ವೀಳ್ಯದೆಲೆಗೆ ಬಂಪರ್‌ ದರ, ಗ್ರಾಹಕರ ಜೇಬಿಗೆ ಹೊರೆ

| Published : May 08 2024, 01:04 AM IST

ವೀಳ್ಯದೆಲೆಗೆ ಬಂಪರ್‌ ದರ, ಗ್ರಾಹಕರ ಜೇಬಿಗೆ ಹೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರ, ತಮಿಳುನಾಡು, ಹಾಗು ನಮ್ಮ ರಾಜ್ಯದಲ್ಲೂ ಕರಾವಳಿ ಪ್ರದೇಶದಲ್ಲೂ ವೀಳ್ಯದೆಲೆ ಬೆಲೆ ರೈತರು ಬೆಳೆಯುತ್ತಿದ್ದರು. ಕೆಲವು ಕಡೆ ಎಲೆ ಚೆನ್ನಾಗಿದ್ದರು ಇನ್ನೂ ಕೆಲವು ಕಡೆ ಸರಿಯಾದ ತಂಪಿನ ವಾತಾವರಣವಿಲ್ಲದೆ ಬೆಳೆಯಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಟೇಕಲ್ಧಾರ್ಮಿಕ ಕಾರ್ಯಕ್ರಮ ಮತ್ತು ಇತರೆ ಶುಭ ಸಮಾರಂಭಗಳಲ್ಲಿ ಅಗ್ರಸ್ಥಾನ ಪಡೆದಿರುವ ವೀಳ್ಯದೆಲೆ, ಅಡಿಕೆ ಪ್ರಿಯರಿಗಂತೂ ಜತೆಗಿರಲೇಬೇಕು. ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿರುವುದು ಬೆಳೆಗಾರರಲ್ಲಿ ಸಂತಸ ಮೂಡಿಸಿದ್ದರೂ, ಗ್ರಾಹಕರಿಗೆ ಮಾತ್ರ ಹೊರೆಯಾಗಿದೆ. ವೀಳ್ಯದೆಲೆ ದರ ಗಗನ ಮುಖಿಯಾಗಿದ್ದು ಟೇಕಲ್‌ನ ಸಂತೆಯಲ್ಲಿ 100 ವೀಳೆಯದೆಲೆಗೆ ೧೮೦ ರಿಂದ ೨೦೦ ರುಪಾಯಿ ಗಡಿ ದಾಟಿದೆ. ಸ್ವಲ್ಪ ಸಣ್ಣ ಹಾಗೂ ಕಪ್ಪು ಬಣ್ಣದ್ದು ೧೨೦ ರಿಂದ ೧೩೦ ರು.ಗೆ ಮಾರಾಟವಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಿದ್ದು ವೀಳ್ಯದೆಲೆ ಇಳುವರಿ ಕುಸಿದಿದೆ. ಇದರಿಂದಾಗಿ ಬೆಲೆ ಹೆಚ್ಚಾಗಿದೆ.ಅಡಿಕೆ ಜತೆ ವೀಳೆಯದೆಲೆ

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಅಡಿಕೆ ವೀಳ್ಯದೆಲೆ ಬೆರೆಸಿ ಜಗಿಯುತ್ತಾರೆ. ಅದರಲ್ಲೂ ಮಲೆನಾಡು ಪ್ರದೇಶದಲ್ಲಿ ಅಡಿಕೆ ವೀಳ್ಯದೆಲೆ ಸೇರಿಸಿ ಜಗಿಯುವುದು ಸಾಮಾನ್ಯ. ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಹಿಡಿದು ಹಬ್ಬ ಹರಿದಿನಗಳು, ಮದುವೆ, ನಾಮಕರಣ, ಆರತಕ್ಷತೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ವೀಳ್ಯದೆಲೆ ಕಾಯಂ ಸ್ಥಾನ ಪಡೆದಿದೆ.ನೆರೆ ರಾಜ್ಯ ಆಂಧ್ರ, ತೆಮಿಳುನಾಡು, ಹಾಗು ನಮ್ಮ ರಾಜ್ಯದಲ್ಲೂ ಕರಾವಳಿ ಪ್ರದೇಶದಲ್ಲೂ ವೀಳ್ಯದೆಲೆ ಬೆಲೆ ರೈತರು ಬೆಳೆಯುತ್ತಿದ್ದರು. ಕೆಲವು ಕಡೆ ಎಲೆ ಚೆನ್ನಾಗಿದ್ದರು ಇನ್ನೂ ಕೆಲವು ಕಡೆ ಸರಿಯಾದ ತಂಪಿನ ವಾತಾವರಣವಿಲ್ಲದೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ಗುಣಮಟ್ಟವಿದ್ದರೆ ಇನ್ನೂ ಕೆಲವು ಕಡೆ ಎಲೆಯ ಗುಣಮಟ್ಟದಲ್ಲಿ ಏರು ಪೇರಾಗಿರುತ್ತದೆ.ಕೋಲಾರ ಜಿಲ್ಲೆಯಲ್ಲಿ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಇನ್ನೂ ಕೆಲವು ಕಡೆ ಎಲೆ ತೋಟಗಳಿದ್ದು ಆ ರೈತರೂ ಕೂಡ ವೀಳ್ಯದೆಲೆ ಬೆಳೆಯುತ್ತಾರೆ. ಪ್ರಸಕ್ತ ವೀಳ್ಯದೆಲೆ ಬೆಳೆಗಾರರಿಗೆ ಬಂಪರ್‌ ದರ ಸಿಗುತ್ತಿದ್ದರೂ, ಗ್ರಾಹಕರಿಗೆ ಹೊರೆಯಾಗಿದೆ. ಕೋಟ್..................ನಾವು ಪಾರಂಪರಿಕವಾಗಿ ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಕಳೆದ ಒಂದು ವರ್ಷದಿಂದ ಎಲೆಯ ಬೆಲೆಯಲ್ಲಿ ಏರುಪೇರಾಗುತ್ತಿದೆ. ಗುಣಮಟ್ಟದ ಎಲೆಗೆ ದುಪ್ಪಟ್ಟು ಬೆಲೆಯಾಗಿದೆ. ೮೦ ರಿಂದ ೧೦೦ ರೂಪಾಯಿ ಕಟ್ಟು ಇದ್ದ ಎಲೆ ಇಂದು ೧೮೦-೨೦೦ ರೂಪಾಯಿ ಏರಿದೆ. - ನಾಗರಾಜ, ವೀಳೆದೆಲೆ ವ್ಯಾಪಾರಿ.