, ಟೊಲ್ಸ್ ಡಿಸೈನ್ ಮೇಕಿಂಗ್ ಜೊತೆಗೆ ಕಂಪ್ಯೋಟರ್ ಕಮ್ಯೂನಿಕೇಷನ್ ತರಬೇತಿ ಉಚಿತವಾಗಿ ಹೇಳಿ ಕೊಡಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರನಗರದ ಕಠಾರಿಪಾಳ್ಯದ ಕ್ಲಾಕ್ ಟವರ್ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (೩+೧) ೪ ವರ್ಷ ಅವಧಿಯ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿ.ಟಿ.ಡಿ.ಎಂ) ಮತ್ತು ಟೊಲ್ ರೂಂ ಮಶಿನಿಷ್ಟ್ (ಟಿ.ಆರ್.ಎಂ.) ಒಂದು ವರ್ಷ ಅವಧಿಯ ಡಿಪ್ಲೋಮಾ ಕೋರ್ಸಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ವಿಕಾಸ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦೦೯ರಲ್ಲಿ ಪ್ರಾರಂಭಿಸಲಾದ ಈ ತರಬೇತಿಯ ಪರೀಕ್ಷೆಯಲ್ಲಿ ಒಟ್ಟು ೧೦೦ ಅಂಕಗಳ ಪೈಕಿ ೬೦ ಅಂಕ ಪ್ರಾಕ್ಟೀಕಲ್ ಹಾಗು ೪೦ ಅಂಕ ಥಿಯರಿ ಇರುತ್ತದೆ. ಒಟ್ಟು ೪ ವರ್ಷದ ತರಬೇತಿಯಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸ್ಟೈಫಂಡ್‌

ಕೊನೆಯ ವರ್ಷ ನೇರವಾಗಿ ಕೈಗಾರಿಕೆಗಳಲ್ಲಿ ತರಬೇತಿ ನೀಡಲಾಗುವುದು ಉತ್ತೀರ್ಣರಾದವರಿಗೆ ಉತ್ತಮ ಕಂಪನಿಗಳಲ್ಲಿ ಕೆಲಸ ಸಿಗಲಿದೆ. ತರಭೇತಿ ಅವಧಿಯಲ್ಲಿ ೧೨ ರಿಂದ ೧೬ ಸಾವಿರ ರೂ.ವರೆಗೆ ಸ್ಟೈಫಂಡ್ ನೀಡಲಾಗುವುದು ಎಂದು ಹೇಳಿದರು.ಮೊದಲ ವರ್ಷದ ಶುಲ್ಕವು ೨೨.೫೦೦ ರೂ.ಗಳಾಗಿದೆ ಉಳಿದ ಮೂರು ವರ್ಷಗಳ ಶುಲ್ಕ ೧೨,೫೦೦ ರೂ. ಮಾತ್ರವಾಗಿದೆ, ಉಳಿದ ೧೨.೫೦೦ ರೂ.ಗಳು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸೌಲಭ್ಯ ಸಿಗಲಿದೆ, ತರಬೇತಿಯ ಮಧ್ಯದಲ್ಲಿ ಬಿಟ್ಟವರ ಶುಲ್ಕ ಮರು ಪಾವತಿಸುವುದಿಲ್ಲ ಎಂದು ನುಡಿದರು.ಅರ್ಜಿಗೆ ಜೂನ್‌ 6 ಕೊನೆ ದಿನ

ಅರ್ಜಿ ಸಲ್ಲಿಸಲು ಜೂ.೬ ರಂದು ಕೊನೆಯ ದಿನವಾಗಿದ್ದು, ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೮೮೬೮೩೯೫೭೪, ೮೫೫೦೦೦೫೧೫೨, ೯೦೭೧೦೬೮೦೧೮, ೦೮೧೫೨-೨೯೫೩೧೭ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದಾಗಿದೆ. ಬಹಳಷ್ಟು ಮಂದಿಗೆ ಡಿಪ್ಲೋಮೊ ಕಾಲೇಜ್ ಇರುವುದೇ ತಿಳಿದಿಲ್ಲ. ಟಕ್ನಿಕಲ್ ಡಿಪ್ಲೋಮೂ ಅಲ್ಲ ಟೊಲ್ಸ್ ಡಿಸೈನ್ ಮೇಕಿಂಗ್ ಮುಂತಾದ ತರಭೇತಿಗಳು ನೀಡಲಾಗುವುದು ಜೊತೆಗೆ ಕಂಪ್ಯೋಟರ್ ಕಮ್ಯೂನಿಕೇಷನ್ ತರಬೇತಿ ಉಚಿತವಾಗಿ ಹೇಳಿ ಕೊಡಲಾಗುವುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಹೇಮಂತ ಕುಮಾರ್, ತರಬೇತಿ ಕೇಂದ್ರದ ಮುಖ್ಯಸ್ಥರಾದ ಮಧುಸೂದನ್. ಎನ್.ಪಿ, ಸಂಜಯ್ ಸಿ.ಸಿ.ರಾಜೇಶ್ ಕುಮಾರ್.ಎನ್, ಪ್ರವೀಣ್.ಎನ್ ಇದ್ದರು.