ಲೋಕಾಯುಕ್ತಾ ಅಧಿಕಾರಿಗಳಿಗೆ 15 ದೂರು ಸಲ್ಲಿಕೆ

| Published : May 09 2024, 01:17 AM IST

ಲೋಕಾಯುಕ್ತಾ ಅಧಿಕಾರಿಗಳಿಗೆ 15 ದೂರು ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರನಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು 15 ಮಂದಿ ಸಾರ್ವಜನಿಕರು ಲೋಕಾಯುಕ್ತಾ ಅಧಿಕಾರಿಗಳಿಗೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ದೂರುಗಳನ್ನು‌ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಹನೂರನಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು 15 ಮಂದಿ ಸಾರ್ವಜನಿಕರು ಲೋಕಾಯುಕ್ತಾ ಅಧಿಕಾರಿಗಳಿಗೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ದೂರುಗಳನ್ನು‌ ಸಲ್ಲಿಸಿದರು.

ಈ ವೇಳೆ ಹನೂರು ಪಪಂನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸದಿರುವ ಬಗ್ಗೆ ಸಂಬಂಧಿಸಿದಂತೆ 4 ದೂರು, ಕಂದಾಯ ಇಲಾಖೆಯಲ್ಲಿ ಆರ್‌ಟಿಸಿ ತಿದ್ದುಪಡಿ ತಹಸೀಲ್ದಾರ್ ಕಚೇರಿಯಲ್ಲಿ ಕಡತಗಳ ನೀಡಲು ವಿಳಂಬ ಧೋರಣೆ ಬಗ್ಗೆ ಮತ್ತು ಇನ್ನಿತರ ಸಮಸ್ಯೆಗಳ 8 ದೂರುಗಳು ಸಾರ್ವಜನಿಕರು ಸಲ್ಲಿಸಿದರು. ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತನ ವಿರುದ್ಧ 1ದೂರು ಹಾಗೂ ವಿವಿಧ ಗ್ರಾಪಂಗಳಲ್ಲಿ ಚರಂಡಿಗಳಲ್ಲಿ‌ ಅಸ್ವಚ್ಚತೆಯಿಂದ ಕೂಡಿದ್ದರೂ ಕೂಡ ಪಿಡಿಒಗಳು ಕ್ರಮ ಜರುಗಿಸಿಲ್ಲ ಎಂದು 2 ದೂರುಗಳು ಸೇರಿ ಒಟ್ಟಾರೆ 15 ಅರ್ಜಿಗಳನ್ನು ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದರು.

ಈ ವೇಳೆ ಡಿವೈಎಸ್ಪಿ ಮ್ಯಾತುಥಾಮಸ್ ಮಾತನಾಡಿ. ಸಾರ್ವಜನಿಕರು ನಿರ್ಭಯವಾಗಿ ಲೋಕಾಯುಕ್ತರಿಗೆ ದೂರು ಕೊಡಬೇಕು. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲೇ ಆಡಳಿತ ನಡೆಸಬೇಕು. ನಿಗದಿತ ಶುಲ್ಕ ಹೊರತಾಗಿ ಹೆಚ್ಚಿನ ಹಣ ಪಡೆಯಬಾರದು. ಸೇವೆ ಪಡೆದುಕೊಳ್ಳುವ ನೆಪದಲ್ಲಿ ದುರುದ್ದೇಶ ಸಾಧಿಸುವವರ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಡುವಲ್ಲಿ ನಾಗರಿಕರು ಹಿಂಜರಿಯಬಾರದು ಎಂದರು.

ಈ ವೇಳೆ ತಾಪಂ ಇಒ ಉಮೇಶ್ ಮಾತನಾಡಿ, ಹಲಗಾಪುರ ಗ್ರಾಮದಲ್ಲಿ ಕಲುಷಿತ ನೀರು‌ ಕುಡಿದು ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಘಟನೆ ಬೆನ್ನಲೆ ಗ್ರಾಮದ ಓವರೆಡ್ ಟ್ಯಾಂಕ್ ನ ‌ಮೇಲ್ಭಾಗದಲ್ಲಿ ಹಾನಿಯಾಗಿದ್ದ ಮುಚ್ಚಳವನ್ನು ದುರಸ್ಥಿ ಪಡಿಸಲಾಗಿದೆ ಹಾಗೂ ಹಲಗಾಪುರ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳ ಓವರೆಡ್ ಟ್ಯಾಂಕ್ ಶುಚಿತ್ವಕ್ಕೆ ಒತ್ತು ನೀಡಲು ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಲೋಕಾಯುಕ್ತರ ಅಧಿಕಾರಿಗಳ ಗಮನಕ್ಕೆ ತಂದರು. ಸಾರ್ವಜನಿಕರಿಂದ 15 ದೂರುಗಳು ಸ್ವೀಕರಿಸಿದರು.

ಇದೇ ವೇಳೆ ಶಶಿಕುಮಾರ್ ಲೋಹಿತ್ ಕುಮಾರ್ ಸಿಬ್ಬಂದಿ ನಾಗೇಂದ್ರ ಮಹದೇವಸ್ವಾಮಿ ಗೌತಮ್ ಹಾಗೂ ತಾಲೂಕು ತಂಡಾಧಿಕಾರಿ ಗುರುಪ್ರಸಾದ್ ಉಮೇಶ್ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಪ್ರಕಾಶ್ ಆರ್‌ಎಫ್ ಒ ಪ್ರವೀಣ್ ಪಟ್ಟಣದ ಚೆಸ್ಕಾಂ ಎಇಇ ಶಂಕರ್ ಉಪಸ್ಥಿತರಿದ್ದರು.