ಮುಂದುವರಿಯಲಿರುವ ಜೆಡಿಎಸ್-ಬಿಜೆಪಿ ಮೈತ್ರಿ

| Published : Apr 28 2024, 01:16 AM IST

ಸಾರಾಂಶ

ದಾಬಸ್‌ಪೇಟೆ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಫಲ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಹೈಕಮಾಂಡ್ ನಿರ್ಧಾರದಂತೆ ಮೈತ್ರಿ ಮುಂದುವರೆಯುತ್ತದೆ ಎಂದು ಬಿಜೆಪಿ ಶಾಸಕ ಸ್ಥಾನದ ಪರಾಜಿತ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯಕ್ ಹೇಳಿದರು.

ದಾಬಸ್‌ಪೇಟೆ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಫಲ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಹೈಕಮಾಂಡ್ ನಿರ್ಧಾರದಂತೆ ಮೈತ್ರಿ ಮುಂದುವರೆಯುತ್ತದೆ ಎಂದು ಬಿಜೆಪಿ ಶಾಸಕ ಸ್ಥಾನದ ಪರಾಜಿತ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯಕ್ ಹೇಳಿದರು.

ಸೋಂಪುರ ಹೋಬಳಿಯ ಲಕ್ಕೂರಿನ ಮತಗಟ್ಟೆ ಸಂಖ್ಯೆ 25ಕ್ಕೆ ಭೇಟಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಬಲ ತುಂಬಿ ಮಾತನಾಡಿದ ಅವರು, ಇಡೀ ತಾಲೂಕಾದ್ಯಂತ ಹಲವಾರು ಬೂತ್ ಗೆ ಭೇಟಿ ನೀಡಿದ್ದೇನೆ, ಮೈತ್ರಿ ಉತ್ತಮ ಫಲ ನೀಡಿದೆ, ನಮ್ಮ ಎರಡು ಪಕ್ಷದಲ್ಲಿ ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗಿರುವುದು ಗಮನಿಸಿದರೆ, ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ನಿಶ್ಚಿತ ಎಂದರು.

ಈ ವೇಳೆ ಬಿಜೆಪಿ ಮುಖಂಡರಾದ, ಉಮಾಶಂಕರ್, ಪಂಚಾಕ್ಷರಿ, ಸಿದ್ದರಾಜು, ರಂಗನಾಥ್ ಬಾಬು, ಬಾಣವಾಡಿ ರಮೇಶ್, ಶಿವರಾಜು ಇತರರಿದ್ದರು.

ಕಾಂಗ್ರೆಸ್ ಅಭ್ಯರ್ಥಿಗೇ ಗೆಲುವು:

ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ಹೋಬಳಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ನಮ್ಮ ಶಾಸಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ ವ್ಯಾಪಕವಾಗಿ ಚುನಾವಣಾ ಕೆಲಸ ಮಾಡಿದ್ದು ನೆಲಮಂಗಲದಲ್ಲಿಯೂ ಕಾಂಗ್ರೆಸ್ಗೆ ಹೆಚ್ಚು ಲೀಡ್‌ ಸಿಕ್ಕಿ ಮುನ್ನಡೆ ಸಾಧಿಸಲಿದೆ ಎಂದರು.

ಬಡವರ ಪಕ್ಷ ಕಾಂಗ್ರೆಸ್: ಅಗಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಅಂಚೆಮನೆ ಪ್ರಕಾಶ್ ಮಾತನಾಡಿ, ಕಾಂಗ್ರೆಸ್‌ ಬಡವರ ಪಕ್ಷವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಭರವಸೆಯನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿ ನುಡಿದಂತೆ ನಡೆದುಕೊಂಡಿದೆ. ಆದ್ದರಿಮದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಗೆಲ್ಲುವುದು ಶತಸಿದ್ಧಧೆಂದು ವಿಶ್ವಾಸ ವ್ಯಕ್ತಪಡಿಸಿದರು. ಫೋಟೋ 10 :

ಸೋಂಪುರ ಹೋಬಳಿಯ ಲಕ್ಕೂರು ಮತಗಟ್ಟೆ 25 ಕ್ಕೆ ಭೇಟಿ ನೀಡಿದ ಯುವ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ಬಿಜೆಪಿ ಮುಖಂಡರು ಶಾಹಿ ತೋರಿಸಿ ಸಂಭ್ರಮಿಸಿದರು.