ಕ್ಷೇತ್ರದಲ್ಲಿ ಕೇಂದ್ರದ ಯೋಜನೆ ಜಾರಿಗೆ ಶ್ರಮಿಸಿದ್ದೇನೆ: ಮೋಹನ್‌

| Published : Apr 25 2024, 02:03 AM IST / Updated: Apr 25 2024, 10:54 AM IST

ಕ್ಷೇತ್ರದಲ್ಲಿ ಕೇಂದ್ರದ ಯೋಜನೆ ಜಾರಿಗೆ ಶ್ರಮಿಸಿದ್ದೇನೆ: ಮೋಹನ್‌
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ ಅಭ್ಯರ್ಥಿ ಪರ ಪುದುಚೇರಿ ಸಚಿವರು ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಾರೆ.

 ಬೆಂಗಳೂರು :  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಪ್ರಚಾರದ ಅಂತಿಮ ದಿನವಾದ ಬುಧವಾರ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್‌ಬಿಆರ್ ವಾರ್ಡ್‌ನ ಫಾರೆಸ್ಟ್ ಪಾರ್ಕ್, ಕಮ್ಮನಹಳ್ಳಿಯಲ್ಲಿ ಹಾಗೂ ಮಾರುತಿ ಸೇವಾನಗರ ವಾರ್ಡಿನ ನಾಗಯ್ಯನಪಾಳ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು.

ತಮಿಳು ಭಾಷಿಕರ ಸಂಖ್ಯೆ ಗಣನೀಯವಾಗಿರುವ ಕ್ಷೇತ್ರದಲ್ಲಿ ಮಂಗಳವಾರ ಪುದುಚೇರಿ ಸಚಿವರಾದ ಎಕೆ ಸಾಯಿ, ಜೆ ಸರವಣಕುಮಾರ್, ಎ.ನಮಶಿವಾಯಂ, ಪುದುಚೇರಿ ಬಿಜೆಪಿ ಅಧ್ಯಕ್ಷ ಸೆಲ್ವಗಣಪತಿ ಪಿಸಿ ಮೋಹನ್ ಪರವಾಗಿ ಮತಯಾಚನೆ ಮಾಡಿದ್ದರೆ, ಬುಧವಾರ ಕೂಡ ಪುದುಚೇರಿ ಗೃಹ ಸಚಿವರಾದ ಎ. ನಮಶಿವಾಯಂ, ಮಂಡಲ ಅಧ್ಯಕ್ಷರಾದ ಮುನಿರಾಜ ಕಾರ್ಣಿಕ್, ಎಂ.ಸಿ.ಶ್ರೀನಿವಾಸ್, ಗೋವಿಂದರಾಜ್, ಮಾಜಿ ಕಾರ್ಪೊರೇಟರ್ ಮಂಜುನಾಥ್ ಸೇರಿದಂತೆ ಅನೇಕ ಜೆಡಿಎಸ್ ಹಾಗು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮೋಹನ್‌, ಪ್ರಧಾನಿ ಮೋದಿ ಅವರು ಬೆಂಗಳೂರಿಗಾಗಿ ಹೊಂದಿರುವ ವಿಷನ್ ಅನ್ನು ಕಾರ್ಯರೂಪಕ್ಕೆ ತರುವ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ನನ್ನ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಪ್ರಧಾನಿ ಮೋದಿಯವರ ಪ್ರತಿಯೊಂದು ಕಾರ್ಯಕ್ರಮಗಳು ಮತ್ತು ಜನಕಲ್ಯಾಣ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ದೊರಕುವಂತೆ ಮತ್ತು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಮೆಟ್ರೋ ರೈಲು, ಸಾರಿಗೆ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ವಿಶ್ವ ದರ್ಜೆಯ ಮೂಲಸೌಕರ್ಯ ನಿರ್ಮಾಣ ಮತ್ತು ಆ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಬೆಂಗಳೂರಿನ ಜನತೆಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆಗಳನ್ನು ನೀಡಿದ್ದಾರೆ ಎಂದರು.