ಸೋಂಪುರ ಹೋಬಳಿಯಲ್ಲಿ ಜೋರು ಮಳೆ

| Published : May 10 2024, 01:36 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಬರೋಬ್ಬರಿ ೫ ತಿಂಗಳ ಬಳಿಕ ಗುರುವಾರ ಸಂಜೆ ಜೋರು ಮಳೆಯಾಗಿದೆ. ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ತಂಪಾದ ವಾತಾವರಣ ಸಮಾಧಾನ ತಂದಿದೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಬರೋಬ್ಬರಿ ೫ ತಿಂಗಳ ಬಳಿಕ ಗುರುವಾರ ಸಂಜೆ ಜೋರು ಮಳೆಯಾಗಿದೆ. ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ತಂಪಾದ ವಾತಾವರಣ ಸಮಾಧಾನ ತಂದಿದೆ.

ಮಳೆಯಿಲ್ಲದೆ ಬಿಸಿಲ ಬೇಗೆಯಿಂದ ಧಣಿದಿದ್ದ ಜನತೆ ಹಾಗೂ ರೈತರ ಮುಖದಲ್ಲಿಲೀ ಮಳೆ ಮಂದಹಾಸ ಮೂಡಿಸಿದೆ. ಬೆಂಗಳೂರು ಕಡೆಯಿಂದ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-೪೮ರ ಸರ್ವಿಸ್ ರಸ್ತೆಯಲ್ಲಿ ಕಸಕಡ್ಡಿಗಳು ಬಿದ್ದು ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗದ ಹಿನ್ನೆಲೆಯಲ್ಲಿ ರಸ್ತೆ ತುಂಬೆಲ್ಲಾ ನೀರು ನಿಂತು ವಾಹನಗಳು ಚಲಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ದಾಬಸ್‌ಪೇಟೆ ಪಟ್ಟಣ ಸೇರಿದಂತೆ ಹೊನ್ನೇನಹಳ್ಳಿ, ಶಿವಗಂಗೆ, ಕಂಬಾಳು, ಗೌರಾಪುರ, ವೀರಸಾಗರ, ಅಗಳಕುಪ್ಪೆ, ನರಸೀಪುರ, ಮಾದೇನಹಳ್ಳಿ, ಪೆಮ್ಮನನಹಳ್ಳಿ, ನಿಡವಂದ, ತ್ಯಾಮಗೊಂಡ್ಲು ಸೇರಿ ಹಲವೆಡೆ ಮಳೆಯಾಗಿದೆ.

ಏಕಾಏಕಿ ಸಂಜೆ ಮಳೆ ಬಿದ್ದದ್ದರಿಂದ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚಾರ ದಟ್ಟಣೆಯಾಯಿತು. ಪಟ್ಟಣದ ಉದ್ದಾನೇಶ್ವರ ವೃತ್ತ, ದೊಡ್ಡಬಳ್ಳಾಪುರ ರಸ್ತೆ, ಶಿವಗಂಗೆ ವೃತ್ತ, ಅಗಳಕುಪ್ಪೆ ರಸ್ತೆ, ಎಡೇಹಳ್ಳಿ ಜಿಂದಾಲ್ ಕಂಪನಿ ಬಳಿ ವಾಹನಗಳ ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಮಳೆಯಲ್ಲಿ ಸಂಚರಿಸಲಾಗದೆ ಪರದಾಡಿದರು.

(ಚೆನ್ನಾಗಿರುವ ಒಂದು ಫೋಟೋ ಬಳಸಿ)

ಪೋಟೋ 9:

ದಾಬಸ್‌ಪೇಟೆಯ ಶಿವಗಂಗೆ ವೃತ್ತದ ರಾಷ್ಟ್ರೀಯ ಹೆದ್ದಾರಿ- ೪೮ರ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವುದು.