ಬಸವೇಶ್ವರ ಸೊಸೈಟಿಗೆ ₹4.58 ಕೋಟಿ ಲಾಭ

| Published : Apr 26 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ: ಬಸವೇಶ್ವರ ಅರ್ಬನ್ ಸೊಸೈಟಿ ಕಳೆದ ಮಾರ್ಚ್‌ ಅಂತ್ಯಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕ ಸಹಕಾರದಿಂದ ₹4.58 ಕೋಟಿ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಮುನ್ನೆಡಯುತ್ತಲಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲು ಢವಳೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಬಸವೇಶ್ವರ ಅರ್ಬನ್ ಸೊಸೈಟಿ ಕಳೆದ ಮಾರ್ಚ್‌ ಅಂತ್ಯಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕ ಸಹಕಾರದಿಂದ ₹4.58 ಕೋಟಿ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಮುನ್ನೆಡಯುತ್ತಲಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲು ಢವಳೇಶ್ವರ ಹೇಳಿದರು.

ಪಟ್ಟಣದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಸೊಸೈಟಿ 2023-24ನೇ ಸಾಲೀನ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿ 10,800 ಶೇರುದಾರಿಂದ ₹6.07 ಕೋಟಿ ಶೇರು ಬಂಡವಾಳ ಹೊಂದಿ, ₹207.85 ಕೋಟಿ ಠೇವು ಸಂಗ್ರಹಿಸಿ, ₹20 ಕೋಟಿ ಕಾಯ್ದಿಟ್ಟ ನಿಧಿಗಳನ್ನು ಹೊಂದಿ ಠೇವುದಾರ ಭದ್ರತೆಗಾಗಿ ₹61.31 ಕೋಟಿ ಗುಂತಾವಣಿಗಳನ್ನು ಮಾಡಿ ಮಾರ್ಚ್‌ ಅಂತ್ಯಕ್ಕೆ ಒಟ್ಟು ₹244.82 ಕೋಟಿ ದುಡಿಯುವ ಬಂಡವಾಳ ಹೊಂದಿ ರೈತಾಪಿ ವರ್ಗ, ವ್ಯಾಪಾರಸ್ಥರಿಗೆ ಸೇರಿದಂತೆ ವಿವಿಧ ತೇರನಾದ ₹158.37 ಕೋಟಿ ಸಾಲ ವಿತರಿಸಿ ₹4.58 ಕೋಟಿ ಲಾಭ ಹೊಂದಿದೆ ಎಂದರು. ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಮಾತನಾಡಿ, ಸೊಸೈಟಿಯ ಗ್ರಾಹಕರು ಸಕಾಲಕ್ಕೆ ವ್ಯವಹಾರ ನಡೆಸಿದರಿಂದ ಶ್ರೀ ಬಸವೇಶ್ವರ ಸೊಸೈಯಿಟಿಯು ಶೇರುದಾರಿರಿಗೆ ಶೇ.15 ಲಾಭಾವಂಶ ವಿತರಿಸಿ ಪ್ರಗತಿ ಪತಥದತ್ತ ಸಾಗುತ್ತಿವೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ರವೀಂದ್ರ ಬಾಗೋಜಿ, ನಿರ್ದೇಶಕರಾದ ಬಸವರಾಜ ಮ.ತೇಲಿ, ಗಿರೀಶ ಸು.ಢವಳೇಶ್ವರ, ಚನ್ನಬಸು ಭೀ.ಬಡ್ಡಿ, ಶ್ರೀಕಾಂತ ಶಿ.ಹಿರೇಮಠ, ಶ್ರೀಶೈಲ ಯ.ಮದಗಣ್ಣವರ, ದೇವಪ್ಪ ಫ.ಕೌಜಲಗಿ, ಕುಸುಮಾ ಆ.ತೇಲಿ, ಸುಮಿತ್ರಾ ಪ್ರ.ಶೇಡಬಾಳ, ಮಹಾದೇವಿ ಶಂ.ಹಿರೇಮಠ, ಲಕ್ಷ್ಮಣ ಬ.ತೇಳಗಡೆ, ರಾಘವೇಂದ್ರ ಸಿ.ಕೆಸಪನಟ್ಟಿ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಇದ್ದರು.

ಕೋಟ್‌....ಸೊಸೈಟಿ ಈಗಾಗಲೇ ಹದಿನೈದು ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಪ್ರಗತಿಯಲ್ಲಿದ್ದು, ಮುಂಬರುವ ದಿನಗಳ ಇನ್ನೂ 5 ಶಾಖೆಗಳ ಆರಂಭಿಸುವ ಮತ್ತು ಶಾಖೆಗಳ ಸ್ವಂತ ಕಟ್ಟಡ ಹೊಂದಲು ನಿವೇಶ ಖರೀದಿಸುವ ಗುರಿ ಹೊಂದಲಾಗಿದೆ.ಮಲ್ಲು ಢವಳೇಶ್ವರ, ಬಸವೇಶ್ವರ ಅರ್ಬನ್ ಸೊಸೈಟಿ ಅಧ್ಯಕ್ಷರು.