ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶ

| Published : May 10 2024, 01:33 AM IST

ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶ ಲಭಿಸಿದೆ. ಈ ಕುರಿತು ಶಾಲೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎನ್ .ಪಿ. ಮಂಜುನಾಥ ಪ್ರಸನ್ನ ಮಾಹಿತಿ ನೀಡಿ ದ್ದು, ನಮ್ಮ ಶಾಲೆಗೆ ಶೇಕಡ 100ರಷ್ಟು ಫಲಿತಾಂಶ ಲಭಿಸುವ ಮೂಲಕ ವಿದ್ಯಾರ್ಥಿಗಳು, ಪೋಷಕರಲ್ಲಿ ಸಂತಸ ಉಂಟು ಮಾಡಿದೆ.

ಕನ್ನಡಪ್ರಭ ವಾರ್ತೆ, ಕಡೂರು

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ದೀಕ್ಷಾ ಇಂಗ್ಲೀಷ್ ಹೈಸ್ಕೂಲ್ ಶಾಲೆಗೆ ಶೇಕಡ 100 ರಷ್ಟು ಫಲಿತಾಂಶ ಲಭಿಸಿದೆ. ಈ ಕುರಿತು ಶಾಲೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎನ್ .ಪಿ. ಮಂಜುನಾಥ ಪ್ರಸನ್ನ ಮಾಹಿತಿ ನೀಡಿ ದ್ದು, ನಮ್ಮ ಶಾಲೆಗೆ ಶೇಕಡ 100ರಷ್ಟು ಫಲಿತಾಂಶ ಲಭಿಸುವ ಮೂಲಕ ವಿದ್ಯಾರ್ಥಿಗಳು, ಪೋಷಕರಲ್ಲಿ ಸಂತಸ ಉಂಟು ಮಾಡಿದೆ.ಈ ಭಾರಿ ನಮ್ಮ ಶಾಲೆಯ 88 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 36 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 35 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಹಾಗೂ ನಾಲ್ವರು ಉತ್ತೀರ್ಣರಾಗಿದ್ದಾರೆ. ಪಟ್ಟಣದ ಪ್ರದೀಪ್ ಹಾಗು ಶಾಂತಕುಮಾರಿ ಪುತ್ರಿ ಅಲ್ಲೂರಿ ವರುಣಾ.ವಿ ಶೇ 96.32% ರಷ್ಟು ಫಲಿತಾಂಶ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ಎನ್.ನಟರಾಟ್ ಮತ್ತು ಕೋಮಲ ಅವರ ಪುತ್ರ ರಜತ್ ಎಂ.ಎನ್. ಶೇ 96.32ರಷ್ಟು ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಜಪ್ಪ ಮಧುರವರ ಪುತ್ರ ಜೀವನ್ ಆರ್ ನಿರ್ವಾಣಿ 95.04ರಷ್ಟು ಫಲಿತಾಂಶ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಲೋಕೇಶ್ ಪುಷ್ಪಾವತಿ ಅವರ ಪುತ್ರ ದೀಕ್ಷಿತ್ ಎಲ್. ಶೇ 94 .24 ರಷ್ಟು ಫಲಿತಾಂಶ ಪಡೆದು ನಾಲ್ಕನೇ ಸ್ಥಾನ ಗಳಿಸಿದ್ದಾರೆ ಎಂದರು.ಉಳಿದಂತೆ ಶಾಲೆ ವಿದ್ಯಾರ್ಥಿಗಳಾದ ರೋಹನ್ ಕೆ.ಎಸ್.ಶೇ. 93.44, ಲಿಖಿತ್ ಕೆ.ವಿ.ಶೇ. 92.80,, ಚಿನ್ಮಯ್ ಎಸ್.ಶೇ. 91.84, ಎಂ ಡಿ.ಯಾಸೀನ್ ಶೇ.91.52, ಸ್ಪಂದನ ಕೆ.ವಿ ಶೇ. 91.36, ತೇಜಸ್ವಿನಿ ಶೇ. 91.20, ನಿಧಿ ಶ್ರೀ, ಶೇ. 90.08 ಹಾಗೂ ಕಿಶನ್ ಎಸ್ ಕೆ ಶೇ.90 ರಷ್ಟು ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಲಭಿಸಿಲು ಕಾರಣರಾಗಿದ್ದಾರೆ ಎಂದರು.ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶಿಕ್ಷಕರು ಪೋಷಕರು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೆ ಎನ್ ರಾಜಣ್ಣ ಉಪಾಧ್ಯಕ್ಷ ಡಿ. ಪ್ರಶಾಂತ್, ಶಾಲೆ ಪ್ರಾಂಶುಪಾಲ ನವೀನ್ ಡಿ ಅಲ್ಮೆಡಾ, ಶಾಲೆಯ ಬೋಧಕ ಮತ್ತು ಭೋಧಕೇತರ ವರ್ಗ ವಿದ್ಯಾರ್ಥಿ ಗಳನ್ನು ಅಭಿನಂದಿಸಿದೆ.

9 ಕೆ ಕೆ ಡಿ ಯು1 ಅಲ್ಲೂರಿ ವರುಣಾವಿ,

9ಕೆಕೆಡಿಯು1ಎ. ರಜತ್ ಎಂ.ಎನ್.

9ಕೆಕೆಡಿಯು1ಬಿ. ಜೀವನ್ ಆರ್ ನಿರ್ವಾಣಿ.

9 ಕೆಕೆಡಿಯು1ಸಿ. ದೀಕ್ಷಿತ್.