ಅರಸೀಕೆರೆಯಲ್ಲಿ ಪ್ಲೇಗಮ್ಮ ದೇವಾಲಯ ನಿರ್ಮಾಣಕ್ಕೆ ಧರ್ಮಸ್ಥಳದಿಂದ ₹1 ಲಕ್ಷ ಅನುದಾನ

| Published : May 09 2024, 01:00 AM IST

ಅರಸೀಕೆರೆಯಲ್ಲಿ ಪ್ಲೇಗಮ್ಮ ದೇವಾಲಯ ನಿರ್ಮಾಣಕ್ಕೆ ಧರ್ಮಸ್ಥಳದಿಂದ ₹1 ಲಕ್ಷ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೈರನಾಯಕನಹಳ್ಳಿ ಸಮೀಪ ನಿರ್ಮಾಣವಾಗುತ್ತಿರುವ ಪ್ಲೇಗಮ್ಮ ದೇವಾಲಯ ನಿರ್ಮಾಣಕ್ಕೆ ಒಂದು ಲಕ್ಷ ರು. ಅನುದಾನ ನೀಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು. ಅರಸೀಕೆರೆಯ ಬೈರನಾಯಕನಹಳ್ಳಿ ಸಮೀಪ ದೇವಾಲಯ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರದ ವತಿಯಿಂದ ಒಂದು ಲಕ್ಷ ರು. ಡಿಡಿಯನ್ನು ದೇವಾಲಯ ಸಮಿತಿಯವರಿಗೆ ವಿತರಿಸಿದರು.

ಬೈರನಾಯಕನಹಳ್ಳಿ ಸಮೀಪ ನಿರ್ಮಾಣವಾಗುತ್ತಿರುವ ದೇಗುಲ । ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ದೇಣಿಗೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ತಾಣಗಳೇ ದೇವಾಲಯಗಳು. ದೇವಾಲಯಗಳ ಜೀರ್ಣೋದ್ಧಾರ ಮತ್ತು ನಿರ್ಮಾಣಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರ ಅನುದಾನ ನೀಡುತ್ತಿದೆ. ಈ ಹಿನ್ನೆಲೆ ಬೈರನಾಯಕನಹಳ್ಳಿ ಸಮೀಪ ನಿರ್ಮಾಣವಾಗುತ್ತಿರುವ ಪ್ಲೇಗಮ್ಮ ದೇವಾಲಯ ನಿರ್ಮಾಣಕ್ಕೆ ಒಂದು ಲಕ್ಷ ರು. ಅನುದಾನ ನೀಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು.

ನಗರದ ಬೈರನಾಯಕನಹಳ್ಳಿ ಸಮೀಪ ದೇವಾಲಯ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರದ ವತಿಯಿಂದ ಒಂದು ಲಕ್ಷ ರು. ಡಿಡಿಯನ್ನು ದೇವಾಲಯ ಸಮಿತಿಯವರಿಗೆ ವಿತರಿಸಿ ಮಾತನಾಡಿ, ‘ಧರ್ಮಸ್ಥಳ ಧರ್ಮಾಧಿಕಾರಿಗಳ ಆಶಯವೆಂದರೆ ದೇವಾಲಯಗಳ ಆವರಣ ಸ್ವಚ್ಛತೆ ಮತ್ತು ನೈರ್ಮಲ್ಯದಿಂದ ಇರಬೇಕು, ಇದಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ, ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತರು ಬಂದರೂ ಸಹ ನೈರ್ಮಲ್ಯಕ್ಕೆ ಧಕ್ಕೆಯಾಗದಂತೆ ನಿರ್ವಹಿಸಲಾಗುತ್ತಿದೆ. ಕ್ಷೇತ್ರದಿಂದ ಅನೇಕ ಯೋಜನೆಗಳಿಗೆ ಅನುದಾನವನ್ನು ನೀಡಲಾಗುತ್ತಿದೆ, ಪರಿಸರ, ಶಿಕ್ಷಣ ಆರೋಗ್ಯ, ಧಾರ್ಮಿಕ ಮತ್ತು ಸಾಮಾಜಿಕ, ಕೆರೆ ಕಟ್ಟೆಗಳ ಅಭಿವೃದ್ಧಿಗೆ ಕ್ಷೇತ್ರವು ಧನ ಸಹಾಯ ಮಾಡುತ್ತ ಬರುತ್ತಿದೆ’ ಎಂದು ಹೇಳಿದರು.

ಸಾರ್ವಜನಿಕರು ಸಹ ಸಮಾಜಮುಖಿಯಾಗಿ ಕೈ ಜೋಡಿಸಿದಾಗ ಹೆಚ್ಚಿನ ಪ್ರಗತಿಯಾಗುವ ಸಾಧ್ಯವಾಗುತ್ತದೆ. ಇಂದು ಈ ದೇವಾಲಯ ನಿರ್ಮಾಣಕ್ಕಾಗಿ ಕ್ಷೇತ್ರದಿಂದ ಒಂದು ಲಕ್ಷ ರು. ಅನ್ನು ಗುರುಗಳು ಆಶೀರ್ವಾದದೊಂದಿಗೆ ನೀಡಿದ್ದಾರೆ ಎಂದರು.

ದೇವಾಲಯ ಸಮಿತಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಅರಸೀಕೆರೆ ನಗರದ ಮನೆಯೊಂದರಲ್ಲಿ ದೇವಾಲಯ ಮಾಡಿಕೊಂಡಿದ್ದು ಹೆಚ್ಚು ಭಕ್ತರು ಆಗಮಿಸುತ್ತಿರುವುದರಿಂದ ದೇವಾಲಯ ನಿರ್ಮಾಣ ಅನಿವಾರ್ಯವಾಯಿತು, ದೇವಾಲಯಕ್ಕಾಗಿ ಭೂಮಿಯನ್ನು ಕೊಂಡಿದ್ದು ದೇವಾಲಯ ನಿರ್ಮಾಣ ಆಗುತ್ತಿದೆ. ನಿರೀಕ್ಷೆಗೂ ಮೀರಿ ಹೆಚ್ಚು ಹಣ ಅಗತ್ಯವೆನಿಸುತ್ತಿದೆ. ಶ್ರೀ ಕ್ಷೇತ್ರಕ್ಕೆ ಹೋಗಿ ಮನವಿ ಮಾಡಿಕೊಂಡು ಬಂದಿದ್ದೆವು. ವೀರೇಂದ್ರ ಹೆಗ್ಗಡೆಯವರು ಒಂದು ಲಕ್ಷ ರು. ಡಿಡಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ಸಮಿತಿಯು ಕೃತಜ್ಞವಾಗಿದೆ. ಸ್ವಾಮಿಯ ಕೃಪೆಯಿಂದ ದೇವಾಲಯದ ಕಾರ್ಯ ಬೇಗ ಮುಗಿಸುವ ಆಶಯ ಇದೆ ಎಂದರು

ಉಪಾಧ್ಯಕ್ಷೆ ದಯಾಮಣಿ, ಕಾರ್ಯದರ್ಶಿ ಸುಂದರಮೂರ್ತಿ, ಖಜಾಂಚಿ ಪ್ರದೀಪ್, ನಿರ್ದೇಶಕರಾದ ಜೀವನ್ ಹರೀಶ್, ನಾಗೇಶ್ ಕುಮಾರಣ, ಮಂಜುಮ್ಮ, ಪಾರ್ವತಮ್ಮ, ಶೈಲಜಾ, ತನುಜ, ರೇಣುಕಣ್ಣ ಇದ್ದರು.