ಎಸ್ಸೆಸ್ಸೆಲ್ಸಿ ಫಲಿತಾಂಶ: ಮರಿಮಲ್ಲಪ್ಪ ಪ್ರೌಢಶಾಲೆ ಸಾಧನೆ

| Published : May 10 2024, 01:36 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ: ಮರಿಮಲ್ಲಪ್ಪ ಪ್ರೌಢಶಾಲೆ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯ 430 ವಿದ್ಯಾರ್ಥಿಗಳ ಪೈಕಿ 131 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 20 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳಿಸಿದ್ದಾರೆ. ಅಂಜಲಿ ವಿ. ಶಾಸ್ತ್ರಿ, ಅದಿತಿ ವಿ. ಶಾಸ್ತ್ರಿ, ಭರತ್ ಎಸ್. ಪ್ರಸಾದ್(619), ಸಂಸ್ಕೃತ್ (618), ಎಂ. ಶರವಣ ಅರಸ್615 ಅಂಕ, ಕೀರ್ತನಾ, ಬಿ.ಆರ್. ಪೂಜಾ ತಲಾ 614 ಅಂಕ, ಸಂಗೀತಾ ಜಿ.ಗೌಡ 613 ಅಂಕ, ಇಂಚರಾ 611 ಅಂಕ, ಎಸ್. ವಿಧಾತ್ರಿ, ನಯನಾ, ಸುಪ್ರಿಯಾ ಖೇಲ್ಕರ್, ಎಸ್. ಸೌಮ್ಯಾ 608 ಅಂಕ, ಸಾಯಿಪ್ರಾಪ್ತಿ ಕೊಂಡಯ್ಯ 607 ಅಂಕ, ಬಿ. ದಿಗಂತ್, ನೀಲ ಗಗನ್ 606, ಹೇಮಿಶಾ ವಿ. ಪ್ರಸಾದ್, ಜುನೈದ್ಉರ್ ರೆಹಮಾನ್ ತಲಾ 604 ಅಂಕ, ಜಿ.ಸಿ. ಚಿಂತನ್ 603 ಅಂಕ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಗರದ ಮರಿಮಲ್ಲಪ್ಪ ಪ್ರೌಢಶಾಲೆಯು ಶೇ. 96 ಫಲಿತಾಂಶ ಪಡೆದಿದ್ದು, ಶಾಲೆಯ ಆರ್. ಭೂಮಿಕಾ 621 ಅಂಕ ಪಡೆದು ಟಾಪರ್ ಆಗಿದ್ದಾರೆ.

621 ಅಂಕಪಡೆದ ಲಕ್ಷ್ಮಿಪುರಂನ ರಂಗನಾಥ್ ಹಾಗೂ ಗಾಯತ್ರಿ ದಂಪತಿಯ ಪುತ್ರಿಯಾದ ಆರ್. ಭೂಮಿಕಾ ಮಾತನಾಡಿ, ಶಾಲೆಯಲ್ಲಿ ವಿಜ್ಞಾನ, ವ್ಯಾಕರಣ, ಗಣಿತ, ಎಲ್ಲಾ ವಿಷಯಗಳ ಬೋಧನೆ ಚೆನ್ನಾಗಿತ್ತು. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆ ಇತ್ತು. ಆದರೆ, ಕಡಿಮೆ ಬಂದಿದೆ. ಸಮಾಜ ವಿಜ್ಞಾನದಲ್ಲಿ 96 ಅಂಕ ಬಂದಿದೆ. ಉಳಿದ ವಿಷಯಗಲ್ಲಿ ತಲಾ 100 ಹಾಗೂ 125 ಅಂಕ ಬಂದಿದೆ. ಹಾಗಾಗಿ ಮರುಮೌಲ್ಯಮಾಪನಕ್ಕೆ ಹಾಕುವುದಾಗಿ ತಿಳಿಸಿದ್ದಾರೆ.

ಉಳಿದಂತೆ ಶಾಲೆಯ 430 ವಿದ್ಯಾರ್ಥಿಗಳ ಪೈಕಿ 131 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 20 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳಿಸಿದ್ದಾರೆ. ಅಂಜಲಿ ವಿ. ಶಾಸ್ತ್ರಿ, ಅದಿತಿ ವಿ. ಶಾಸ್ತ್ರಿ, ಭರತ್ ಎಸ್. ಪ್ರಸಾದ್(619), ಸಂಸ್ಕೃತ್ (618), ಎಂ. ಶರವಣ ಅರಸ್615 ಅಂಕ, ಕೀರ್ತನಾ, ಬಿ.ಆರ್. ಪೂಜಾ ತಲಾ 614 ಅಂಕ, ಸಂಗೀತಾ ಜಿ.ಗೌಡ 613 ಅಂಕ, ಇಂಚರಾ 611 ಅಂಕ, ಎಸ್. ವಿಧಾತ್ರಿ, ನಯನಾ, ಸುಪ್ರಿಯಾ ಖೇಲ್ಕರ್, ಎಸ್. ಸೌಮ್ಯಾ 608 ಅಂಕ, ಸಾಯಿಪ್ರಾಪ್ತಿ ಕೊಂಡಯ್ಯ 607 ಅಂಕ, ಬಿ. ದಿಗಂತ್, ನೀಲ ಗಗನ್ 606, ಹೇಮಿಶಾ ವಿ. ಪ್ರಸಾದ್, ಜುನೈದ್ಉರ್ ರೆಹಮಾನ್ ತಲಾ 604 ಅಂಕ, ಜಿ.ಸಿ. ಚಿಂತನ್ 603 ಅಂಕ ಪಡೆದಿದ್ದಾರೆ.