ಮಾಳೇನಹಳ್ಳಿ ಚೌಡೇಶ್ವರಿ ಜಾತ್ರೆ

| Published : Apr 19 2024, 01:03 AM IST

ಸಾರಾಂಶ

ತಾಲೂಕಿನ ಆಲದ ಮರದ ಮಾಳೇನಹಳ್ಳಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಏ.19ರಿಂದ ಏ.22ರವರೆಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ.

ಚಿತ್ರದುರ್ಗ: ತಾಲೂಕಿನ ಆಲದ ಮರದ ಮಾಳೇನಹಳ್ಳಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಏ.19ರಿಂದ ಏ.22ರವರೆಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ.ಏ.19ರ ರಾತ್ರಿ 9.30 ರಿಂದ ಬಳಿಗಟ್ಟೆ, ಹಿರೇಕಬ್ಬಿಗೆರೆ ಮಜೂರೆ ಗೊಲ್ಲರಹಟ್ಟಿ, ಬ್ಯಾಲಹಾಳ್ ಗ್ರಾಮಸ್ಥರಿಂದ ಚೌಡೇಶ್ವರಿ ದೇವಿಯ ಮದುವಣಗಿತ್ತಿ ಶಾಸ್ತ್ರ ನಡೆಯಲಿದ್ದು, ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ ರಾತ್ರಿ 9.30ರಿಂದ ಜಾನಪದ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಏ.20ರ ಬೆಳಗ್ಗೆ 6.30ಕ್ಕೆ ಉಚ್ಚಾಯ ರಥೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ. ಮಧ್ಯಾಹ್ನ ಮೀಸಲು, ಕೋಲುಮೇಳ ಪಾನಕಬಂಡಿ ಕಾರ್ಯಕ್ರಮಗಳು ಜರುಗಲಿವೆ. ಏ.21ರ ಮಧ್ಯಾಹ್ನ 2ರಿಂದ ಕೊಟ್ರಮ್ಮ ಎಚ್.ಹನುಮಂತಪ್ಪ ನವರ ಕುಟುಂಬದಿಂದ ಪೂಜೆ, ಮಹಾಮಂಗಳಾರತಿ, ಸಂಜೆ 4ರಿಂದ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಹಾಗೂ ಮಾಳೇನಹಳ್ಳಿ ಗ್ರಾಮಸ್ಥರಿಂದ ಸಿಡಿ ಉತ್ಸವ ಜರುಗಲಿದೆ. ಏ.22ರಂದು ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಓಕಳಿ ಮತ್ತು ಮಹಾಮಂಗಳಾರತಿ ನೆರವೇರಲಿದೆ.

ಏ.21ರ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ದೇವಸ್ಥಾನಕ್ಕೆ ಗ್ರಾಪಂ ಮಾಜಿ ಅಧ್ಯಕ್ಷೆ ರೇಣುಕಮ್ಮ ಜಯಪ್ಪ ದೇವಸ್ಥಾನಕ್ಕೆ ಕಳಸ ಹಾಗೂ ಬ್ಯಾಲಹಾಳ್ ಗ್ರಾಪಂ ಅಧ್ಯಕ್ಷ ಓ.ಕೃಷ್ಣಮೂರ್ತಿ ದೇವಸ್ಥಾನ ಹಾಗೂ ಗೋಪುರಕ್ಕೆ ಬಣ್ಣದ ಕೊಡುಗೆ ನೀಡಿರುತ್ತಾರೆ.

ದೇವಸ್ಥಾನದ ಆವರಣದಲ್ಲಿ ಜೂಜು ಹಾಗೂ ಮದ್ಯಪಾನ ನಿಷೇಧಿಸಲಾಗಿದೆ. ಚಿತ್ರದುರ್ಗದ ಕೆಎಸ್ಆರ್.ಟಿಸಿ ಬಸ್ ನಿಲ್ದಾಣದಿಂದ ಲಕ್ಷ್ಮಿಸಾಗರ ಮತ್ತು ವಿಜಾಪುರ ಮಾರ್ಗವಾಗಿ ಬಸ್ ಮತ್ತು ಆಟೋ ವ್ಯವಸ್ಥೆ ಇರುತ್ತದೆ ಎಂದು ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಚ್.ಬಸವರಾಜಪ್ಪ, ಉಪಾಧ್ಯಕ್ಷ ಕೆ.ಕಾಟಲಿಂಗಪ್ಪ, ಸಂಚಾಲಕ ಪೂಜಾರಿ ಚಿತ್ರಲಿಂಗಪ್ಪ, ಕಾರ್ಯದರ್ಶಿ ಸುರೇಶ್ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.