ಲೀಡ್‌ ಸುದ್ದಿ: ಯಾದಗಿರಿಯಲ್ಲಿ ಶೇ.65.11 ರಷ್ಟು ಮತದಾನ: ಸುಶೀಲಾ

| Published : May 09 2024, 12:46 AM IST

ಸಾರಾಂಶ

ಲೋಕಸಭೆ ಚುನಾವಣೆ: ಸುರುಪುರ, ಶಾಹಪುರ, ಗುರುಮಠಕಲ್ ಸೇರಿ 6,72,981 ಮತ ಚಲಾವಣೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಜಿಲ್ಲೆಯಾದ್ಯಂತ ಮೇ 7ರಂದು ಮಂಗಳವಾರ ಮುಗಿದಿದ್ದು, ಯಾದಗಿರಿ ಜಿಲ್ಲೆಯ ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್‌ ಸೇರಿದಂತೆ ನಾಲ್ಕು ಕ್ಷೇತ್ರಗಳು ಸೇರಿ ಒಟ್ಟು ಶೇಕಡವಾರು 65.11 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 10,33,586 ಮತದಾರರ ಪೈಕಿ, ಒಟ್ಟು ಪುರುಷ ಮತದಾರರು 3,41,125, ಮಹಿಳಾ ಮತದಾರರು 3,31,849, ಇತರೆ 7 ಸೇರಿದಂತೆ ಒಟ್ಟು 6,72,981 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 65.11 ರಷ್ಟು ಮತದಾನವಾಗಿದೆ.* ಸುರಪುರ (ಶೋರಾಪೂರ) ಮತಕ್ಷೇತ್ರ: ಸುರಪುರ ವಿಧಾನಸಭೆಯಲ್ಲಿ ಶೇ. 76.04 ರಷ್ಟು ಮತದಾನವಾಗಿದೆ. ಸುರಪುರ ಕ್ಷೇತ್ರದಲ್ಲಿ 1,42,532 ಪುರುಷ ಮತದಾರರು, 1,40,523 ಮಹಿಳಾ ಮತದಾರರು, 28 ಇತರೆ ಮತದಾರರು ಸೇರಿದಂತೆ ಒಟ್ಟು 2,83,083 ಮತದಾರರು ಇದ್ದಾರೆ.ಇದರಲ್ಲಿ ಒಟ್ಟು ಪುರುಷ ಮತದಾರರು 1,09,995, ಮಹಿಳಾ ಮತದಾರರು 1,05,270 , ಇತರೆ 3 ಸೇರಿದಂತೆ ಒಟ್ಟು 2,15,268 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 76.04 ರಷ್ಟು ಮತದಾನವಾಗಿದೆ.* ಶಹಾಪುರ ಮತಕ್ಷೇತ್ರ: ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮಂಗಳವಾರ ಒಟ್ಟು ಶೇಕಡವಾರು 61.08 ರಷ್ಟು ಮತದಾನವಾಗಿದೆ. ಶಹಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,47,138 ಮತದಾರರಿದ್ದಾರೆ. ಇದರಲ್ಲಿ ಒಟ್ಟು ಪುರುಷ ಮತದಾರರು 76,990, ಮಹಿಳಾ ಮತದಾರರು 73,954 , ಇತರೆ 1 ಸೇರಿದಂತೆ ಒಟ್ಟು 1,50,945 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 61.08 ರಷ್ಟು ಮತದಾನವಾಗಿದೆ.

* ಯಾದಗಿರಿ ಮತಕ್ಷೇತ್ರ:ಯಾದಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇಕಡವಾರು 60.70 ರಷ್ಟು ಮತದಾನವಾಗಿದೆ. ಯಾದಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,48,148 ಮತದಾರರಿದ್ದು, ಅವರಲ್ಲಿ ಪುರುಷ ಮತದಾರರು 76,474, ಮಹಿಳಾ ಮತದಾರರು 74,143 , ಇತರೆ 1 ಸೇರಿದಂತೆ ಒಟ್ಟು 1,50,618 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 60.70 ರಷ್ಟು ಮತದಾನವಾಗಿದೆ.* ಗುರುಮಠಕಲ್ ಮತಕ್ಷೇತ್ರ: ಗುರುಮಠಕಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇಕಡವಾರು 61.18ರಷ್ಟು ಮತದಾನವಾಗಿದೆ. ಗುರುಮಠಕಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,55,217 ಮತದಾರರು ಇದ್ದಾರೆ. ಇದರಲ್ಲಿ ಒಟ್ಟು ಪುರುಷ ಮತದಾರರು 77,666, ಮಹಿಳಾ ಮತದಾರರು 78,482 , ಇತರೆ 2 ಸೇರಿದಂತೆ ಒಟ್ಟು 1,56,150 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 61.18 ರಷ್ಟು ಮತದಾನವಾಗಿದೆ.