ಸಿಡಿಮದ್ದು ಸಿಡಿದು ಇಬ್ಬರು ಮಹಿಳೆಯರಿಗೆ ಗಾಯ

| Published : May 09 2024, 01:11 AM IST

ಸಾರಾಂಶ

ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡ ಸ್ಫೋಟಕ್ಕೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದಿದ್ದು ಕಟ್ಟಡ ಸಂಪೂರ್ಣ ಹಾನಿ ಆಗಿದೆ.

ಕಾರ್ಕಳ: ಸುಡುಮದ್ದು ತಯಾರಿಕಾ ಘಟಕವೊಂದರಲ್ಲಿ ಸಿಡಿಮದ್ದು ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಬಂಗ್ಲೆಗುಡ್ಡೆ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ.

ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು ಎಂದಿನಂತೆ ಕಾರ್ಯಾಚರಿಸುತಿದ್ದ ವೇಳೆಯಲ್ಲಿ ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭ ಅನಿರೀಕ್ಷಿತವಾಗಿ ಸ್ಫೋಟಗೊಂಡು ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡ ಸ್ಫೋಟಕ್ಕೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದಿದ್ದು ಕಟ್ಟಡ ಸಂಪೂರ್ಣ ಹಾನಿ ಆಗಿದೆ.

ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ.