ತುಳುನಾಡ ಸಿರಿ ಮದಿಪು: ಮೂಡುಬಿದಿರೆ ಶ್ರೀ ಧವಳಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

| Published : May 09 2024, 01:04 AM IST

ತುಳುನಾಡ ಸಿರಿ ಮದಿಪು: ಮೂಡುಬಿದಿರೆ ಶ್ರೀ ಧವಳಾ ಕಾಲೇಜಿಗೆ ಸಮಗ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿ.ವಿ. ವ್ಯಾಪ್ತಿಯ ೧೧ ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಮೂಹಿಕ ಸ್ಪರ್ಧೆಯ ತೀರ್ಪುಗಾರರಾಗಿ ಮುದ್ದು ಮೂಡುಬೆಳ್ಳೆ, ಕೆ.ಕೆ. ಪೇಜಾವರ ಹಾಗೂ ಅಕ್ಷತಾ ಸಹಕರಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶ್ರೀ ಮಹಾವೀರ ಕಾಲೇಜು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ‘ತುಳುನಾಡಸಿರಿ ಮದಿಪು-೨೦೨೪’ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂಡಬಿದಿರೆಯ ಶ್ರೀ ಧವಳಾ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಮಂಗಳೂರು ವಿ.ವಿ. ವ್ಯಾಪ್ತಿಯ ೧೧ ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಮೂಹಿಕ ಸ್ಪರ್ಧೆಯ ತೀರ್ಪುಗಾರರಾಗಿ ಮುದ್ದು ಮೂಡುಬೆಳ್ಳೆ, ಕೆ.ಕೆ. ಪೇಜಾವರ ಹಾಗೂ ಅಕ್ಷತಾ ಸಹಕರಿಸಿದರು.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸುದರ್ಶನ್ ಜೈನ್‌, ನ್ಯೂ ಪಡಿವಾಳ್ಸ್ ಮಾಲಕ ಹರ್ಷವರ್ಧನ್, ಕಿಯೋನಿಕ್ಸ್‌ನ ಹರಿಣಾಕ್ಷಿ ಶೆಟ್ಟಿ, ತಾಕೊಡೆಯ ಹಿಲ್ಡಾ ಜಾನ್ ರೋಡ್ರಿಗಸ್ ಅತಿಥಿಗಳಾಗಿ ಬಹುಮಾನ ವಿತರಿಸಿದರು.

ಕಳೆದ ೧೮ ವರ್ಷಗಳ ಕಾಲ ತುಳುನಾಡಸಿರಿ ಮದಿಪು ಕಾರ್ಯಕ್ರಮ ನಿರ್ವಾಹಕಿಯಾಗಿ ಸೇವೆ ಸಲ್ಲಿಸಿದ ಕಾಲೇಜಿನ ಹಿರಿಯ ಗ್ರಂಥಪಾಲಕಿ ನಳಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ಮುಖ್ಯ ಕಾರ್ಯಕ್ರಮ ಸಂಯೋಜಕಿ ನಳಿನಿ ಕೆ. ಮತ್ತು ಪೂರ್ಣಿಮಾ, ರಶ್ಮಿತಾ, ಸಂದೀಪ್, ವಿದ್ಯಾರ್ಥಿ ಸಂಯೋಜಕ ಡೆರೆಲ್ ಸಿಕ್ವೇರಾ, ವಿಶಾಖ್‌ ಶೆಟ್ಟಿ, ಸುಮಂತ್ ಕೋಟ್ಯಾನ್, ಮೆಲ್ರೋಯ್ ಲೋಬೋ, ಅವಿಲ್, ತುಳು ಸಂಘದ ಕಾರ್ಯದರ್ಶಿ ಪ್ರವೀಕ್ಷಾ ಉಪಸ್ಥಿತರಿದ್ದರು.

ಉಪನ್ಯಾಸಕಿ ರಶ್ಮಿತಾ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್‌ ವಂದಿಸಿದರು. ಪೂರ್ಣಿಮಾ ವಿಜೇತರ ವಿವರ ನೀಡಿದರು. ಸಂಯೋಜಕರಾದ ವಿಜಯಲಕ್ಷ್ಮೀ ಮಾರ್ಲ ನಿರೂಪಿಸಿದರು.

ಫಲಿತಾಂಶ ವಿವರ: ಸಾಮೂಹಿಕ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು(ಪ್ರಥಮ ), ಶ್ರೀ ಧವಲಾ ಕಾಲೇಜು, ಮೂಡುಬಿದಿರೆ (ದ್ವಿತೀಯ ), ಎಂ.ಪಿ.ಎಂ ಕಾಲೇಜು ಕಾರ್ಕಳ(ತೃತೀಯ), ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು, ಸುಂಕದಕಟ್ಟೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕ (೨ ಸಮಾಧಾನಕರ ಬಹುಮಾನಗಳು) ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು (ಉತ್ತಮ ಕಾರ್ಯಕ್ರಮ ನಿರೂಪಣೆ) ಪ್ರಶಸ್ತಿಗಳನ್ನು ಪಡೆದುಕೊಂಡವು.

ವೈಯಕ್ತಿಕ ವಿಭಾಗದಲ್ಲಿ ವರ್ಣಚಿತ್ರ ರಚನೆ: ಪ್ರಥಮ -ಪ್ರಣತಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ); ದ್ವಿತೀಯ – ವಿಜೇತ್ ಪಾಯಸ್ (ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು), ತುಳು ಲಿಖಿತ ರಸಪ್ರಶ್ನೆ ಪ್ರಥಮ – ರಕ್ಷಿತ್ ಸಾಲ್ಯಾನ್ (ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕ); ದ್ವಿತೀಯ - ಹರ್ಷಲ್ ಶೆಟ್ಟಿ(ಆಳ್ವಾಸ್ ಕಾಲೇಜು, ಮೂಡುಬಿದಿರೆ). ತುಳು ಚಲನಚಿತ್ರ ಗಾಯನ: ಪ್ರಥಮ- ಸನ್ನಿಧಿ ಸಿ.(ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ); ದ್ವಿತೀಯ - ವಾಣಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ), ರಂಗೋಲಿ: ಪ್ರಥಮ - ಪ್ರತೀಕ್ಷಾ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ), ದ್ವಿತೀಯ – ದೀಕ್ಷಾ ಜಿ.(ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ). ತುಳು ಆಶುಭಾಷಣ: ಪ್ರಥಮ ಸ್ಥಾನ- ಅಕ್ಷಯ್ (ಶ್ರೀ ಧವಲಾ ಕಾಲೇಜು, ಮೂಡುಬಿದಿರೆ); ದ್ವಿತೀಯ ಸ್ಥಾನ - ವಿನುತ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ).