ನೆಲಮಂಗಲದಲ್ಲಿ ರಕ್ಷಾ ರಾಮಯ್ಯ ಅಬ್ಬರ

| Published : Apr 25 2024, 02:03 AM IST / Updated: Apr 25 2024, 10:55 AM IST

ಸಾರಾಂಶ

ಭಾರಿ ಜನಸ್ತೋಮದ ನಡುವೆ ಭರ್ಜರಿ ಪ್ರಚಾರ ನಡೆಸಿದ ರಕ್ಷಾ ರಾಮಯ್ಯಗೆ ಶರತ್‌ ಬಚ್ಚೇಗೌಡ, ರವಿ, ಕಾಂತರಾಜ್‌ ಸಾಥ್‌ ನೀಡಿದರು.

 ನೆಲಮಂಗಲ :  ನೆಲಮಂಗಲದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಭಾರೀ ಜನಸ್ತೋಮದ ಮೂಲಕ ಬೃಹತ್ ರೋಡ್ ಶೋ ನಡೆಯಿತು. ಸಮರೋಪಾದಿಯಲ್ಲಿ ಜನ ಸಾಗರ ಹರಿದು ಬಂತು. ಹೂವುಗಳ ಸುರಿಮಳೆ ನಡುವೆ ರೋಡ್ ಶೋ ಸಾಗಿತು.

ನೆಲಮಂಗಲ ಶಾಸಕರಾದ ಶ್ರೀನಿವಾಸ್, ಹೊಸಕೋಟೆ ಶಾಸ ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯ ಎಸ್.ರವಿ, ಹಿರಿಯ ಮುಖಂಡರಾದ ಕಾಂತರಾಜ್ ಅವರ ನೇತೃತ್ವದಲ್ಲಿ ಪ್ರಚಾರ ನಡೆಯಿತು. ಎಲ್ಲೆಡೆ ಜೈಕಾರ ಮೊಳಗಿತು. ಕಾಂಗ್ರೆಸ್ ಬಾವುಟ ರಾರಾಜಿಸಿತು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ರಕ್ಷಾ ರಾಮಯ್ಯ ಅವರು ಎಂ.ಎಸ್.ರಾಮಯ್ಯ ಅವರ ಕುಡಿ. ಕೋವಿಡ್ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸಹಸ್ರಾರು ಜೀವ ಉಳಿಸಿ ಪುಣ್ಯದ ಕೆಲಸ ಮಾಡಿದ್ದಾರೆ. ಆದರೆ ಕೋವಿಡ್ ಸಂಕಷ್ಟದಲ್ಲಿ ಭ್ರಷ್ಟಾಚಾರ ನಡೆಸಿದವರು ಬೇಕಾ ಎಂಬುದನ್ನು ನೀವೇ ನಿರ್ಧರಿಸಬೇಕು. ರಕ್ಷಾ ರಾಮಯ್ಯ ವಿರುದ್ಧ ಸ್ಪರ್ದಿಸಿರುವವರು ಯಾರು ಎಂಬುದು ನಿಮಗೆ ಗೊತ್ತು. ಯಾರೆಂದು ನಾವು ಹೇಳಿಲ್ಲ, ಬಿಜೆಪಿಯವರೇ ಹೇಳಿದ್ದಾರೆ ಎಂದರು.

ಬರ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಸೂಚಿಸಿದೆ. ಬಿಜೆಪಿ ಆಡಳಿತದಿಂದ ರಾಜ್ಯಕ್ಕೆ ನ್ಯಾಯ ದೊರೆಯುವುದಿಲ್ಲ. ರಕ್ಷಾ ರಾಮಯ್ಯ ಅವರನ್ನು ಆರಿಸಿ ಕಳುಹಿಸಿದರೆ ಅವರು ರಾಜ್ಯಕ್ಕೆ ನ್ಯಾಯ ಒದಗಿಸಲಿದ್ಧಾರೆ. ಜನರಪರವಾಗಿ ಅವರು ಕೆಲಸ ಮಾಡಲಿದ್ದಾರೆ ಎಂದರು. 

ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್‌ ಪ್ರಚಾರ

ಇನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನೇತೃತ್ವದಲ್ಲಿ, ಭುವನೇಶ್ವರಿ ವೃತ್ತ, ಬುದ್ಧ ಸರ್ಕಲ್, ಕಂದಾವರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ರಕ್ಷಾ ರಾಮಯ್ಯ ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಪ್ರದೀಪ್‌, ಬಡವರ, ರೈತರ, ಮಹಿಳೆಯರು ವಿರೋಧಿ ಪಕ್ಷ ಬಿಜೆಪಿ, ಯುವಕರಿಗೆ ಉದ್ಯೋಗ ಕೊಡ್ತವಿ, ಪ್ರತಿ ಒಬ್ಬರ ಖಾತೆಗೆ ಹಣ ಹಾಕ್ತಿವಿ ಅಂತಾ ಸುಳ್ಳು ಭರವಸೆ ನೀಡಿ, ಜನರನ್ನ ವಂಚಿಸಿದೆ. ಇಂತಾ ಬಿಜೆಪಿಯನ್ನು ತಿರಸ್ಕರಿಸಿ ಈ ಬಾರಿ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಬೆಂಬಲಿಸಿ, ಹೆಚ್ಚಿನ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆ.ಪಿ.ಬಚ್ಚೇಗೌಡ, ಪಕ್ಷದ ಹಿರಿಯ ಮುಖಂಡರು, ನಗರಸಭೆ ಸದಸ್ಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.