ಡಾ.ರಾಜಕುಮಾರ ಬದುಕು ಎಲ್ಲರಿಗೂ ಆದರ್ಶಪ್ರಾಯ: ಡಾ.ಶ್ರೀರಂಗ

| Published : Apr 26 2024, 12:47 AM IST

ಸಾರಾಂಶ

ವರನಟ ಡಾ.ರಾಜಕುಮಾರ ಅವರು ಕೇವಲ ನಟ ಮಾತ್ರವಲ್ಲ. ಅವರು ಕನ್ನಡದ ಆಸ್ತಿ, ಸರಳ ಸಜ್ಜನಿಕೆಯ ವ್ಯಕ್ತಿ. ತಮ್ಮ ಪಾತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು. ಡಾ.ರಾಜಕುಮಾರ ಅವರ ಬದುಕು, ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ ಎಂದು ಸಂಗೀತಗಾರ ಡಾ.ಶ್ರೀರಂಗ ಜೋಶಿ ಹೇಳಿದರು.

ಕನ್ನಡಪ್ರವಾರ್ತೆ ಬೆಳಗಾವಿ

ವರನಟ ಡಾ.ರಾಜಕುಮಾರ ಅವರು ಕೇವಲ ನಟ ಮಾತ್ರವಲ್ಲ. ಅವರು ಕನ್ನಡದ ಆಸ್ತಿ, ಸರಳ ಸಜ್ಜನಿಕೆಯ ವ್ಯಕ್ತಿ. ತಮ್ಮ ಪಾತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು. ಡಾ.ರಾಜಕುಮಾರ ಅವರ ಬದುಕು, ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ ಎಂದು ಸಂಗೀತಗಾರ ಡಾ.ಶ್ರೀರಂಗ ಜೋಶಿ ಹೇಳಿದರು.ನಗರದ ವಾರ್ತಾ ಭವನದಲ್ಲಿ ನಡೆದ ವರನಟ ಡಾ.ರಾಜಕುಮಾರ 95ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಕಂಪನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ನಟ ಡಾ.ರಾಜಕುಮಾರ. ಕನ್ನಡ ಭಾಷೆ, ನೆಲ, ಜಲ, ಜನ ಎಲ್ಲರಿಗೂ ಸದಾಕಾಲ ಬೆಳಕಾಗಿರುವ ಡಾ.ರಾಜಕುಮಾರ ಜೀವನವನ್ನು ಸ್ಮರಿಸೋಣ ಎಂದರು.

ರಾಜಕುಮಾರ ತಮ್ಮ ತಂದೆಯವರೊಂದಿಗೆ ಗುಬ್ಬಿ ವೀರಣ್ಣ ನೇತೃತ್ವದ ತಂಡದಲ್ಲಿ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇಲ್ಲಿಯೇ ರಾಜಕುಮಾರ್ ತಮ್ಮ ನಟನೆ ಮತ್ತು ಗಾಯನ ಕೌಶಲ್ಯ ಪ್ರಾರಂಭಿಸಿದರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಮುತ್ತು ರಾಜು ಚಿತ್ರರಂಗ ಪ್ರವೇಶಿಸಿ. ತದನಂತರ ರಾಜಕುಮಾರ್ ಆಗಿ ತಮ್ಮ ಜೀವನದುದ್ದಕ್ಕೂ ಮನೆ ಮನ ಮಾತಾದರು ಎಂದು ತಿಳಿಸಿದರು.

ಸಿಟಿಇ ಕಾಲೇಜು ಉಪನ್ಯಾಸಕಿ ಝಡ್.ಜಿ. ಸಯ್ಯದ್, ಸಣ್ಣ ಉಳಿತಾಯ ಖಾತೆ ಸಹಾಯಕ ನಿರ್ದೇಶಕ ವಿ.ಎಂ.ಕಂಗ್ರಾಳಕರ್, ಶಿಕ್ಷಣ ಇಲಾಖೆ ವಿಷಯ ಪರಿವಿಕ್ಷಕ ಎಂ.ಎಂ.ಪಾಟೀಲ, ಮುಖ್ಯೋಪಾಧ್ಯಾಯ ಎಸ್.ಎಸ್.ಘೋರ್ಪಡೆ, ದೈಹಿಕ ಶಿಕ್ಷಕ ಎಂ.ಪಿ ನಿಚ್ಚಣಕಿ, ಶಿಕ್ಷಕ ಎ.ಬಿ.ಕಾಮಣ್ಣವರ, ಅಧೀಕ್ಷಕ ಎಂ.ಬಿ.ಉಘಾಡೆ, ದ್ವಿತೀಯ ದರ್ಜೆ ಸಹಾಯಕ ಗಜಾನನ ಹಳೆಮನಿ ಮತ್ತು ಮಹಾಬಳೇಶ್ವರ ಸಾಬಣ್ಣವರ, ವಾರ್ತಾ ಇಲಾಖೆ ಪ್ರಶಿಕ್ಷಣಾರ್ಥಿ ನೀಲಾ ಹೊಸಮನಿ, ಸಿದ್ದೇಶ್ವರ ದಾಸಪ್ಪಗೊಳ, ಸಂತೋಷ್ ಕಾಂಬಳೆ ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಿಬ್ಬಂದಿ ಅನಂತ ಪಪ್ಪು ಸ್ವಾಗತ ಕೋರಿದರು.