ಗಾಯಿತ್ರಿ ಸಿದ್ದೇಶ್ವರ ಗೆಲವು ನಿಶ್ಚಿತ: ಕರುಣಾಕರರೆಡ್ಡಿ ವಿಶ್ವಾಸ

| Published : May 09 2024, 01:08 AM IST

ಗಾಯಿತ್ರಿ ಸಿದ್ದೇಶ್ವರ ಗೆಲವು ನಿಶ್ಚಿತ: ಕರುಣಾಕರರೆಡ್ಡಿ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ನಾನು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿರುವ ಕೆಲಸಗಳು ಹಾಗೂ ಮೋದಿಯವರ ದೇಶಾಭಿವೃದ್ಧಿ ಎಲ್ಲ ಸೇರಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಜಯಗಳಿಸುತ್ತಾರೆ ಎಂದು ಇಲ್ಲಿಯ ಮಾಜಿ ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರು ಗೆಲ್ಲುವ ವಿಶ್ವಾಸವಿದೆ ಎಂದು ಇಲ್ಲಿಯ ಮಾಜಿ ಶಾಸಕ ಜಿ. ಕರುಣಾಕರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಮಹಾತ್ಮಾಗಾಂಧಿ ಆಶ್ರಯ ಕಾಲೋನಿಯ ಸ.ಕಿ.ಪ್ರಾ. ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸಮೇತ ಸೋಮವಾರ ಆಗಮಿಸಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೋದಿ ದೇಶಕ್ಕೆ ಅಗತ್ಯವಿದೆ ಎಂದರು.

ತಾಲೂಕಿನಲ್ಲಿ ನಾನು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿರುವ ಕೆಲಸಗಳು ಹಾಗೂ ಮೋದಿಯವರ ದೇಶಾಭಿವೃದ್ಧಿ ಎಲ್ಲ ಸೇರಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಜಯಗಳಿಸುತ್ತಾರೆ ಎಂದು ಹೇಳಿದರು.

ಹರಪನಹಳ್ಳಿ ತಾಲೂಕು ಸಹ ಬಿಜೆಪಿಗೆ ಹೆಚ್ಚು ಲೀಡ್‌ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ವನಜಾ, ಇಬ್ಬರು ಪುತ್ರರು, ಮುಖಂಡರು ಹಾಜರಿದ್ದರು.ಹರಪನಹಳ್ಳಿ ತಾಲೂಕಲ್ಲಿ ಶಾಂತಿಯುತ ಮತದಾನಕನ್ನಡಪ್ರಭ ವಾರ್ತೆ ಹರಪನಹಳ್ಳಿಸಣ್ಣ ಪುಟ್ಟ ವಾಗ್ವಾದ ಬಿಟ್ಟರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸ್ಥಾಪನೆಯಾಗಿದ್ದ ಸಂಪ್ರದಾಯ ಮತಗಟ್ಟೆಗಳಲ್ಲಿ ಮತಹಾಕಿ ಹೊರ ಬಂದವರಿಗೆ ವಿವಿಧ ಸಸಿಗಳನ್ನು ಉಚಿತವಾಗಿ ನೀಡಲಾಯಿತು.ಕಾಪಿ ಸೀಮೆಗೆ ಗುಳೇ ಹೋಗಿದ್ದ ಅನೇಕ ಕೂಲಿ ಕಾರ್ಮಿಕರು ಸ್ವಗ್ರಾಮ ಶಿವಪುರ ತಾಂಡಕ್ಕೆ ಮರಳಿ ತಮ್ಮ ಹಕ್ಕನ್ನು ಚಲಾಯಿಸಿದರು.

ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರೇಮಾಗನಹಳ್ಳ‍ಿ ಗ್ರಾಮದ ಮತಗಟ್ಟೆಗೆ ಆಗಮಿಸಲು ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಅಲ್ಲಿಯ ಗ್ರಾಪಂನವರು ಉಚಿತ ಆಟೋ ವ್ಯವಸ್ಥೆ ಮಾಡಿದ್ದರು. ಈ ವ್ಯವಸ್ಥೆಗೆ ರೈತ ಮುಖಂಡ ಪಣಿಯಾಪುರ ಲಿಂಗರಾಜು ಮೆಚ್ಚುಗೆ ವ್ಯಕ್ತಪಡಿಸಿದರು.ಕುಡಿಯುವ ನೀರು ವಿತರಣೆ

ಪಟ್ಟಣದ ತೋಟಗಾರಿಕಾ ಇಲಾಖೆಯ ಮತಗಟ್ಟೆ ಬಳಿ ಮುಸ್ಲಿಂ ಯೂತ್‌ ವೆಲ್‌ ಫೇರ್‌ ಅಸೋಸಿಯೇಷನ್‌ ನವರು ಮತದಾನಕ್ಕೆ ಬಂದವರಿಗೆ ಉಚಿತ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.ಇಲ್ಲಿಯ ಪ್ರಸಿದ್ದ ನೇತ್ರ ತಜ್ಞ ಡಾ. ಕೆ.ಎಂ.ಎನ್‌. ಖಾನ್‌ ಅವರ ಪುತ್ರಿ ಐಮನ್‌ ಸಪೂರ ಅವರು ದುಬೈನಿಂದ ಆಗಮಿಸಿ ಪಟ್ಟಣದ ಉಪ್ಪಾರಗೇರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.