ಹಂಪಿ ಜಾತ್ರೆ: ಮನಸೂರೆಗೊಂಡ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ

| Published : Apr 25 2024, 01:06 AM IST

ಹಂಪಿ ಜಾತ್ರೆ: ಮನಸೂರೆಗೊಂಡ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿ ಕ್ಷೇತ್ರದ ಇತಿಹಾಸದಲ್ಲಿ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಅದರಂತೆ ಈಗಲೂ ನಮ್ಮ ಭಾಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ.

ಹೊಸಪೇಟೆ: ಹಂಪಿಯ ಶ್ರೀಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಶ್ರೀಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದ ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾ ವೃಂದದಿಂದ 26ನೇ ವರ್ಷದ ಭಕ್ತಿ ಭಾವನಾ ಸಾಂಸ್ಕೃತಿ ಕಾರ್ಯಕ್ರಮ ಮಂಗಳವಾರ ರಾತ್ರಿ ನಡೆಯಿತು.ಪಿಡಿಒ ಗಂಗಾಧರ ಮಾತನಾಡಿ, ಹಂಪಿ ಕ್ಷೇತ್ರದ ಇತಿಹಾಸದಲ್ಲಿ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಅದರಂತೆ ಈಗಲೂ ನಮ್ಮ ಭಾಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಆ ಕಲಾವಿದರು ಎಲೆಮರೆ ಕಾಯಿಯಂತಿದ್ದಾರೆ. ಬಹುದಿನಗಳಿಂದ ಸಂಗೀತ ಪರಂಪರೆಗೆ ಆದ್ಯತೆ ನೀಡುತ್ತಿರುವ ಕಲಾ ಪೋಷಕ ಸಂಘಗಳಿಗೆ ಇಂತಹ ಮಹತ್ವಪೂರ್ಣವಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವಕಾಶ ಒದಗಿಸಬೇಕು ಎಂದರು.

ಹಂಪಿಯ ವಿದ್ಯಾರಣ್ಯಮಠದ ಶಂಕರಾಚಾರ್ಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ಸಂಸ್ಥಾಪಕಾಧ್ಯಕ್ಷ ಅಂಗಡಿ ವಾಮದೇವ, ಪೋಷಕರಾದ ಎ.ದೊಡ್ಡ ಬಸಪ್ಪ, ಕೆ.ಪಂಪನಗೌಡ, ಎಚ್.ಕೆ. ತರುಣಕುಮಾರ್ ಮತ್ತಿತರರಿದ್ದರು.

ಹಂಪಿಯ ವಿದ್ಯಾರಣ್ಯಮಠದ ಶಂಕರಾಚಾರ್ಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಸಂಗೀತ ಕಲಾವಿದರಾದ ಯೋಗೀಶ್ ಮತ್ತು ತಂಡದವರು ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಂಗಡಿ ಸಮರ್ಥ ಮತ್ತು ತಂಡದಿಂದ ಸುಗಮ ಸಂಗೀತ, ಯಲ್ಲಪ್ಪ ಭಂಡಾರದಾರ ಮತ್ತುತಂಡದಿಂದ ಜಾನಪದ ಗೀತೆಗಳು, ಕುಮಾರಿ ಗೀತಾ ಮತ್ತುತಂಡದಿಂದ ಜನಪದ ನೃತ್ಯ ಪ್ರದರ್ಶನ ನಡೆಯಿತು.

ಅಂಜಲಿ ಭರತ ನಾಟ್ಯ ಕಲಾ ಕೇಂದ್ರದಿಂದ ಸಮೂಹ ನೃತ್ಯ, ಜಾಹ್ನವಿ ಅವರಿಂದ ಭರತನಾಟ್ಯ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಭಕ್ತರ ಮನಸೂರೆಗೊಂಡಿತು.