ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸಿ; ರಾಜ್ಯಪಾಲರಿಗೆ ಜೆಡಿಎಸ್ ಮನವಿ

| Published : May 09 2024, 01:03 AM IST / Updated: May 09 2024, 10:42 AM IST

ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸಿ; ರಾಜ್ಯಪಾಲರಿಗೆ ಜೆಡಿಎಸ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್‌ ಬಿಡುಗಡೆಯಿಂದ ಹಾಸನ ಜಿಲ್ಲೆಯ ಮಹಿಳಾ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ರಚಿಸಿರುವ ವಿಶೇಷ ತನಿಖಾ ದಳ ರದ್ದುಪಡಿಸಿ ಇದರ ಸಂಪೂರ್ಣ ತನಿಖೆಯ ಸಿಬಿಐ ಅಥವಾ ಸುಪ್ರಿಂಕೋರ್ಟ್ ನ್ಯಾಯಾಧೀಶರಿಂದ ತನಿಖೆ ವಹಿಸಬೇಕು.

  ರಿಪ್ಪನ್‍ಪೇಟೆ :  ಪ್ರಜ್ವಲ್ ರೇವಣ್ಣ ಮತ್ತು ಪೆನ್‍ಡ್ರೈವ್ ಬಿಡುಗಡೆ ಪ್ರಕರಣವನ್ನು ಸಿಬಿಐ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ವಹಿಸಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಸಂಪುಟದಿಂದ ವಜಾ ಮಾಡಲು ಆಗ್ರಹಿಸಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮತ್ತು ಹೊಸನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್ ನೇತೃತ್ವದಲ್ಲಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮಾತನಾಡಿ, ಪೆನ್‌ಡ್ರೈವ್‌ ಬಿಡುಗಡೆಯಿಂದ ಹಾಸನ ಜಿಲ್ಲೆಯ ಮಹಿಳಾ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ರಚಿಸಿರುವ ವಿಶೇಷ ತನಿಖಾ ದಳ ರದ್ದುಪಡಿಸಿ ಇದರ ಸಂಪೂರ್ಣ ತನಿಖೆಯ ಸಿಬಿಐ ಅಥವಾ ಸುಪ್ರಿಂಕೋರ್ಟ್ ನ್ಯಾಯಾಧೀಶರಿಂದ ತನಿಖೆ ವಹಿಸಬೇಕು. ಮಾಜಿ ಪ್ರಧಾನಿ ಹಾಗೂ ಮುತ್ಸದ್ದಿ ರಾಜಕಾರಣಿ ಎಚ್.ಡಿ. ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ ರೂಪಿಸಿರುವ ಪ್ರಕರಣದ ರೂವಾರಿ ಡಿಸಿಎಂ ಡಿ.ಕೆ. ಶಿವಕುಮಾರರನ್ನು ಸಂಪುಟದಿಂದ ವಜಾಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರು ಜಿ.ಎಸ್.ವರದರಾಜ್. ಕೆರೆಹಳ್ಳಿಹೋಬಳಿ ಜೆಡಿಎಸ್‍ಅಧ್ಯಕ್ಷ ರಾಜು ದೂನಾ, ಜೆಡಿಎಸ್‍ಜಿಲ್ಲಾ ಮುಖಂಡರು.ಸಿ.ಈರಣ್ಣಕಲ್ಲೂರು, ಹರೀಶ್‍ ಬಾಳೂರು, ವಿಶ್ವನಾಥ್, ರಾಜೇಂದ್ರ, ರಾಮಚಂದ್ರ ಹಾಲುಗುಡ್ಡೆಪಕ್ಷದ ಕಾರ್ಯಕರ್ತರು ಹಾಜರಿದ್ದರು.