ಕುಡಿವ ನೀರಿಲ್ಲದೇ ಸಂಕಷ್ಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ

| Published : May 10 2024, 01:33 AM IST

ಸಾರಾಂಶ

ಮಸ್ಕಿ ತಾಲೂಕಿನ ಉಪ್ಪಾರ್ ಬುದ್ಧಿನ್ನಿ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಪಿಡಿಒಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ತಾಲೂಕಿನ ಉಪ್ಪಾರ ಬುದ್ಧಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಜನ-ಜಾನುವಾರಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗೌಡನಭಾವಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸಂತ ಗೀತಾಗೆ ಬುದ್ದಿನ್ನಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಮನವಿ ನೀಡಿ ಆಗ್ರಹಿಸಲಾಯಿತು.

ತಾಲೂಕಿನ ಉಪ್ಪಾರ ಬುದ್ದಿನ್ನಿ ಗ್ರಾಮದಲ್ಲಿ ಪಿಡಿಒ ವಸಂತಗೀತಾಗೆ ಗುರುವಾರ ಮನವಿ ನೀಡಿ, ಮಾತನಾಡಿದ ಸಿಪಿಐಎಂಎಲ್ ರಾಜ್ಯ ಮುಖಂಡರಾದ, ಎಂ.ಗಂಗಾಧರ, ಬುದ್ದಿನ್ನಿ ಗ್ರಾಮಕ್ಕೆ ಕಾಯಂ ವಾಟರಮನ್ ಇಲ್ಲಾ, ಇದ್ದವರು ಮೃತರಾಗಿದ್ದರಿಂದ ಅವರ ಹೆಂಡತಿಯವರು ನೀರು ನಿರ್ವಹಣೆ ಮಾಡಲಿಕ್ಕೆ ಆಗುವುದಿಲ್ಲ. ಬೇರೆಯವರನ್ನು ನೇಮಿಸಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಬೇಕು. ಹಾಗೆಯೇ ಕುಡಿಯುವ ನೀರು ಯೋಗ್ಯವಿಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕ(ಆರ್‌ಓ)ಸ್ಥಾಪಿಸಬೇಕು. ಕಳ್ಳತನದಿಂದ ಯಾರಿಗೂ ಗೊತ್ತಾಗದ ಹಾಗೇ ಕುಡಿಯುವ ನೀರಿನ ಪೈಪ್‌ಗಳ ಮೇಲೆ ಕಲ್ಲು ಎತ್ತಿಹಾಕುವವರ ಮೇಲೆ ಸೂಕ್ತ ಕ್ರಮಕ್ಕಾಗಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಬೇಕು ಮತ್ತು ನೀರಿನ ಟ್ಯಾಂಕ್ ಹತ್ತಿರ ಗಿಡ-ಘಂಟಿಗಳು ಬೆಳೆದಿದ್ದು, ಟ್ಯಾಂಕ್ ಓಪನ್ ಇರುವುದರಿಂದ ಪಕ್ಷಿಗಳು ನೀರು ಕುಡಿಯಲು ಹೋಗಿ ನೀರಿಗೆ ಬಿದ್ದು ಬಲಿಯಾಗುತ್ತಿವೆ. ಆ ನೀರನ್ನೇ ಕುಡಿಯಬೇಕಾದ ಪರಸ್ಥಿತಿ ಇರುವುದರಿಂದ ಸ್ವಚ್ಛಗೊಳಿಸಿ ನೀರು ಹರಿಸಬೇಕು. ಬೇಸಿಗೆ ಇರುವುದರಿಂದ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ವಸಂತ ಗೀತಾ, ಒಂದೆರಡು ದಿನಗಳಲ್ಲಿ ನೀರಿನ ಸಮಸ್ಯೆ ಪರಿಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಗ್ರಾಮಸ್ಥರು ನೀರು ಸಮರ್ಪಕವಾಗಿ ಒದಗಿಸದೇ ಹೋದರೆ ಹೋರಾಟದ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ದುರುಗಪ್ಪ, ಆನಂದ, ಭೀಮೇಶ, ಶರೀಫ್, ಚಿದಾನಂದ,ಗ್ರಾಮಸ್ಥರಾದ,ಬಸವಾರಾಜ, ಯಂಕೋಬ, ದೇವಮ್ಮ, ಮಲ್ಲಮ್ಮ, ಗಂಗಾಧರ, ನಾಗೇಶ ಗಲಗಿನ, ಗ್ರಾ.ಪಂ. ಸದಸ್ಯರಾದ, ಶಿವಣ್ಣ, ಗಂಗಪ್ಪ, ಅಮರಪ್ಪ, ಮನೋಹರ, ಗಂಗಪ್ಪ,ವೆಂಕಟೇಶ, ಮಲ್ಲಪ್ಪ ಸೇರಿದಂತೆ ಇತರರು ಇದ್ದರು. ದುರುಗಪ್ಪ ಬುದ್ದಿನ್ನಿ ಸೇರಿ ಇತರರಿದ್ದರು.