ಹರಿಹರ ತಾಲೂಕಿಗೆ ಶೇ.೬೪.೦೫ ಫಲಿತಾಂಶ

| Published : May 10 2024, 01:33 AM IST

ಸಾರಾಂಶ

ಗುರುವಾರ ಪ್ರಕಟವಾದ 2023-೨೦೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹರಿಹರ ತಾಲೂಕಿನಾದ್ಯಾಂತ ಶೇ.೬೪.೦೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಹರಿಹರ: ಗುರುವಾರ ಪ್ರಕಟವಾದ 2023-೨೦೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕಿನಾದ್ಯಾಂತ ಶೇ.೬೪.೦೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ ೧೫೨೨ ಪುರುಷ ವಿದ್ಯಾರ್ಥಿಗಳಲ್ಲಿ ೭೬೯ (ಶೇ.೫೦.೮೦), ೧೫೭೧ ಮಹಿಳಾ ವಿದ್ಯಾರ್ತಿಗಳಲ್ಲಿ ೧೨೧೨ (ಶೇ.೭೮) ಸೇರಿ ಒಟ್ಟು ೩೦೯೩ರಲ್ಲಿ ೧೯೮೧ (ಶೇ.೬೪.೦೫) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ.೧೦೦ ಫಲಿತಾಂಶ:

ಕೊಂಡಜ್ಜಿಯ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ಕುಂಬಳೂರಿನ ಬಸವ ಗುರುಕುಲ ಇಂಗ್ಲಿಷ್ ಮಾಧ್ಯಮ ಶಾಲೆ ಶೇ.೧೦೦ ರಷ್ಟು ಫಲಿತಾಂಶವನ್ನು ಪಡೆದಿದೆ. ಹೊಸಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಇಂಗ್ಲೀಷ್ ಮಾಧ್ಯಮ ಅಭಿಷೇಕ್ ಡಿ.ಜಿ ೬೦೭ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ, ಹರಿಹರದ ಮರಿಯಾ ನಿವಾಸ ಪ್ರೌಢಶಾಲೆಯ ಸಂಜಯ ಸಿ. ೬೦೫ ದ್ವೀತಿಯ ಹಾಗೂ ನಗರದ ಸೆಂಟ್ ಮೇರಿಸ್ ಪ್ರೌಢಶಾಲೆಯ ಮೇರಿ ಶ್ವೇತಾ ಎ. ೬೦೦ ಅಂಕ ಪಡೆದು, ತೃತೀಯ ಸ್ಥಾನ ಪಡೆದಿದ್ದಾರೆ.

- - -