ಮತದಾನ ಮಾಡಿದವರಿಗೆ ಐಸ್ಕ್ರೀಂ ಫ್ರೀ!

| Published : May 08 2024, 01:01 AM IST

ಸಾರಾಂಶ

ಹುಬ್ಬಳ್ಳಿಯ ಡೇರಿಸ್ ಐಸ್‌ಕ್ರೀಂ ಸಂಸ್ಥೆ ಮೊದಲೇ ಘೋಷಿಸಿದಂತೆ ಮತದಾನ ಮಾಡಿ ಬಂದವರಿಗೆ 10 ಸಾವಿರಕ್ಕೂ ಹೆಚ್ಚು ಐಸ್‌ಕ್ರೀಂಗಳನ್ನು ಉಚಿತವಾಗಿ ವಿತರಿಸಿತು.

ಹುಬ್ಬಳ್ಳಿ:

ನಗರದ ಡೇರಿಸ್ ಐಸ್‌ಕ್ರೀಂ ಸಂಸ್ಥೆ ಮೊದಲೇ ಘೋಷಿಸಿದಂತೆ ಮತದಾನ ಮಾಡಿ ಬಂದವರಿಗೆ 10 ಸಾವಿರಕ್ಕೂ ಹೆಚ್ಚು ಐಸ್‌ಕ್ರೀಂಗಳನ್ನು ಉಚಿತವಾಗಿ ವಿತರಿಸಿತು.

ಬೆಳಗ್ಗೆ 10 ಗಂಟೆಗೆ ಆರಂಭವಾದ ಈ ಉಚಿತ ಸೇವೆ ಮಧ್ಯಾಹ್ನದವರೆಗೂ ಮುಂದುವರಿಯಿತು. ಮತದಾನ ಮಾಡಿದ ಮಹಾನಗರದ ಜನತೆ ಹುಬ್ಬಳ್ಳಿ ಕುಸುಗಲ್ ರಸ್ತೆಯ ಕೇಶ್ವಾಪುರದ ಸಂಚಾರ ಪೊಲೀಸ್ ಠಾಣೆ ಎದುರಿನ ಡೇರೀಸ್ ಐಸ್‌ಕ್ರೀಂ ಹಾಗೂ ಶಿರೂರು ಪಾರ್ಕ್, ಅಕ್ಷಯ ಕಾಲನಿಯ ಫುಡ್ ಕೋರ್ಟ್‌ನ ಡೇರೀಸ್ ಐಸ್‌ಕ್ರೀಂ ಮಳಿಗೆಯಲ್ಲಿ ಉಚಿತವಾಗಿ ಐಸ್‌ಕ್ರೀಂ ವಿತರಣೆ ಮಾಡಲಾಯಿತು.

ಮಧ್ಯಾಹ್ನದ ಸಮಯದಲ್ಲಿ ಸಾವಿರಾರು ಜನರು ಸರದಿ ನಿಂತು ತಮ್ಮ ಬೆರಳಿನ ಗುರುತು ತೋರಿಸಿ ನೆಚ್ಚಿನ ಐಸ್‌ಕ್ರೀಂ ಪಡೆದು ಸವಿದರು.

ನಮ್ಮ ಸಂಸ್ಥೆಯ ಹೆಸರನ್ನು ಪರಿಚಯಿಸುವುದು ಹಾಗೂ ಮತದಾನ ಜಾಗೃತಿ ಮೂಡಿಸಲು ಈ ನೂತನ ಪ್ರಯತ್ನವನ್ನು ಮಾಡಿದ್ದೇವೆ ಎಂದು ಸಂಸ್ಥೆಯ ಮಾಲೀಕರಾದ ಅಕ್ಷಯ ಡಾಣಕಶಿರೂರ್ ಹಾಗೂ ಅಕ್ಷಯ ಸಂತಸ ಹಂಚಿಕೊಂಡರು.

ಇಡ್ಲಿ ವಿತರಣೆ:

ಅದರಂತೆ ದುರ್ಗದ್‌ಬೈಲ್ ರಸ್ತೆಯಲ್ಲಿ ಹೊಟೇಲ್ ಮಾಲೀಕರಾದ ಭಾಸ್ಕರ್ ಡೋಂಗ್ರಿ ಎಂಬುವರು ಮತದಾನ ಮಾಡಿದ ಬಂದವರ ಶಾಹಿಯ ಗುರುತು ನೋಡಿ 5 ರೂ.ಗೆ ಒಂದು ಇಡ್ಲಿಯನ್ನು ನೀಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.