ಸಕಲ ಸಿದ್ಧತೆಯೊಂದಿಗೆ ಹೊಳೆನರಸೀಪುರದಲ್ಲಿ ಲೋಕಸಭೆ ಚುನಾವಣೆಯ ಮತಗಟ್ಟೆಗೆ ತೆರಳಿದ ಸಿಬ್ಬಂದಿ

| Published : Apr 26 2024, 12:46 AM IST

ಸಕಲ ಸಿದ್ಧತೆಯೊಂದಿಗೆ ಹೊಳೆನರಸೀಪುರದಲ್ಲಿ ಲೋಕಸಭೆ ಚುನಾವಣೆಯ ಮತಗಟ್ಟೆಗೆ ತೆರಳಿದ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ತೆರೆದಿರುವ ಮಾಸ್ಟರಿಂಗ್ ಕೇಂದ್ರದಲ್ಲಿ ಶುಕ್ರವಾರ ಜರುಗುವ ಲೋಕಸಭಾ ಚುನಾವಣೆಗಾಗಿ ಪೂರ್ವ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.

ಮಾಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ತೆರೆದಿರುವ ಮಾಸ್ಟರಿಂಗ್ ಕೇಂದ್ರದಲ್ಲಿ ಶುಕ್ರವಾರ ಜರುಗುವ ಲೋಕಸಭಾ ಚುನಾವಣೆಗಾಗಿ ಪೂರ್ವ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.

ಚುನಾವಣೆ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಮತದಾನ ಯಂತ್ರ, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸುವ ಸಲುವಾಗಿ ಸೂಕ್ತ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದ್ದು, ಚುನಾವಣೆ ಪೂರ್ವ ಸಿದ್ಧತೆಯಲ್ಲಿ ತೊಡಗುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೊಂದಲಕ್ಕೆ ಅವಕಾಶವಾಗದಂತೆ ಪ್ರತಿಯೊಂದು ವಿಷಯವನ್ನು ಕಾಳಜಿಯಿಂದ ನಿರ್ವಹಿಸಲಾಗಿತ್ತು. ಜತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ೩೫ ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ ಬಿಸಿಲ ಗರಿಷ್ಠತೆಗೆ ಸಿಬ್ಬಂದಿ ತತ್ತರಿಸಿದರು.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಶಿಕ್ಷಣ, ಪೊಲೀಸ್, ಕಂದಾಯ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ, ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ಹಾಗೂ ತಹಸೀಲ್ದಾರ್ ಪ್ರವೀಣ್ ಕುಮಾರ್ ಪಿ.ಸಿ. ಮಾರ್ಗದರ್ಶನದಲ್ಲಿ ಮಾಸ್ಟರ್ ಟ್ರೈನರ್‌ಗಳಾದ ಗಿರೀಶ್, ಕುಮಾರಸ್ವಾಮಿ, ಪ್ರಭುಶಂಕರ್, ಸುಜಾತ ಅಲಿ ಹಾಗೂ ಬಿ.ಆರ್. ರಾಮಚಂದ್ರಪ್ಪ ನೀಡಿದರು.

ಚುನಾವಣೆ ಕರ್ತವ್ಯದಲ್ಲಿ ತಾಲೂಕು ಕಚೇರಿ ಚುನಾವಣೆ ವಿಭಾಗದ ಶಿರೆಸ್ತೇದಾರ್ ಉದಯ್, ತಾಪಂ ಇಒ ಕುಸುಮಾಧರ್, ತಾಪಂ ಯೋಜನಾಧಿಕಾರಿ ಗೋಪಾಲ್ ಪಿ.ಆರ್., ಉಪ ತಹಸೀಲ್ದಾರ್ ರೂಪೇಶ್, ಡಿವೈಎಸ್‌ಪಿ ಅಶೋಕ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ನಗರ ಠಾಣೆ ಪಿಎಸ್ಸೈ ಅಜಯ್ ಕುಮಾರ್, ಇಸಿಒ ಸೈಯದ್ ಖಾದ್ರಿ, ಕಂದಾಯ ಇಲಾಖೆಯ ಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಉದಯ್ ಬಣಕರ್, ಇತರರು ಇದ್ದರು.ಹೊಳೆನರಸೀಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆದಿರುವ ಮಾಸ್ಟರಿಂಗ್ ಕೇಂದ್ರದಲ್ಲಿ ತಹಸೀಲ್ದಾರ್ ಪ್ರವೀಣ್ ಕುಮಾರ್ ಪಿ..ಸಿ. ಪರಿಶೀಲನೆ ನಡೆಸಿದರು.