ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶೇ. ೭೭.೬೦ರಷ್ಟು ಮತದಾನ

| Published : May 09 2024, 01:08 AM IST

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶೇ. ೭೭.೬೦ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ ಶೇ. ೭೭.೬೦ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯ ಜೂ. ೪ರಂದು ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ ಶೇ. ೭೭.೬೦ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯ ಜೂ. ೪ರಂದು ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೯,೦೨,೧೧೯ ಪುರುಷರು, ೮,೯೦,೫೭೨ ಮಹಿಳೆಯರು ಹಾಗೂ ೮೩ ಇತರರು ಸೇರಿದಂತೆ ಒಟ್ಟಾರೆ ೧೭,೯೨,೭೭೪ ಮತದಾರ ಪೈಕಿ ೭,೧೩,೬೧೩ ಪುರುಷರು, ೬,೭೭,೫೭೭ ಮಹಿಳೆಯರು ಹಾಗೂ ೨೪ ಜನ ಇತರರು ಸೇರಿ ೧೩,೯೧,೨೧೪ ಮತದಾರರು ಮತ ಚಲಾಯಿಸಿದ್ದಾರೆ.ಶಿರಹಟ್ಟಿ ಕ್ಷೇತ್ರದಲ್ಲಿ ೮೪,೭೫೩ ಪುರುಷರು, ೮೧,೨೭೬ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ ೧,೬೬,೦೩೧ ಮತದಾರರು, ಗದಗ ಕ್ಷೇತ್ರದಲ್ಲಿ ೮೫,೬೯೭ ಪುರುಷರು, ೮೪,೮೯೦ ಮಹಿಳೆಯರು ಹಾಗೂ ಇತರೆ ನಾಲ್ಕು ಜನ ಸೇರಿ ೧,೭೦,೫೯೧ ಮತದಾರರು, ರೋಣ ಕ್ಷೇತ್ರದಲ್ಲಿ ೮೮,೬೨೫ ಪುರುಷರು, ೮೬,೩೧೯ ಮಹಿಳೆಯರು ಹಾಗೂ ನಾಲ್ಕು ಜನ ಸೇರಿ ೧,೭೪,೯೪೮ ಮತದಾರರು, ಹಾನಗಲ್ ಕ್ಷೇತ್ರದಲ್ಲಿ ೯೧,೯೪೫ ಪುರುಷರು, ೮೫,೮೫೨ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ ೧,೭೭,೭೯೯ ಮತದಾರರು, ಹಾವೇರಿ ಕ್ಷೇತ್ರದಲ್ಲಿ ೯೫,೪೩೭ ಪುರುಷರು, ೮೮,೮೧೨ ಮಹಿಳೆಯರು ಹಾಗೂ ಇತರೆ ಏಳು ಜನ ಸೇರಿ ೧,೮೪,೨೫೬ ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ ೯೦,೦೮೦ ಪುರುಷರು, ೮೪,೨೬೪ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ ೧,೭೪,೩೪೬ ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ ೮೦,೨೯೯ ಪುರುಷರು, ೭೫,೨೧೮ ಮಹಿಳೆಯರು ಹಾಗೂ ಇತರ ಇಬ್ಬರು ಸೇರಿ ೧,೫೫,೫೧೯ ಮತದಾರರು ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ೯೬,೭೭೭ ಪುರುಷರು, ೯೦,೯೪೬ ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ ೧೧,೮೭,೭೨೪ ಮತದಾರರು ಮತಚಲಾಯಿಸಿದ್ದಾರೆ.

ಹಿರೇಕೆರೂರು ಅಧಿಕ: ಶಿರಹಟ್ಟಿ ಕ್ಷೇತ್ರದಲ್ಲಿ ಶೇ. ೭೨.೧೯, ಗದಗ ಕ್ಷೇತ್ರದಲ್ಲಿ ಶೇ. ೭೪.೩೦, ರೋಣ ಕ್ಷೇತ್ರದಲ್ಲಿ ಶೇ. ೭೩.೧೬, ಹಾನಗಲ್ ಕ್ಷೇತ್ರದಲ್ಲಿ ಶೇ. ೮೨.೩೮, ಹಾವೇರಿ ಕ್ಷೇತ್ರದಲ್ಲಿ ಶೇ. ೭೭.೨೯, ಬ್ಯಾಡಗಿ ಕ್ಷೇತ್ರದಲ್ಲಿ ಶೇ. ೮೨.೦೨, ಹಿರೇಕೆರೂರು ಕ್ಷೇತ್ರದಲ್ಲಿ ಶೇ. ೮೨.೬೩ ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ಶೇ. ೭೮.೫೩ರಷ್ಟು ಮತದಾನವಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ. ೮೨.೬೮ರಷ್ಟು ಹೆಚ್ಚು ಮತದಾನವಾದರೆ, ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ. ೭೨.೧೯ರಷ್ಟು ಮತದಾನ ದಾಖಲಾಗಿದೆ. ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಶೇ. ೭೪.೦೧ರಷ್ಟು ಮತದಾನವಾಗಿತ್ತು. ಈ ಸಲ ಶೇ. ೭೭.೬೦ರಷ್ಟು ಮತದಾನವಾಗಿದ್ದು, ಶೇ. ೩.೫೯ರಷ್ಟು ಅಧಿಕ ಮತದಾನವಾಗಿದೆ. ಜಿಲ್ಲೆಯಲ್ಲಿ ಶೇ. ೭೯.೮೨ ಮತದಾನ: ಲೋಕಸಭಾ ಚುನಾಚಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. ೭೯.೮೨ರಷ್ಟು ಮತದಾನವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಶೇ. ೮೨.೩೬, ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ. ೭೭.೨೪, ಹಾವೇರಿ ಕ್ಷೇತ್ರದಲ್ಲಿ ಶೇ. ೭೭.೨೪, ಬ್ಯಾಡಗಿ ಕ್ಷೇತ್ರದಲ್ಲಿ ಶೇ. ೮೧.೯೮, ಹಿರೇಕೆರೂರು ಕ್ಷೇತ್ರದಲ್ಲಿ ಶೇ. ೮೨.೬೨ ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ಶೇ. ೭೮.೫ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಕಳೆದ ೨೦೧೯ರ ಚುನಾವಣೆಯಲ್ಲಿ ೭೫.೫ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. ೪.೩೨ರಷ್ಟು ಅಧಿಕ ಮತದಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.