ಮಹಾರಾಣಾ ಪ್ರತಾಪ್‌ಸಿಂಗ್‌ ಅದ್ದೂರಿ ಜಯಂತ್ಯುತ್ಸವ

| Published : May 10 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಮಹಾ ರಾಣಾಪ್ರತಾಪಸಿಂಗ್‌ ಅವರು ವಾಯುವ್ಯ ಭಾರತದ ರಾಜ್ಯ ಮೇವಾರವನ್ನು ಆಳುತ್ತಿದ್ದರು. ರಜಪೂತರ ವಂಶಕ್ಕೆ ಸೇರಿದವರಾಗಿದ್ದು, ತೀಕ್ಷ್ಣ ಸ್ವಭಾವ ಹೊಂದಿದ್ದ ರಜಪೂತರ ಹೆಮ್ಮೆಯ ಸಾಕಾರ ರೂಪವಾಗಿದ್ದರೆಂದು ರಜಪೂತ ಸಮಾಜದ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದಶರಥ್‌ಸಿಂಗ್ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಮಹಾ ರಾಣಾಪ್ರತಾಪಸಿಂಗ್‌ ಅವರು ವಾಯುವ್ಯ ಭಾರತದ ರಾಜ್ಯ ಮೇವಾರವನ್ನು ಆಳುತ್ತಿದ್ದರು. ರಜಪೂತರ ವಂಶಕ್ಕೆ ಸೇರಿದವರಾಗಿದ್ದು, ತೀಕ್ಷ್ಣ ಸ್ವಭಾವ ಹೊಂದಿದ್ದ ರಜಪೂತರ ಹೆಮ್ಮೆಯ ಸಾಕಾರ ರೂಪವಾಗಿದ್ದರೆಂದು ರಜಪೂತ ಸಮಾಜದ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದಶರಥ್‌ಸಿಂಗ್ ಮನಗೂಳಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಸ್ಥಳೀಯ ರಜಪೂತ ಸಮಾಜ ಬಾಂಧವರಿಂದ ಮಹಾರಾಣಾ ಪ್ರತಾಪಸಿಂಗ್‌ ಅವರ ಜಯಂತ್ಯುತ್ಸವ ಆಚರಣೆ ಮಾಡಲಾಯಿತು. ಇ ವೇಳೆ ಮಹಾರಾಣಾ ಪ್ರತಾಪಸಿಂಗ್‌ ಸರ್ಕಲ್‌ನಲ್ಲಿ ಪ್ರತಾಪಸಿಂಗ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೈಕ್‌ರ್‍ಯಾಲಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ನಮ್ಮ ಆತ್ಮ ಗೌರವದ ಪ್ರತೀಕ ಪ್ರತಾಪಸಿಂಗ್‌ ಅವರು ಶತಮಾನಗಳವರೆಗೆ ರಜಪೂತರ ಮಹಾತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದರು ಎಂದರು.

ಹೋರಾಟಕ್ಕಾಗಿ ಮುಂದೆ ಬಂದ ಎದುರಾಳಿಯ ಕೈಯಲ್ಲಿ ಖಡ್ಗವಿಲ್ಲದಿದ್ದರೂ ಅವರಿಗೆ ತನ್ನಲ್ಲಿಯ ಖಡ್ಗವನ್ನು ನೀಡಿ ಭಯಹುಟ್ಟಿಸುತ್ತಿದ್ದರಲ್ಲದೇ, ತಾನೂ ಸಹ ಎರಡನೇಯ ಖಡ್ಗವನ್ನು ಬಳೆಸಿ ಮಹಾರಾಣಾಪ್ರತಾಪ ಸಿಂಗ್‌ ಅವರು ತನ್ನ ಭಾರ ಎತ್ತುವ ಸಾಮರ್ಥ್ಯದಿಂದ ಸುಮಾರು ೯೦ ಕಿಲೋ ಭಾರದ ಖಡ್ಗಗಳನ್ನು ಹಿಡಿದು ಹೋರಾಟ ಮಾಡುತ್ತಿದ್ದರು. ಅಂತಹ ಶೂರ ದೀರರ ವಂಶದಲ್ಲಿ ಜನ್ಮತಾಳಿದ ನಾವು ದೇಶದ ರಕ್ಷಣೆಗಾಗಿ ಪಣತೊಡಬೇಕಿದೆ ಎಂದರು.ಮಹಾರಾಣಾಪ್ರತಾಪ ಸಿಂಗ್‌ ಸರ್ಕಲ್‌ದಿಂದ ಪ್ರಾರಂಭಗೊಂಡ ಬೈಕ್ ರ್‍ಯಾಲಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಜಪೂತ ಸಮಾಜದ ಶ್ರೀ ಅಂಬಾಭವಾನಿ ಮಂದಿರಕ್ಕೆ ತಲುಪಿತು.ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್‌ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಸುರೇಶ ಹಜೇರಿ, ರಘುವೀರ ಸಿಂಗ್ ಹಜೇರಿ, ಬಾಬುಸಿಂಗ್ ಹಜೇರಿ, ಅಮಿತಸಿಂಗ್ ಮನಗೂಳಿ, ಗೋವಿಂದಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ಕೇಸರಸಿಂಗ್ ಹಜೇರಿ, ಸುರೇಶಕುಮಾರ ಹಜೇರಿ, ವಿಠ್ಠಲಸಿಂಗ್ ಹಜೇರಿ, ನಿತಿನ ವಿಜಾಪೂರ, ರಮೇಶ ಗೌಡಗೇರಿ ಸೇರಿ ಸಮಾಜದ ಯುವಕ ಮಂಡಳಿ ಹಾಗೂ ಅಭಿಮಾನಿಗಳು ಮತ್ತು ಸಮಾಜ ಬಾಂಧವರು ಭಾಗವಹಿಸಿದ್ದರು.