1141 ಹಿರಿಯರು, 368 ವಿಕಲಚೇತನರು ಮನೆಯಿಂದ ಮತದಾನ

| Published : Apr 27 2024, 01:20 AM IST

ಸಾರಾಂಶ

ಕಳೆದ ಎರಡು ದಿನಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಂದ ಶೇ.96.05 ರಷ್ಟು ಮತದಾನವಾಗಿದೆ.

ಧಾರವಾಡ:

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತ ಕ್ಷೇತ್ರಗಳು ಸೇರಿ 1141 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 368 ವಿಕಲಚೇತನರು ಸೇರಿ ಒಟ್ಟು 1509 ಜನ ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಂದ ಶೇ.96.05 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 1193 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 378 ಜನ ವಿಕಲಚೇತನರು ಸೇರಿ ಒಟ್ಟು 1571 ಜನ ಮತದಾರರು ಮನೆಯಿಂದ ಮತ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬುಧವಾರ ಹಾಗೂ ಗುರುವಾರ ನಡೆದ ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ 1509 ಜನರಿಂದ ಮತದಾನ ಪಡೆಯಲಾಯಿತು.

ಧಾರವಾಡ ವಿಧಾನಸಭಾ ಮತಕ್ಷೇತ್ರದಲ್ಲಿ 148 ಜನ ಹಿರಿಯ ನಾಗರಿಕರು ಮತ್ತು 82 ಜನ ವಿಕಲಚೇತನರು ಸೇರಿ ಒಟ್ಟು 230 ಜನ, ಕುಂದಗೋಳದಲ್ಲಿ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 67 ಹಿರಿಯ ನಾಗರಿಕರು ಮತ್ತು 31 ಜನ ವಿಕಲಚೇತನರು ಸೇರಿ ಒಟ್ಟು 98, ಧಾರವಾಡ ವ್ಯಾಪ್ತಿಯಲ್ಲಿ 267 ಜನ ಹಿರಿಯ ನಾಗರಿಕರು ಮತ್ತು 91 ಜನ ವಿಕಲಚೇತನರು ಸೇರಿ ಒಟ್ಟು 358, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 113 ಹಿರಿಯ ನಾಗರಿಕರು ಮತ್ತು 36 ಜನ ವಿಕಲಚೇತನರು ಸೇರಿ ಒಟ್ಟು 149, ಹು-ಧಾ ಕೇಂದ್ರದಲ್ಲಿ 188 ಹಿರಿಯ ನಾಗರಿಕರು ಮತ್ತು 30 ಜನ ವಿಕಲಚೇತನರು ಸೇರಿ ಒಟ್ಟು 218, ಹು-ಧಾ ಪಶ್ಚಿಮದಲ್ಲಿ 263 ಹಿರಿಯ ನಾಗರಿಕರು ಮತ್ತು 45 ಜನ ವಿಕಲಚೇತನರು ಸೇರಿ ಒಟ್ಟು 308, ಕಲಘಟಗಿ ವ್ಯಾಪ್ತಿಯಲ್ಲಿ 95 ಹಿರಿಯ ನಾಗರಿಕರು ಮತ್ತು 53 ಜನ ವಿಕಲಚೇತನರು ಸೇರಿ ಒಟ್ಟು 148 ಜನ ಮನೆಯಿಂದ ಮತದಾನ ಮಾಡಿದ್ದಾರೆ.

ಮತದಾನಕ್ಕೆ ನೋಂದಾಯಿಸಿಕೊಂಡಿದ್ದರೂ ಮತದಾನದ ಪೂರ್ವದ ದಿನಗಳಲ್ಲಿ 16 ಹಿರಿಯರು ಹಾಗೂ ಓರ್ವ ವಿಕಲಚೇತನ ಮಹಿಳೆ ಸೇರಿ ಒಟ್ಟು 17 ಜನರು ಮತದಾರರು ಮರಣ ಹೊಂದಿದ್ದಾರೆ. ಈ 17 ಸೇರಿ ಒಟ್ಟು 62 ಜನರು ಅನಾರೋಗ್ಯ, ವಲಸೆ ಹಾಗೂ ನೀಡಿದ ವಿಳಾಸ, ಸ್ಥಳದಲ್ಲಿ ಇಲ್ಲದೆ ಇರುವದರಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.